ಜು.21, ಬೇಗೂರಿನಲ್ಲಿ ರಕ್ತದಾನ ಶಿಬಿರ
ಚಾಮರಾಜನಗರ

ಜು.21, ಬೇಗೂರಿನಲ್ಲಿ ರಕ್ತದಾನ ಶಿಬಿರ

July 19, 2018

ಬೇಗೂರು: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜು.21ರ ಶನಿವಾರ ಬೆಳಿಗ್ಗೆ 10ಗಂಟೆಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ಓಂ ಶ್ರೀನಿಕೇತನ ಟ್ರಸ್ಟ್‍ನ ಎಲ್.ಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ವಿಶ್ವ ರಕ್ತ ದಾನಿಗಳ ದಿನದ ಪ್ರಯುಕ್ತ ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. 40 ವರ್ಷದ ತನಕ ಮಹಿಳೆಯರಿಗೆ ಹೆಚ್ಚು ಹೃದಯಾಘಾತ ಆಗುವುದಿಲ್ಲ. ವೈದ್ಯ ಕೀಯದ ಪ್ರಕಾರ ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡುವುದ ರಿಂದ ಹೃದಯಾಘಾತದಿಂದ ಸುರಕ್ಷಿತವಾಗಿರ ಬಹುದು ಹಾಗೂ ಒಂದು ಜೀವ ಉಳಿ ಸುವ ಕಾಯಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕ ನಟರಾಜು, ಸೋಮಶೇಖರ್, ಪಟೇಲ್ ಶಾಂತರಾಜಯ್ಯ, ತಾಪಂ ಸದಸ್ಯ ಮಲ್ಲಿ ದಾಸ್, ಹೆಚ್.ಜಿ.ನಾರಾಯಣಸ್ವಾಮಿ, ಪ್ರತಿಧ್ವನಿ ವೇಧಿಕೆಯ ಮಂಜುಕುಮಾರ್, ರಾಮು, ಶ್ರೀನಿವಾಸ್, ಸುರೇಶ್, ಲಲಿತಾ ಕುಮಾರಿ, ರುಕ್ಮಾಂಗದ, ರಿಯಾಜ್‍ಪಾಷಾ, ಗುರುಸ್ವಾಮಿ, ರಮೇಶ್‍ಬೇಗೂರು ಸೇರಿ ದಂತೆ ಮತ್ತಿತರರು ಹಾಜರಿದ್ದರು.

Translate »