ಮೇಲುಕಾಮನಹಳ್ಳಿಗೆ ಬಂಡೀಪುರ ಸಫಾರಿ ಕೌಂಟರ್ ಸ್ಥಳಾಂತರ
ಮೈಸೂರು

ಮೇಲುಕಾಮನಹಳ್ಳಿಗೆ ಬಂಡೀಪುರ ಸಫಾರಿ ಕೌಂಟರ್ ಸ್ಥಳಾಂತರ

June 3, 2019

ಬಂಡೀಪುರ: `ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ’ ಮೇರೆಗೆ ಬಂಡೀಪುರ ಕ್ಯಾಂಪಸ್ ನಿಂದ ಮೇಲುಕಾಮನಹಳ್ಳಿ ಬಳಿ ಸ್ಥಳಾಂತರ ಗೊಂಡ ಸಫಾರಿ ವ್ಯವಸ್ಥೆಯನ್ನು ಭಾನುವಾರ ಶಾಸಕ ನಿರಂಜನಕುಮಾರ್ ಚಾಲನೆ ನೀಡಿದರು.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಿಂದ ಬಂಡೀ ಪುರ ವಲಯದ ಕ್ಯಾಂಪಸ್‍ನಲ್ಲಿ ಸಫಾರಿ ವ್ಯವಸ್ಥೆ ಕಾರ್ಯಾಚರಿಸುತ್ತಿತ್ತು. ಅರಣ್ಯದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67(181)ಗೆ ಹೊಂದಿಕೊಂಡಂತೆ ಸಫಾರಿ ಕ್ಯಾಂಪಸ್ ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿ ದ್ದಂತೆ 1992ರಲ್ಲಿ ಹೊಸ ಸಫಾರಿ ಕೌಂಟರ್ ನಿರ್ಮಿಸಿ, ಸಫಾರಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಕೆಲ ವರ್ಷ ಗಳಿಂದ ಸಫಾರಿಗೆ ಬರುವವರಿಗಿಂತ ಕ್ಯಾಂಪಸ್ ನಲ್ಲಿ ಸಮಯ ದೂಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣೆಗೆ ತೊಡಕಾ ಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಐದಾರು ವರ್ಷದ ಹಿಂದೆಯೇ ಸಫಾರಿ ವ್ಯವಸ್ಥೆ ಅರಣ್ಯ ಪ್ರದೇಶ ದಿಂದ ಹೊರಗೆ ಸ್ಥಳಾಂತರಿಸಬೇಕೆಂದು ನಿರ್ಧ ರಿಸಲಾಗಿತ್ತು. ಅಲ್ಲದೆ ಈ ಹಿಂದೆ ಇದ್ದ ಸಫಾರಿ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಹೊಸ ದಾಗಿ ಸಫಾರಿ ಕೇಂದ್ರ ಸ್ಥಾಪನೆಗೆ ಸ್ಥಳ ಗುರು ತಿಸಲಾಗಿತ್ತು. ಅಲ್ಲದೆ 8 ಕೋಟಿ ರೂ. ಮೀಸಲಿ ಡಲಾಗಿತ್ತು. ತಾಂತ್ರಿಕ ಕಾರಣದಿಂದ ಅನುದಾನ ವಾಪಸ್ಸಾಗಿದ್ದರೆ, ಸಫಾರಿ ಸ್ಥಳಾಂತರ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಈ ನಡುವೆ ಕ್ಯಾಂಪಸ್‍ಗೆ ಬರುವವರ ಸಂಖ್ಯೆ ಹೆಚ್ಚಾಗಿ, ಪ್ಲಾಸ್ಟಿಕ್ ಸೇರಿ ದಂತೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ವಾತಾವರಣ ಕಲುಷಿತಗೊಳಿಸುತ್ತಿದ್ದದ್ದು ಹೆಚ್ಚಾಗುತ್ತಿದ್ದಂತೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಸಫಾರಿ ಸ್ಥಳಾಂತರಗೊಳಿಸುವ ಪ್ರಸ್ತಾಪಕ್ಕೆ ಇಲಾಖೆಯಿಂದ ಅನುಮೋದÀನೆ ಪಡೆದು ಸಫಾರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದಕ್ಕೆ ಕ್ರಮ ಕೈಗೊಂಡಿದ್ದರು.

ಚಾಲನೆ: ಮೇಲುಕಾಮನಹಳ್ಳಿ ಸಮೀಪದಲ್ಲಿರುವ ಇಲಾಖೆ ಸ್ಥಳದಲ್ಲಿ ನೂತನವಾಗಿ ಆರಂಭಿಸಿದ ಸಫಾರಿ ಕೌಂಟರ್ ಅನ್ನು ಭಾನುವಾರ ಬೆಳಿಗ್ಗೆ ಶಾಸಕ ನಿರಂಜನಕುಮಾರ್ ಪ್ರವಾಸಿಗರಿಗೆ ಟಿಕೆಟ್ ಕೊಟ್ಟು ಸಫಾರಿ ವಾಹನಕ್ಕೆ ನಿಶಾನೆ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವನ್ಯಜೀವಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಪ್ರದೇಶದಿಂದ ಸಫಾರಿ ಕೇಂದ್ರವನ್ನು ಹೊರಗೆ ಸ್ಥಳಾಂತರ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ವಿವಿಧೆಡೆಯಿಂದ ಪ್ರವಾಸಿಗರು ಬಂಡೀಪುರಕ್ಕೆ ಬರುವ ವಾಡಿಕೆಯಿದೆ. ಕರ್ನಾಟಕ್ಕೆ ಹಿರಿಮೆಯಂತಿರುವ ಬಂಡೀಪುರ ವಿಶಾಲವಾದ ಅರಣ್ಯ ಪ್ರದೇಶವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಹುಲಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಫಾರಿಗೆ ಬಂದ ಪ್ರವಾಸಿಗ ರಿಗೆ ನಿರಾಸೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಿದೆ. ಹೊಸ ಜಾಗದಲ್ಲಿ ಪ್ರವಾಸಿರಿಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸುತ್ತದೆ ಎಂದು ಹೇಳಿದರು.

ವನ್ಯ ಸಂಪತ್ತಿನ ಹಿತವೇ ಮುಖ್ಯ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇ ಶಕ ಟಿ.ಬಾಲಚಂದ್ರ ಮಾತನಾಡಿ, ಈ ಹಿಂದೆ ಬಂಡೀಪುರ ಕ್ಯಾಂಪಸ್‍ನಲ್ಲಿ ಬಂದವರಲ್ಲಿ ಎಲ್ಲರೂ ಸಫಾರಿಗೆ ಹೋಗುತ್ತಿರಲಿಲ್ಲ. ಬಹುತೇಕರು ಕ್ಯಾಂಪಸ್‍ನಲ್ಲಿ ಕಾಲಹರಣ ಮಾಡಿ, ಅಲ್ಲಿನ ಪರಿಸರ ಹದಗೆಡಿಸುವುದಕ್ಕೆ ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಎಸೆದು ಹೋಗುತ್ತಿದ್ದರು. ಅನಗತ್ಯವಾಗಿ ಬರುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ `ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ’ ಅನುಸಾರ ಬಂಡೀ ಪುರದ ಗೋಪಾಲಸ್ವಾಮಿ ಬೆಟ್ಟ ರೇಂಜ್‍ಗೆ ಒಳಪಡುವ ಮೇಲುಕಾಮನಹಳ್ಳಿ ಬಳಿ ಹೊಸದಾಗಿ ಸಫಾರಿ ಕೇಂದ್ರವನ್ನು ಆರಂಭಿಸಲಾಗಿದೆ. ಅರಣ್ಯದಲ್ಲಿ ಸಫಾರಿ ವಾಹನಗಳ ದಟ್ಟಣೆ ಹೆಚ್ಚಾಗಬಾರದು ಎಂಬ ಕಾರಣ ಸಫಾರಿ ಮಾರ್ಗಗಳನ್ನು ಹೆಚ್ಚಿಸಲಾಗಿದೆ. ಹಿಂದೆ ಕೇವಲ ಎರಡು ಮಾರ್ಗಗಳಿದ್ದು ಅದನ್ನು ಐದಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಐದು ಪ್ರವೇಶ ಸ್ಥಳಗಳನ್ನು ನಿಗಧಿಗೊಳಿಸಲಾಗಿದೆ. ಒಂದು ಮಾರ್ಗದಲ್ಲಿ ಒಮ್ಮೆಗೆ ಮೂರು ಇಲ್ಲವೆ 4 ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಹೊಸ ಮಾರ್ಗಗಳಲ್ಲಿ ಎರಡು ಪಾಳಿಯಲ್ಲಿ ಸಫಾರಿ ಕಾರ್ಯಾಚರಣೆ ನಡೆಯಲಿದೆ ಎಂದರು. ಎಸಿಎಫ್‍ಗಳಾದ ರವಿಕುಮಾರ್, ಪರಮೇಶ್, ನಟರಾಜ್, ಆರ್‍ಎಫ್‍ಗಳಾದ ಶ್ರೀನಿವಾಸ್, ಮಹದೇವು, ರಾಘವೇಂದ್ರ, ಡಿಆರ್‍ಎಫ್‍ಒ ಶಿವಕುಮಾರ್ ಇನ್ನಿತರರಿದ್ದರು.

ಅಗತ್ಯ ಸೌಲಭ್ಯ: ಹೊಸದಾಗಿ ಸಫಾರಿ ಆರಂಭಿಸಿರುವ ಸ್ಥಳದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಟಿಕೆಟ್ ಕೌಂಟರ್, ವಾಹನ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಿಸಿಲ್ಲ. ಎಲ್ಲಾ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ ಐದು ಹಾಗೂ ಪುರುಷರಿಗೆ ಐದು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

Translate »