ರಕ್ತದಾನ ಶಿಬಿರ ಮೂಲಕ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ
ಮೈಸೂರು

ರಕ್ತದಾನ ಶಿಬಿರ ಮೂಲಕ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ

December 7, 2018

ಬೇಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವನ್ನು ಉಚಿತ ರಕ್ತದಾನ ಶಿಬಿರ, ಕಣ್ಣಿನ ಹಾಗೂ ರಕ್ತ ದೊತ್ತಡ, ಮಧುಮೇಹ ತಪಾಸಣೆ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಬೇಲೂರು ತಾಲೂಕು ಘಟಕ, ಡಾ.ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸುವುದು ಶ್ಲಾಘನೀಯವಾದ ಕೆಲಸವಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್‍ರವರ ಪರಿ ನಿಬ್ಬಾಣದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಬೇಲೂರು ತಾಲೂಕು ಘಟಕ ಹಾಗೂ ಡಾ.ಅಂಬೇಡ್ಕರ್ ಯುವಕ ಸಂಘದಿಂದ ಪಟ್ಟಣದ ಅಂಬೇಡ್ಕರ್ ನಗರದ ಸಮು ದಾಯ ಭವನದಲ್ಲಿ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಅವರು ಸಂವಿ ಧಾನದ ಮೂಲಕ ಎಲ್ಲಾ ಸಮುದಾಯದ ವರಿಗೂ ಸಮಾನವಾದ ಕೊಡುಗೆ ನೀಡಿ ದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‍ರವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ದಲ್ಲಿ ಮುಂದೆ ಬರಬೇಕು ಎಂದರು.

ನಂತರ ಮಾತನಾಡಿದ ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್, ಡಾ.ಬಿ. ಆರ್.ಅಂಬೇಡ್ಕರ್‍ರವರು ತಳ ಸಮು ದಾಯಗಳನ್ನು ಮೇಲೆತ್ತುವ ಕೆಲಸಗಳನ್ನು ಮಾಡಿದ್ದಲ್ಲದೆ, ಮಹಿಳೆಯರ, ಕಾರ್ಮಿ ಕರ ಶೋಷಿತರ ಪರವಾಗಿ ಹೋರಾಟ ನಡೆಸಿ ಹಕ್ಕುಗಳನ್ನು ತಂದು ಕೊಟ್ಟವರು ಎಂದರು. ನಂತರ ಮಾತನಾಡಿದ ಕರ್ನಾ ಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಬಿ.ಎಲ್.ಲಕ್ಷ್ಮಣ್, ಡಾ.ಬಿ.ಆರ್.ಅಂಬೇ ಡ್ಕರ್‍ರವರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಶೋಷಿತ ಸಮುದಾಯ ಗಳು ಮುಂದೆ ಬರಬೇಕು ಎಂದರು. ಅವರ ಆಶಯದಂತೆ ಶೋಷಿತರು ವಿದ್ಯಾವಂತರಾಗಿ ಸಂಘಟಿತರಾಗಿ ತಮ್ಮ ಹಕ್ಕು ಗಳನ್ನು ಪಡೆಯಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಲತಾ ಮಂಜೇಶ್ವರಿ, ತಾಪಂ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷೆ ಕಮಲ ಚಿಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸದಸ್ಯ ಮಂಜು ನಾಥ್, ದಸಂಸ ತಾಲೂಕು ಸಂಚಾಲಕ ರವಿಕುಮಾರ್, ಹೊಯ್ಸಳ, ವಸಂತ ಕುಮಾರ್, ನಿಂಗರಾಜು, ಪ್ರವೀಣ್, ಧರ್ಮಯ್ಯ, ವೆಂಕ ಟೇಶ್, ಸಿದ್ದರಾಜು, ಕಿರಣ್, ಅಂಬೇಡ್ಕರ್ ಯುವಕ ಸಂಘದ ಚಂದ್ರಯ್ಯ, ಕುಮಾರ್, ಜಗಣ್ಣ, ರಾಮು, ಮಲ್ಲಿಕಾರ್ಜುನ ಇನ್ನಿತರರಿದ್ದರು. ಕಾರ್ಯಕ್ರಮದಲ್ಲಿ 35ಕ್ಕು ಹೆಚ್ಚು ಜನರು ರಕ್ತದಾನ ಮಾಡಿದರು.

Translate »