ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ
ಚಾಮರಾಜನಗರ

ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ

July 17, 2018

ಬೇಗೂರು:  ರಂಗೂ ಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಜಯ ಭೇರಿ ಬಾರಿಸಿದ್ದು, ಕಾಂಗ್ರೆಸ್ ಬೆಂಬಲಿ ಗರು ಎಲ್ಲಾ ಕ್ಷೇತ್ರಗಳಲ್ಲಿ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದ್ದಾರೆ.

ಬ್ಯಾಂಕ್ ಕಚೇರಿಯಲ್ಲಿ ನಡೆದ ಚುನಾವಣೆ ಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿ ಗರು ಗೆದ್ದರೆ, 12 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿಗರು ಸೋಲು ಕಂಡಿದ್ದಾರೆ. ಬ್ಯಾಂಕ್‍ನ ಮಾಜಿ ಅಧ್ಯಕ್ಷ ಆರ್.ಎಸ್.ನಾಗರಾಜು, ಆರ್.ಎಸ್.ರಾಜು, ವೈ.ಎಚ್.ಸಿದ್ದನಾಯಕ, ಸಿದ್ದಯ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್.ಪಿ.ಲಿಂಗಣ್ಣ ಸೋಲು ಕಂಡ ಪ್ರಮು ಖರಾಗಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿ ಬೆಂಬಲಿಗರ ಪ್ರತಿಷ್ಠೆ ಕಣವಾಗಿದ್ದ ಈ ಚುನಾವಣೆಯಲ್ಲಿ ಬ್ಯಾಂಕ್ ಇತಿಹಾಸ ದಲ್ಲೇ ಇದೇ ಮೊದಲ ಬಾರಿಗೆ ಪಿಎಸಿಸಿ ಆಡಳಿತ ಕಾಂಗ್ರೆಸ್ ಪಾಳೆಯದಿಂದ ಬಿಜೆಪಿ ತೆಕ್ಕೆಗೆ ಬಂದಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಆರ್.ಕೆ.ಚಿಕ್ಕಮಹದೇವಪ್ಪ, ಸಾಲಗಾರರ ಕ್ಷೇತ್ರದಿಂದ ಆರ್.ಎನ್. ನಟರಾಜು, ಆರ್.ಎನ್.ಸಿದ್ದಪ್ಪ, ಆರ್.ರೇಣುಕಾಪ್ರಸಾದ್, ಶಿವಮ್ಮ, ಮಹದೇವೇಗೌಡ, ಗೀತಾನಂದೀಶ್, ಪಿ.ಮಹದೇವಪ್ಪ, ಬಸವ ರಾಜು, ಶಾಂತ, ಲಿಂಗನಾಯಕ, ಪುಟ್ಟ ಸ್ವಾಮಿಚಾರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿಗರು ಜಯಭೇರಿ ಬಾರಿಸುತ್ತಿದ್ದಂತೆಯೇ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನೀಲ್ ಆಗಮಿಸಿ ನೂತನ ನಿರ್ದೇಶಕರನ್ನು ಸನ್ಮಾನಿಸಿದರು. ಹೊರೆಯಾಲ ಗ್ರಾಪಂ ಉಪಾಧ್ಯಕ್ಷ ಆರ್.ಜಿ. ನಾಗರಾಜು ನೂತನ ನಿರ್ದೇಶಕರನ್ನು ಅಭಿನಂದಿಸಿದರು. ಈ ವೇಳೆ ಎಚ್.ಎಂ. ಮಹೇಶ್, ಜಯರಾಂ, ಆರ್.ಎಸ್. ಪುಟ್ಟಸ್ವಾಮಿ, ದೊಡ್ಡಹುಂಡಿ ನಟರಾಜು, ಡಿ.ಎಂ.ಸತೀಶ್, ಕರೀಗೌಡ, ಕಚ್ಚೆಸಿದ್ದ ರಾಜು, ಮಹೇಶ್‍ಸಿಂಗ್, ಲಾಯರ್ ಸೇರಿ ದಂತೆ ಹಲವಾರು ಮಂದಿ ಇದ್ದರು.

Translate »