2 ಹುಲಿ, ಒಂದು ಆನೆ ಸಾವು
ಮೈಸೂರು

2 ಹುಲಿ, ಒಂದು ಆನೆ ಸಾವು

November 24, 2018

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ 2 ಹುಲಿ ಹಾಗೂ ಒಂದು ಆನೆ ಕಳೇಬರ ಪತ್ತೆಯಾಗಿವೆ.

ಗುಂಡ್ಲುಪೇಟೆ ವರದಿ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಅರಣ್ಯವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ.

ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 12 ವರ್ಷ ಪ್ರಾಯದ ಈ ಗಂಡು ಹುಲಿಯು ಆಹಾರವಿಲ್ಲದೆ ನರಳಿ ಸತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಬಳಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಸೋಮ ನಾಥಪುರ ಬೀಟಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿತ್ತು. ಈ ಬಗ್ಗೆ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಹುಲಿ ಸೆರೆ ಹಿಡಿಯಲು ಅಧಿಕಾರಿಗಳು ನಾಗರಹೊಳೆಯಿಂದ ಅಭಿಮನ್ಯು ಮತ್ತು ಕೃಷ್ಣ ಸಾಕಾನೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರೂ. ಇಂದು ಅರಣ್ಯ ಪ್ರದೇಶದಲ್ಲಿ ಹುಡು ಕಾಟ ನಡೆಸಿದಾಗ ಹಿಮವದ್ ಗೋಪಾಲ ಸ್ವಾಮಿ ಅರಣ್ಯ ಪ್ರದೇಶದ ವ್ಯಾಪ್ತಿಯ ಲ್ಲಿನ ಕಾಳಯ್ಯನಕಟ್ಟೆ ಪೆÇದೆಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಇದೊಂದು ಸ್ವಾಭಾವಿಕ ಸಾವಾಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.

ಹುಣಸೂರು ವರದಿ: ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಆನೆ, ಗಂಡು ಹುಲಿ ಕಳೇಬರಹ ಪತೆಯಾಗಿದ್ದು, ಕಾದಾಟದಲ್ಲಿ ಮೃತಪಟ್ಟಿವೆ ಎನ್ನಲಾಗಿದೆ. ನಾಗರಹೊಳೆ ಅಭಯಾರಣ್ಯದ ಕಲ್ಲಹಳ್ಳ ವಲಯದ ಗಂಡಗೂರು ಬಳಿಯ ಮೂರ್ಕಲ್
ಬೀಟ್‍ನ ಮೂರ್ಕಲ್‍ತೋಡು ಬಳಿ ಸುಮಾರು 9ರಿಂದ 10 ವರ್ಷದ ಹುಲಿ ಕಳೇಬರ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಇದು ಕಣ್ಣಿಗೆ ಬಿದ್ದಿದೆ. ತಕ್ಷಣ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಎಸಿಎಫ್ ಪ್ರಸನ್ನಕುಮಾರ್, ನಾಗರಹೊಳೆ ಎಸಿಎಫ್ ಪಾಲ್ ಅಂತೋಣಿ, ಡಾ.ಮುಜೀಬ್ ರೆಹಮಾನ್ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ಮಾಡಲಾಯಿತು. ಕಾದಾಟ ಅಥವಾ ಬೇಟೆ ಸಾಧ್ಯವಾಗದೆ ಹಸಿವಿನಿಂದ ಹುಲಿ ಸತ್ತಿರಬಹುದು ಎಂದು ಅರಣ್ಯವೈದ್ಯಾಧಿಕಾರಿ ತಿಳಿಸಿದ್ದಾರೆ.

ಆನೆ ಸಾವು: ನಾಗರಹೊಳೆ ಅಭಯಾರಣ್ಯದ ಕಲ್ಲಹಳ್ಳ ವಲಯದ ಕೊಳ್ಳಂಗೇರೆ ಬಿಟ್‍ನಲ್ಲಿ ಕಾದಾಟದಲ್ಲಿ ಆನೆಯೊಂದು ಮೃತಪಟ್ಟಿದೆ. ಎಂದಿನಂತೆ ಅರಣ್ಯ ಸಿಬ್ಬಂದಿ ಇಂದು ಬೆಳಿಗ್ಗೆ ಗಸ್ತಿನಲ್ಲಿದ್ದಾಗ ಆನೆ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿದು ಮಡಿಕೇರಿಯ ಡಿಸಿಫ್ ಜಯ, ವನ್ಯಜೀವಿ ಎಸಿಎಫ್ ಪ್ರಸನ್ನಕುಮಾರ್ ಇತರರು ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ, ದಂತಗಳನ್ನು ವಶಕ್ಕೆ ಪಡೆದರು. ನಂತರ ಅಂತ್ಯ ಸಂಸ್ಕಾರ ಮಾಡಲಾಯಿತು.

Translate »