ಗುಂಡ್ಲುಪೇಟೆ: ಸರ್ಕಾರದ ಅನುದಾನವಿಲ್ಲದೆ ದಾನಿಗಳ ನೆರನಿಂದ ನಡೆಯುತ್ತಿರುವ ಪಟ್ಟಣದ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಉದ್ಯಮಿ ಯೊಬ್ಬರು ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಕಳೆದ 9 ವರ್ಷಗಳಿಂದ ಪೃಥ್ವಿ ವುಮೆನ್ ಅಂಡ್ ರೂರಲ್ ಡೆವಲಪ್‍ಮೆಂಟ್ ಆರ್ಗ ನೈಜೇಷನ್ ವತಿಯಿಂದ ಪಟ್ಟಣದ ಅರಳೀ ಕಟ್ಟೆ ಬೀದಿಯಲ್ಲಿ ನಡೆಸುತ್ತಿರುವ ಬುದ್ಧಿ ಮಾಂದ್ಯ ಮಕ್ಕಳ ಈ ವಿಶೇಷ ಶಾಲೆಯಲ್ಲಿ ಮಕ್ಕಳು ಹಾಗೂ ವಯಸ್ಕರೂ ಸೇರಿದಂತೆ ಸುಮಾರು 27 ಜನರಿದ್ದಾರೆ.
ಇದಕ್ಕೆ ಸರ್ಕಾರದ ವಿವಿಧ ಅಂಗ ಸಂಸ್ಥೆ ಗಳಿಂದ ನೆರವು ಪಡೆಯಲು ಸಾಹಸ ಮಾಡುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಹಿರಿಯ ನಾಗರೀಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯು ಮಾಸಿಕ 20 ಸಾವಿರ ರೂಪಾಯಿ ನೀಡಲು ಮುಂದೆ ಬಂದಿದೆ. ಇದರ ನಿಯಮಾವಳಿ ಪ್ರಕಾರ ಶಾಲೆಗೆ ಸಿಸಿ ಕ್ಯಾಮೆರಾ ಹಾಗೂ ಬಯೋ ಮೆಟ್ರಿಕ್ ಅಳವಡಿಸುವುದು ಕಡ್ಡಾ ಯವಾಗಿದೆ. ಆದರೆ ಶಾಲೆಯ ನಿರ್ವಹಣೆಯೇ ದುಬಾರಿಯಾಗಿದ್ದು, ಇವುಗಳ ಅಳವಡಿಕೆ ಸಾಧ್ಯವಾಗದೆ ತೊಂದರೆಯಾ ಗಿತ್ತು. ಈ ಬಗ್ಗೆ ವಿಷಯ ತಿಳಿದ ತಾಲೂಕಿನ ಹಿರಿಕಾಟಿ ಗ್ರಾಮದ ಎಸ್.ಎಲ್.ವಿ.ಫೌಂಢೇ ಷನ್ ಸಂಸ್ಥಾಪಕ ಮತ್ತು ಉದ್ಯಮಿ ಯಶ ವಂತಕುಮಾರ್ ಮಂಗಳವಾರ ಶಾಲೆಗೆ ಭೇಟಿ ನೀಡಿ ಬುದ್ದಿಮಾಂದ್ಯ ಮಕ್ಕಳ ಆರೋಗ್ಯ ಮತ್ತು ಶಾಲೆಯ ಪರಿಸರವನ್ನು ನೋಡಿ ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ.
ಕೂಡಲೇ ಶಾಲೆಗೆ ಅನುದಾನ ಪಡೆ ಯಲು ಅಗತ್ಯವಾದ 6 ಸಿಸಿ ಕ್ಯಾಮೆರಾ ಗಳು ಹಾಗೂ ಬಯೋಮೆಟ್ರಿಕ್ ಅಳವಡಿಸಿ ಕೊಡಲು ಮುಂದಾಗಿದ್ದಾರೆ. ಅಲ್ಲದೆ ಶಾಲೆಯ ಮಾಸಿಕ ಬಾಡಿಗೆ ಮತ್ತು ಊಟ ತಿಂಡಿಯ ನಿರ್ವಹಣೆಗಾಗಿ ಪ್ರತಿ ತಿಂಗಳು 20 ಸಾವಿರ ರೂ.ಗಳನ್ನು ಮತ್ತು ಶಾಲೆಗೆ ಅಗತ್ಯವಿರುವ ಎರಡು ಶೌಚಾಲಯವನ್ನು ಕಟ್ಟಿಸಿ ಕೊಡಲು ಸಮ್ಮತಿಸಿ ಮಾಸಿಕ ನಿರ್ವಹಣೆಯ ಧನ ಸಹಾಯವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರಾದ ಸೋಮ ಶೇಖರ್, ರಾ.ಬಾಬು, ಕೆ.ಎನ್.ಮಹದೇವ ಸ್ವಾಮಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ಮತ್ತು ಶಿಕ್ಷಕರು ಹಾಜರಿದ್ದರು.