ದುಗ್ಗಹಟ್ಟಿ, ಯರಗಂಬಳ್ಳಿ ಗ್ರಾಪಂಗಳ ವಸತಿ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ
ಚಾಮರಾಜನಗರ

ದುಗ್ಗಹಟ್ಟಿ, ಯರಗಂಬಳ್ಳಿ ಗ್ರಾಪಂಗಳ ವಸತಿ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ

July 10, 2018

ಯಳಂದೂರು: ‘ತಾಲೂಕಿನ ವ್ಯಾಪ್ತಿಯ ದುಗ್ಗ ಹಟ್ಟಿ, ಯರಗಂಬಳ್ಳಿ ಗ್ರಾಮ ಪಂಚಾಯಿತಿ ಗಳಲ್ಲಿ ಆಶ್ರಯ ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ವಸತಿ ಯೋಜನೆಯಡಿ ಹಂಚಿಕೆ ಯಾಗಿರುವ ವಸತಿಗಳಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿತು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಗೆ ಸೋಮವಾರ ಭೇಟಿ ನೀಡಿದ ದಸಂಸ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾ ಯಿತಿಯಲ್ಲಿ ಬಡವರಿಗೆ ಹಂಚಿಕೆಯಾಗ ಬೇಕಿದ್ದ ಮನೆಗಳು ಅನ್ಯ ವ್ಯಕ್ತಿಗಳ ಹೆಸರಿಗೆ ಮನೆ ನಿರ್ಮಿಸದೆ ಬಿಲ್ ಪಾವತಿ ಮಾಡಿ ದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಕ್ತ ದಾಖಲಾತಿ ಸಲ್ಲಿಸಿದರೂ, ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿಲ್ಲ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಯರಿಯೂರು ರಾಜಣ್ಣ ಆರೋ ಪಿಸಿದರು. ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮಣ ಕಪ್ಪಣ್ಣ ಅವರೇ ಗ್ರಾಮ ಪಂಚಾಯಿತಿಯಲ್ಲಿ ಮನೆಗಳು ಹಗರಣವಾಗಿರುವ ಬಗ್ಗೆ ಮಾಹಿತಿ ನೀಡಿ ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳು ಮತ್ತು ನಿಗಮಕ್ಕೆ ಪತ್ರ ಬರೆದರು ಯಾವುದೇ ಕ್ರಮ ಜರುಗಿಸಲು ಅಧಿಕಾರಿ ಗಳು ಮುಂದಾಗಿಲ್ಲ ಎಂದು ದೂರಿದರು.

ರೈತ ಸಂಘದ ಮುಖಂಡ ವೈ.ಸಿ. ಪ್ರಕಾಶ್ ಮಾತನಾಡಿ, ರಾಜಕೀಯ ಒತ್ತಡಕ್ಕೆ ಮಣಿದು ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದ ಅವರು, ಯರಗಂಬಳ್ಳಿ ಗ್ರಾಮ ಪಂಚಾಯಿತಿ ಯಲ್ಲಿಯೂ ಮನೆಗಳ ಹಂಚಿಕೆಯ ವಿಚಾರ ದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಇಓ ರಾಜು ಮಾತನಾಡಿ, ಸೂಕ್ತ ತನಿಖೆ ನಡೆಸು ವುದಾಗಿ ಭರವಸೆ ನೀಡಿದರು. ಈ ವೇಳೆ ಮುಖಂಡರಾದ ವೈ.ಕೆ.ಮೋಳೆ ಪರಶಿವ ಮೂರ್ತಿ, ಯರಿಯೂರು ರಾಜಣ್ಣ, ದುಗ್ಗಹಟ್ಟಿ ಮಹೇಶ್ ಹಾಜರಿದ್ದರು.

Translate »