ಬೇಗೂರು:ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ ಓಂಕಾರ್ ಅರಣ್ಯ ವಲಯದಿಂದ ಆಹಾರ ಹುಡುಕಿ ಬಂದಿದ್ದ ಎರಡು ವರ್ಷದ ಗಂಡು ಜಿಂಕೆಗೆ ಅಪರಿಚಿತ ವಾಹನ ವೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯ ಅರೇಪುರ ಸಮೀಪ ಶನಿವಾರ ಬೆಳಿಗ್ಗೆ ನಡೆದಿದೆ.
ರಸ್ತೆ ದಾಟುವಾಗ ಅಪರಿಚಿತ ವಾಹನ ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕಿಯ ಕಾಲಿಗೆ ಪೆಟ್ಟಾಗಿ ರಸ್ತೆ ಬದಿಯಲ್ಲಿ ಅಸ್ವಸ್ಥವಾಗಿ ಕುಳಿತಿದ್ದನ್ನು ಗಮನಿಸಿದ ದಾರಿ ಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆರ್‍ಎಫ್‍ಒ ಎನ್.ಪಿ.ನವೀನ್ ಕುಮಾರ್, ಡಿಆರ್‍ಎಫ್‍ಒ ಮೈಲಾರಪ್ಪ ಅವರು ಜಿಂಕೆಗೆ ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.