ಅಂತಾರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ 1.5 ಲಕ್ಷ ಯೋಗ ಪಟುಗಳು ದಾಖಲೆ ನಿರ್ಮಿಸುವ ಗುರಿ
ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ 1.5 ಲಕ್ಷ ಯೋಗ ಪಟುಗಳು ದಾಖಲೆ ನಿರ್ಮಿಸುವ ಗುರಿ

June 3, 2019

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಹಿನ್ನೆಲೆಯಲ್ಲಿ 1.5 ಲಕ್ಷ ಯೋಗಪಟುಗಳು ದಾಖಲೆ ನಿರ್ಮಿಸುವ ಗುರಿಯೊಂದಿಗೆ ಮೈಸೂರಿನಲ್ಲಿ ಭಾನುವಾರ ನೂರಾರು ಯೊಗಪಟುಗಳು ಯೋಗ ತಾಲೀಮು ನಡೆಸಿದರು.

2017ರಲ್ಲಿ ಯೋಗ ಗಿನ್ನಿಸ್ ದಾಖಲೆ ನಿರ್ಮಿಸಿ, ಕಳೆದ ವರ್ಷ ಕೈತಪ್ಪಿ ಹೋಗಿದ್ದ ಗಿನ್ನಿಸ್ ದಾಖಲೆಯನ್ನು ಈ ಬಾರಿ ಶತಾಯ ಗತಾಯ ಗಳಿಸಲೇಬೇಕು ಎಂಬ ಸಂಕಲ್ಪದೊಂದಿಗೆ ಜಿಲ್ಲಾಡಳಿ ತದ ಆಶ್ರಯದಲ್ಲಿ ಮೈಸೂರಿನ ಎಲ್ಲಾ ಯೋಗ ಸಂಸ್ಥೆಗಳೂ ಒಗ್ಗೂಡಿ ಮೈಸೂರು ಯೋಗ ಒಕ್ಕೂಟದ ಅಡಿಯಲ್ಲಿ ಸಿದ್ಧತೆ ಯಲ್ಲಿ ತೊಡಗಿವೆ. ಇದಕ್ಕಾಗಿ ಕಳೆದ 3 ವಾರಗಳಿಂದ ಮೈಸೂ ರಿನ ವಿವಿಧ ಉದ್ಯಾನವನಗಳಲ್ಲಿ ಪ್ರತ್ಯೇಕವಾಗಿ ಯೋಗ ತಾಲೀಮು ನಡೆಸಲಾಗಿದೆ. ಅಂತೆಯೇ ಇಂದೂ ಕೂಡ ಅರಮನೆ ಬಳಿಯ ಚಾಮರಾಜ ಒಡೆಯರ್ ವೃತ್ತದಿಂದ ಜಯಚಾಮರಾಜ ಒಡೆ ಯರ್ ವೃತ್ತದವರೆಗಿನ ರಾಜಮಾರ್ಗದಲ್ಲಿ 500ಕ್ಕೂ ಹೆಚ್ಚು ಯೋಗ ಪಟುಗಳು ತಾಲೀಮಿನಲ್ಲಿ ಭಾಗವಹಿಸಿದ್ದರು. ಮೊದಲಿಗೆ ಚಲನ ಕ್ರಿಯೆ, ಬಳಿಕ 25 ಆಸನಗಳು, ಪ್ರಾಣಾಯಾಮ, ಧ್ಯಾನ, ಸಂಕಲ್ಪ ನಂತರ ಶಾಂತಿ ಮಂತ್ರದೊಂದಿಗೆ ಯೋಗ ತಾಲೀಮು ಮುಕ್ತಾಯಗೊಳಿಸಲಾಯಿತು. ಇದಕ್ಕೂ ಮುನ್ನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸಿ ಯೋಗ ತಾಲೀಮಿಗೆ ಚಾಲನೆ ನೀಡಿದರು. ಶಾಸಕ ಎಲ್.ನಾಗೇಂದ್ರ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸತೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಜಿಎಸ್‍ಎಸ್‍ನ ಶ್ರೀಹರಿ, ಮೈಸೂರು ಯೋಗ ಒಕ್ಕೂಟದ ಡಾ. ಬಿ.ಪಿ.ಮೂರ್ತಿ, ಯೋಗ ಶಿಕ್ಷಕರಾದ ಶಶಿಕುಮಾರ್, ಡಾ.ಗಣೇಶ್, ಕಾಳಾಜಿ, ವೆಂಕಟೇಶ್, ದೇವಿಕಾ, ಕಾಂಚನಗಂಗಾ, ಜಾಹ್ನವಿ ಇನ್ನಿತರರು ಭಾಗವಹಿಸಿದ್ದರು.

ಕೋಟಿ ವೃಕ್ಷ ಕಾರ್ಯಕ್ರಮ: ಮೈಸೂರಿನಲ್ಲಿ ಬೇಸಿಗೆಯ ತಾಪಮಾನ ಹೆಚ್ಚಿ ಅದರ ಅನುಭವವನ್ನು ಮೈಸೂರು ಜನತೆ ಅನುಭವಿಸಿದ್ದೇವೆ. ಮೈಸೂರಿನ ಆರೋಗ್ಯ ಮತ್ತು ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಜೂ.5ರಂದು ವಿಶ್ವ ಪರಿಸರ ದಿನದಿಂದ ಕೋಟಿ ವೃಕ್ಷ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳು ಚಿಂತಿಸಿವೆ. ಮುಂದಿನ ವರ್ಷದೊಳಗೆ ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವಿದೆ. ಸದ್ಯದಲ್ಲೇ ಅದಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ಜೂ.21ರಂದು ಪ್ರಧಾನಿ ಬರಲಿದ್ದಾರೆಂಬ ಹಿನ್ನೆಲೆಯಲ್ಲಿ ಅಂದು 1.5 ಲಕ್ಷ ಯೋಗ ಪಟುಗಳನ್ನು ಒಂದೆಡೆ ಸೇರಿಸಲು ಎಲ್ಲಾ ಪ್ರಯತ್ನ ನಡೆದಿದೆ. ಮತ್ತೊಮ್ಮೆ ಗಿನ್ನಿಸ್ ದಾಖಲೆ ನಿರ್ಮಿಸಲು ಎಲ್ಲರೂ ಶ್ರಮಿಸಬೇಕಾಗಿದೆ. – ಎಸ್.ಎ.ರಾಮದಾಸ್, ಶಾಸಕ.

2017ರಲ್ಲಿ ಯೋಗದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದೇವೆ. 2018ರಲ್ಲಿ ಕೈತಪ್ಪಹೋಗಿದ್ದ ದಾಖಲೆಯನ್ನು ಈ ಬಾರಿ ಮಾಡಲೇಬೇಕಾಗಿದೆ. ಹೀಗಾಗಿ 1.25 ಲಕ್ಷ ಜನರು ಸೇರಿ ವಿಶ್ವ ದಾಖಲೆ ಮಾಡಲು ಪ್ರಯತ್ನಿಸೋಣ. -ಎಲ್.ನಾಗೇಂದ್ರ, ಶಾಸಕ.

Translate »