ರಾಮನಾಥಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ 2.62 ಕೋಟಿ ರೂ. ಮಂಜೂರು: ಶಾಸಕ ಎ.ಟಿ.ರಾಮಸ್ವಾಮಿ
ಹಾಸನ

ರಾಮನಾಥಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ 2.62 ಕೋಟಿ ರೂ. ಮಂಜೂರು: ಶಾಸಕ ಎ.ಟಿ.ರಾಮಸ್ವಾಮಿ

December 7, 2018

ರಾಮನಾಥಪುರ: ಇಲ್ಲಿಯ ಕೆಎಸ್‍ಅರ್‍ಟಿಸಿ ನೂತನ ಬಸ್ ನಿಲ್ದಾಣ, ಸಾರಿಗೆ ಘಟಕ ನಿರ್ಮಾಣಕ್ಕೆ 2 ಕೋಟಿ 62 ಲಕ್ಷ ರೂ ಮಂಜೂರಾಗಿದ್ದು ಕಾಮ ಗಾರಿ ಇಂದಿನಿಂದಲೇ ಪ್ರಾರಂಭವಾಗಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಸೂಚಿಸಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಸಾರಿಗೆ ಬಸ್ ನಿಲ್ದಾಣ 4 ಕಡೆಗೆ ಹೋಗುವ ಮುಖ್ಯ ಸರ್ಕಲ್ ಹೊಂದಿದ್ದು ಇಲ್ಲಿಂದ ಮಡಿಕೇರಿ, ಹಾಸನ, ಮೈಸೂರು, ಬೆಂಗ ಳೂರು ಮತ್ತು ಪಿರಿಯಾಪಟ್ಟಣ ಮಾರ್ಗ ಕೇರಳಕ್ಕೆ ಹೋಗುವ ಬಸ್ ನಿಲ್ದಾಣ ಚಿಕ್ಕದಾಗಿದ್ದು, ಸುಸಜ್ಜಿತವಾದ ಬಸ್ ನಿಲ್ದಾಣವನ್ನು ಇಲ್ಲಿ ನಿರ್ಮಿಸಲಾಗುವುದು. ಇದರ ಆವರಣದಲ್ಲಿ ವಿವಿಧ ಸೌಲಭ್ಯ ಗಳಿಗೆ ಮತ್ತೆ 1 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ರಾಮನಾಥಪುರ ಬಸ್ ನಿಲ್ದಾಣದಲ್ಲಿ ರುವ ಶೌಚಾಲಯದ ನೀರು ಚರಂಡಿ ಮುಖಾಂತರ ಕಾವೇರಿ ನದಿಗೆ ಸೇರುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಶೌಚಾ ಲಯದ ನೀರು ಹೋಗದಂತೆ ಮಾಡಲು ಹೊಸದಾಗಿ ಶೌಚಾಲಯಕ್ಕೆ ಇಂಗು ಏರ್‍ಸಿಂಕ್ (ಗ್ಯಾಸ್‍ಮಿಷನ್) ಅಳವಡಿಸಲು ಕ್ರಮ ಕೈಗೊಂಡರೆ ನದಿಗೆ ಹೋಗುವ ಶೌಚಾಲಯದ ನೀರನ್ನು ನಿಲ್ಲಿಸ ಬಹುದು ಎಂದು ಸಾರಿಗೆ ಸಂಸ್ಥೆ ಚೀಫ್ ಇಂಜಿನಿಯರ್ ಎಸ್.ಜಗದೀಶ್ ಚಂದ್ರು ತಿಳಿಸಿದರು. ಅರಕಲಗೂಡು ಪಟ್ಟಣದ ಅನಕೃ ವೃತ್ತದ ಸರ್ಕಲ್‍ನಲ್ಲಿ 6 ರಸ್ತೆಗಳು ಒಂದೇ ಜಾಗ ದಲ್ಲಿ ಸೇರಲಿದ್ದು, ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲ ಕ್ಕಾಗಿ ಅತ್ಯಾಧು ನಿಕ ಪ್ರಯಾಣಿಕರ ತಂಗು ದಾಣ, ವಾಣಿಜ್ಯ ಮಳಿಗೆಗಳು, ಶೌಚಾಲಯ ಗಳಿಗೆ 1.3 ಕೋಟಿ ಅಂದಾಜು ಪಟ್ಟಿ ತಯಾ ರಿಸಿ ಅನು ಮೋದನೆಗೆ ಕಳುಹಿಸ ಲಾಗಿದೆ ಎಂದರು.

ಸಾರಿಗೆ ಸಂಸ್ಥೆ ಚೀಫ್ ಇಂಜಿನಿಯರ್ ಎಸ್. ಜಗದೀಶ್ ಚಂದ್ರು, ಕಾರ್ಯ ನಿರ್ವಾಹಕ ಅಭಿಯಂತರ ಪಿ.ಇ.ಪಾಲನೇತ್ರ ನಾಯ್ಕ್, ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಜಿ.ಕೃಷ್ಣಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕ ದೇವರಾಜೇಗೌಡ ಇತರರಿದ್ದರು.

Translate »