ಜುಲೈ 26, ಗುಂಡ್ಲುಪೇಟೆಯಲ್ಲಿ ಪತ್ರಿಕಾ ದಿನಾಚರಣೆ
ಚಾಮರಾಜನಗರ

ಜುಲೈ 26, ಗುಂಡ್ಲುಪೇಟೆಯಲ್ಲಿ ಪತ್ರಿಕಾ ದಿನಾಚರಣೆ

July 10, 2018

ಗುಂಡ್ಲುಪೇಟೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 26ರಂದು ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಂಘದ ಅಧ್ಯಕ್ಷ ರಾ. ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾ ಯಿತು. ಜು.26ರ ಗುರುವಾರದಂದು ಪಟ್ಟಣದಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ನಡೆಸು ವುದರೊಂದಿಗೆ ಈ ಬಾರಿಯ ಪತ್ರಿಕಾ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡು ವಂತೆ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತು.

ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತು ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾಪಂ ಅಧ್ಯಕ್ಷ ಜಗದೀಶ್‍ಮೂರ್ತಿ ಸೇರಿದಂತೆ ಜಿಪಂ ಸದಸ್ಯರು ಪತ್ರಿಕಾ ದಿನಾಚರಣೆಯಲ್ಲಿ ಭಾಗ ವಹಿಸಲಿದ್ದಾರೆ.

ಸಭೆಯಲ್ಲಿ ಸಂಘದ ನಿರ್ದೇ ಶಕರಾದ ಸೋಮಶೇಖರ್, ಕೆ.ಎನ್.ಮಹ ದೇವಸ್ವಾಮಿ, ರಾಜಗೋಪಾಲ್, ಕೃಷ್ಣ, ಗೋಪಾಲ ಸ್ವಾಮಿ, ಚಿಕ್ಕತುಪ್ಪೂರು ಎಂ.ಮಲ್ಲು, ವೀರೇಂದ್ರ ಪ್ರಸಾದ್, ಗುರು, ಅಂಕಹಳ್ಳಿ ವೀರಭದ್ರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »