ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ
ಚಾಮರಾಜನಗರ

ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ

July 10, 2018

ಬೇಗೂರು:  ‘ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದ್ದು, ಪಕ್ಷದ ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು’ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ಸಮೀಪದ ಕುರುಬರಹುಂಡಿ ಗ್ರಾಮ ದಲ್ಲಿ ಸೋಮವಾರ ಬಿಜೆಪಿ ಕಾರ್ಯ ಕರ್ತರು ಏರ್ಪಡಿಸಿದ್ದ ಅಭಿನಂದನಾ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಇನ್ನೂ ಮೂಲ ಸೌಲಭ್ಯಗಳ ಕೊರತೆಯಿದೆ. ಇದನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಹೋದಾಗ ಆಯಾಯ ಗ್ರಾಮಗಳ ಸಮಸ್ಯೆಯನ್ನು ಪಟ್ಟಿ ಮಾಡಿ ದ್ದೇನೆ. ಅವುಗಳನ್ನು ಆದ್ಯತೆ ಮೇರೆಗೆ ಕೆಲಸ ಮಾಡಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಪ್ರಸ್ತುತ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸಂಪೂರ್ಣವಾಗಿಲ್ಲ. ಇದು ನನಗೆ ದೊಡ್ಡ ಸವಾಲಾಗಿದೆ. ಕ್ಷೇತ್ರದಲ್ಲಿ ಎಸ್‍ಸಿ, ಎಸ್‍ಟಿ ಬೀದಿಗಳಲ್ಲಿ ನನ್ನ ಅಧಿಕಾರವಧಿಯಲ್ಲಿ ಕೆಲಸ ಪೂರ್ಣಗೊಳಿಸುವೆ ಎಂದರು.

ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನಾನು ಶಾಸಕನಾದ ಬಳಿಕ ಹೆಚ್ಚಿನ ಗಮನ ನೀಡಿದ್ದೇನೆ. ಕಾಡಂಚಿನ ಗ್ರಾಮಗಳ ಮುಂದಿನ ದಿನಗಳಲ್ಲಿ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಮುಖಂಡ ಕೆ.ಆರ್.ಲೋಕೇಶ್ ಮಾತನಾಡಿ, 24ವರ್ಷಗಳ ಕಾಲ ಅಭಿ ವೃದ್ಧಿ ಕೆಲಸಗಳಾಗಿವೆ. ಆದರೂ, ಅವು ಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ನೂತನ ಶಾಸಕರು ಗ್ರಾಮದಲ್ಲಿ ಸಾಗುವಳಿ ಕೊಡಿಸಿ, ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಸೇರಿಸಬೇಕು. ಗ್ರಾಮದ ಡೇರಿ ಕಟ್ಟಡಕ್ಕೆ ಸರ್ಕಾರಿ ಜಾಗ ಕೊಡಿಸ ಬೇಕು ಹಾಗೂ ಗ್ರಾಮವನ್ನು ದಾಖಲೆ ಗ್ರಾಮ ವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಶ್ರೀಕಂಠಪ್ಪ, ತಾಲೂಕು ಪಂಚಾಯಿತಿ ಸದಸ್ಯ ಕೆ.ಪ್ರಭಾಕರ್, ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ಮಾಜಿ ಸದಸ್ಯ ರಾದ ಕೆ.ಎಲ್.ರವಿಕುಮಾರ್, ಜಯರಾಂ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ಮಹೇಶ್, ಓಂಕಾರ ಅರಣ್ಯಾಧಿಕಾರಿ ಎನ್.ಪಿ.ನವೀನ್‍ಕುಮಾರ್, ಮುಖಂಡ ರಾದ ಆಲತ್ತೂರು ರಾಜೇಶ್, ಎಚ್.ಎಲ್. ಶಿವಬಸಪ್ಪ, ಸೋಮಣ್ಣ, ಹೊರೆಯಾಲ ಕೃಷ್ಣ, ಚಿಕ್ಕಾಟಿ ಬಸವರಾಜು, ಎಸ್‍ಎಂಎಸ್ ಹಿರೇಮಠ್, ಅಗತಗೌಡನಹಳ್ಳಿ ಬಸವರಾಜು, ಕೆ.ಪಿ.ಶಿವರಾಜು, ನಂಜುಂಡಸ್ವಾಮಿ, ರಮೇಶ್, ಕೆ.ಪಿ.ರುದ್ರೇಶ್, ಕೆ.ಪಿ.ಬಾಲು ಇದ್ದರು.

Translate »