Tag: Bandipur National Park

ನಾಡಿಗೆ ಬರಲು ಯತ್ನಿಸಿದ ಕಾಡಾನೆ ಮೇಲೆ ಅರಣ್ಯ ಸಿಬ್ಬಂದಿಯಿಂದ ಗುಂಡು; ಹಂಗಾಮಿ ನೌಕರ ವಜಾ
ಮೈಸೂರು

ನಾಡಿಗೆ ಬರಲು ಯತ್ನಿಸಿದ ಕಾಡಾನೆ ಮೇಲೆ ಅರಣ್ಯ ಸಿಬ್ಬಂದಿಯಿಂದ ಗುಂಡು; ಹಂಗಾಮಿ ನೌಕರ ವಜಾ

March 13, 2020

ಮೈಸೂರು,ಮಾ.12(ಎಂಟಿವೈ)- ವನ್ಯಪ್ರಾಣಿಗಳನ್ನು ರಕ್ಷಿಸಬೇಕಾದವರೇ ಅವುಗಳಿಗೆ ಗುಂಡಿಕ್ಕಿದರೆ ಹೇಗೆ? ಕಾಡಂಚಿನ ಗ್ರಾಮಗಳಿಗೆ ಬಂದು ಉಪಟಳ ನೀಡುವ ಆನೆಗಳನ್ನು ಕಾಡಿಗಟ್ಟಲೆಂದೇ ರಚಿಸಿರುವ `ಆ್ಯಂಟಿ ಡಿಪ್ರೆಡೇಷನ್ ಸ್ಕ್ವಾಡ್’(ಫೋರ್ಸ್)ನ ಸಿಬ್ಬಂದಿಯೇ ಕಾಡಾನೆ ಮೇಲೆ ಫೈರಿಂಗ್ ಮಾಡಿ, ಹಿರಿಯ ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಡೆದಿದ್ದೇನು?: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮದತ್ತ ನುಸುಳಲು ರೈಲ್ವೆ ಬ್ಯಾರಿಕೇಡ್ ದಾಟುತ್ತಿದ್ದ ಗಂಡಾನೆ ಮೇಲೆ ಅರಣ್ಯ ಸಿಬ್ಬಂ ದಿಯೇ ನೇರವಾಗಿ ಗುಂಡು ಹಾರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗುಂಡು ಹಾರಿಸಿದ ಹಂಗಾಮಿ ನೌಕರ ನನ್ನು ವಜಾಗೊಳಿಸಿ,…

ಮೇಲುಕಾಮನಹಳ್ಳಿಗೆ ಬಂಡೀಪುರ ಸಫಾರಿ ಕೌಂಟರ್ ಸ್ಥಳಾಂತರ
ಮೈಸೂರು

ಮೇಲುಕಾಮನಹಳ್ಳಿಗೆ ಬಂಡೀಪುರ ಸಫಾರಿ ಕೌಂಟರ್ ಸ್ಥಳಾಂತರ

June 3, 2019

ಬಂಡೀಪುರ: `ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ’ ಮೇರೆಗೆ ಬಂಡೀಪುರ ಕ್ಯಾಂಪಸ್ ನಿಂದ ಮೇಲುಕಾಮನಹಳ್ಳಿ ಬಳಿ ಸ್ಥಳಾಂತರ ಗೊಂಡ ಸಫಾರಿ ವ್ಯವಸ್ಥೆಯನ್ನು ಭಾನುವಾರ ಶಾಸಕ ನಿರಂಜನಕುಮಾರ್ ಚಾಲನೆ ನೀಡಿದರು. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಿಂದ ಬಂಡೀ ಪುರ ವಲಯದ ಕ್ಯಾಂಪಸ್‍ನಲ್ಲಿ ಸಫಾರಿ ವ್ಯವಸ್ಥೆ ಕಾರ್ಯಾಚರಿಸುತ್ತಿತ್ತು. ಅರಣ್ಯದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67(181)ಗೆ ಹೊಂದಿಕೊಂಡಂತೆ ಸಫಾರಿ ಕ್ಯಾಂಪಸ್ ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿ ದ್ದಂತೆ…

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ
ಮೈಸೂರು

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ

February 25, 2019

ಬಂಡೀಪುರ: ಬೆಂಕಿಯ ರೌದ್ರ ನರ್ತನ ಭಾನುವಾರವೂ ಮುಂದುವರೆಯಿತು. ರಭಸವಾಗಿ ಬೀಸಿದ ಗಾಳಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಲವು ಗುಡ್ಡಗಳನ್ನು ಆಹುತಿ ಪಡೆದ ಕಾಳ್ಗಿಚ್ಚು, ಅಪಾರ ಪ್ರಮಾಣದ ವನ್ಯಸಂಪತ್ತನ್ನು ನೋಡ ನೋಡುತ್ತಿದ್ದಂತೆ ಹೊಸಕಿ ಹಾಕಿತು. ಶನಿವಾರ ಮೇಲುಕಾಮನಹಳ್ಳಿಯಿಂದ ಬಂಡೀಪುರದ ಕ್ಯಾಂಪಸ್ ಕಡೆ ಸಾಗಿದ ಬೆಂಕಿಯ ಸಾವಿರಾರು ಎಕರೆ ಕಾಡನ್ನು ಆಹುತಿ ಪಡೆದಿತ್ತು. ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಸಾಗಿದ ಬೆಂಕಿ ರಾತ್ರಿಯಿಡೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಲಿನ ಗುಡ್ಡಗಳನ್ನು ಆವರಿಸುತ್ತಾ ಸಾಗಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ…

ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ
ಚಾಮರಾಜನಗರ

ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ

December 29, 2018

ಗುಂಡ್ಲುಪೇಟೆ:  ಹಚ್ಚ ಹಸಿರಿನ ಮೈಸಿರಿ, ಬೆಟ್ಟಗುಡ್ಡ, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆ ಮಾರ್ಗ. ವನ್ಯಜೀವಿ ತಾಣಕ್ಕೆ ಪ್ರಯಾಣಿಸುತ್ತಿರುವ ಪ್ರವಾಸಿಗರ ವಾಹನಗಳು. ದಟ್ಟ ಕಾನನದ ನಡುವೇ ಸ್ವಚ್ಛಂದವಾಗಿ ನಲಿದಾಡುತ್ತಿರುವ ವನ್ಯಜೀವಿ ಸಂಕುಲ. ಇದು ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಕಂಡು ಬಂದ ದೃಶ್ಯ-ಹೌದು ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಕ್ರಿಸ್‍ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿ ಗರ ದಂಡೇ ಹರಿದು ಬರುತ್ತಿದೆ. ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿರುವ…

2 ಹುಲಿ, ಒಂದು ಆನೆ ಸಾವು
ಮೈಸೂರು

2 ಹುಲಿ, ಒಂದು ಆನೆ ಸಾವು

November 24, 2018

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ 2 ಹುಲಿ ಹಾಗೂ ಒಂದು ಆನೆ ಕಳೇಬರ ಪತ್ತೆಯಾಗಿವೆ. ಗುಂಡ್ಲುಪೇಟೆ ವರದಿ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಅರಣ್ಯವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 12 ವರ್ಷ ಪ್ರಾಯದ ಈ ಗಂಡು ಹುಲಿಯು ಆಹಾರವಿಲ್ಲದೆ ನರಳಿ ಸತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಬಳಿ…

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯುವ ಪ್ರಶ್ನೆ ಇಲ್ಲ
ಮೈಸೂರು

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯುವ ಪ್ರಶ್ನೆ ಇಲ್ಲ

August 4, 2018

ಮೈಸೂರು: ಬಂಡಿಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧವನ್ನು ಹಿಂಪಡೆಯುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ. ಕೇರಳ ಸರ್ಕಾರ ಮಾಡಿರುವ ಮೇಲ್ಸೇತುವೆ ನಿರ್ಮಾಣ ಹಾಗೂ ರಾತ್ರಿ ಸಂಚಾರ ನಿರ್ಬಂಧ ಸಡಿಲಿಕೆ ಮನವಿಯನ್ನು ತಿರಸ್ಕರಿಸಿ, ವನ್ಯಜೀವಿಗಳ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಸ್ಪಷ್ಟಪಡಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ಅವರು, ಮೈಸೂರಿನ ಸರ್ಕಾರಿ ಅತಿಥಿ ಗೃಹ ಹಾಗೂ ಚಾಮುಂಡಿಬೆಟ್ಟ ದಲ್ಲಿ ಪತ್ರಕರ್ತರೊಂದಿಗೆ…

ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ
ಚಾಮರಾಜನಗರ

ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ

July 7, 2018

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಮುಂದೆ ಫೋಟೋ ತೆಗೆಯಲು ಮುಂದಾದ ಯುವಕರ ಗುಂಪಿನ ಮೇಲೆ ಆನೆ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಮದ್ದೂರು ವಲಯದ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ಇದರ ಫೋಟೋ ತೆಗೆಯಲು ಪ್ರವಾಸಕ್ಕೆ ಬಂದಿದ್ದ ಕೆಲವು ಯುವಕರ ಮುಂದಾಗಿದ್ದಾರೆ. ಈ ವೇಳೆ ಆನೆ ಯುವಕರ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ದಾಳಿಯಿಂದ ಯುವಕರು ತಪ್ಪಿಸಿಕೊಂಡಿದ್ದಾರೆ. ಮದ್ದೂರು ಅರಣ್ಯ ಪ್ರದೇಶದಲ್ಲಿ ಹಾದು…

ಕೆ.ಎಸ್.ಆರ್.ಟಿ.ಸಿ  ಬಸ್ ಮೇಲೆ ಆನೆ ದಾಳಿ
ಚಾಮರಾಜನಗರ

ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಆನೆ ದಾಳಿ

June 26, 2018

ಬಂಡೀಪುರ ಅರಣ್ಯದ ಮದ್ದೂರು ರೇಂಜ್‍ನಲ್ಲಿ ಘಟನೆ ಮರಿಯಾನೆ ರಕ್ಷಿಸಲು ದಾಳಿಗೆ ಮುಂದಾದ ತಾಯಿ ಆನೆ ಗುಂಡ್ಲುಪೇಟೆ: ಮರಿ ಯೊಂದಿಗೆ ಆನೆಗಳ ಹಿಂಡೊಂದು ರಸ್ತೆ ದಾಟುವ ವೇಳೆ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ತಾಯಿ ಆನೆ ಅಟ್ಟಾಡಿಸಿ ದಾಳಿ ನಡೆಸಲು ಮುಂದಾದ ಘಟನೆ ಮೈಸೂರು-ಸುಲ್ತಾನ್ ಬತೇರಿ ಮುಖ್ಯ ರಸ್ತೆಯ ಬಂಡೀಪುರ ಅರಣ್ಯದಲ್ಲಿ ನಡೆದಿದೆ. ಕೇರಳದ ಕ್ಯಾಲಿಕಟ್‍ನಿಂದ ಗುಂಡ್ಲು ಪೇಟೆ, ಮೈಸೂರು ಮಾರ್ಗವಾಗಿ ಚಿಕ್ಕ ಮಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಸಂಜೆ…

ಅಪರಿಚಿತ ವಾಹನ ಡಿಕ್ಕಿ: ಜಿಂಕೆಗೆ ಗಾಯ
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಜಿಂಕೆಗೆ ಗಾಯ

June 17, 2018

ಬೇಗೂರು:ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ ಓಂಕಾರ್ ಅರಣ್ಯ ವಲಯದಿಂದ ಆಹಾರ ಹುಡುಕಿ ಬಂದಿದ್ದ ಎರಡು ವರ್ಷದ ಗಂಡು ಜಿಂಕೆಗೆ ಅಪರಿಚಿತ ವಾಹನ ವೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯ ಅರೇಪುರ ಸಮೀಪ ಶನಿವಾರ ಬೆಳಿಗ್ಗೆ ನಡೆದಿದೆ. ರಸ್ತೆ ದಾಟುವಾಗ ಅಪರಿಚಿತ ವಾಹನ ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕಿಯ ಕಾಲಿಗೆ ಪೆಟ್ಟಾಗಿ ರಸ್ತೆ ಬದಿಯಲ್ಲಿ ಅಸ್ವಸ್ಥವಾಗಿ ಕುಳಿತಿದ್ದನ್ನು ಗಮನಿಸಿದ ದಾರಿ ಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು…

ಅರಣ್ಯ ಸಿಬ್ಬಂದಿಯಿಂದ ಜಾಗೃತಿ ಪತ್ರ ಹಂಚಿಕೆ
ಚಾಮರಾಜನಗರ

ಅರಣ್ಯ ಸಿಬ್ಬಂದಿಯಿಂದ ಜಾಗೃತಿ ಪತ್ರ ಹಂಚಿಕೆ

May 28, 2018

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುವ ಪ್ರವಾಸಿಗರಿಗೆ ಅರಣ್ಯ ಪ್ರದೇಶದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿಯಿರುವ ಜಾಗೃತಿ ಪತ್ರವನ್ನು ಹಂಚುವ ಮೂಲಕ ಅರಣ್ಯ ಸಿಬ್ಬಂದಿ ಅರಿವು ಮೂಡಿಸಿದರು. ಉದ್ಯಾನದ ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ಗೇಟ್ ಬಳಿ ಎಲ್ಲ ವಾಹನಗಳ ಚಾಲಕರಿಗೆ ಅರಣ್ಯ ಪ್ರದೇಶದಲ್ಲಿ ವಾನಹ ನಿಲುಗಡೆ ಮಾಡಬಾರದು ಎಂಬ ಬಗ್ಗೆ ಮಾಹಿತಿಯಿರುವ ಕರಪತ್ರ ವಿತರಣೆ ಮಾಡಿದರು.

Translate »