Tag: Hunsur

ಬಿಎಸ್‍ಪಿಯಿಂದ ‘ಆರ್ಥಿಕ್ ಸಹಯೋಗ ದಿವಸ್’
ಮೈಸೂರು

ಬಿಎಸ್‍ಪಿಯಿಂದ ‘ಆರ್ಥಿಕ್ ಸಹಯೋಗ ದಿವಸ್’

ಹುಣಸೂರು: ಮಾಯಾ ವತಿಯವರ ಹುಟ್ಟುಹಬ್ಬದ ಅಂಗವಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸಂವಿಧಾನ ತಿಳಿಸಿ ದೇಶ ಉಳಿಸಿ ಜನಜಾಗೃತಿ ಜಾಥವನ್ನು“ಆರ್ಥಿಕ್ ಸಹಯೋಗ ದಿವಸ್” ಅಗಿ ನಡೆಸಿದರು. “ಆರ್ಥಿಕ್ ಸಹಯೋಗ ದಿವಸ್” ಅಂಗ ವಾಗಿ ಇಂದು ಹುಣಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಪಕ್ಷದ ಆರ್ಥಿಕ ಸಹಯೋಗಕ್ಕೆ ಸಾರ್ವಜನಿಕರಿಂದ ಒಂದು ನೋಟು ಕೊಡಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಡಾ.ಮಹದೇವ್ ಮಾತನಾಡಿ ನವೆಂಬರ್ 26 ಸಂವಿಧಾನ ಅರ್ಪಿಸಿದ ದಿನದಿಂದ ಜನವರಿ 26 ಸಂವಿಧಾನ…

ಹುಣಸೂರಿನಲ್ಲಿ ಬಾಗಶಃ ಬಂದ್
ಮೈಸೂರು

ಹುಣಸೂರಿನಲ್ಲಿ ಬಾಗಶಃ ಬಂದ್

ಹುಣಸೂರು: ಸಿಪಿಐಎಂ, ರೈತ ಸಂಘ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಂದ್ ವಾತಾವರಣ ಕಂಡು ಬಂದಿತು. ಸಾರಿಗೆ ಬಸ್ ಸಂಚರಿಸದೆ, ಶಾಲಾ ಕಾಲೇಜುಗಳು, ಬ್ಯಾಂಕ್, ಎಲ್‍ಐಸಿ, ಅಂಚೆ ಕಚೇರಿ, ಸಿನಿಮಾ ಮಂದಿರ ಸಹ ಬಂದ್ ಅಗಿದ್ದು, ಭಾರತ್ ಬಂದ್‍ಗೆ ಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದೆನಿಸಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಹೋಟೆಲ್ ಮತ್ತು ಅಂಗಡಿಗಳು ಬಾಗಿಲು ತೆರೆದು ವಹಿವಾಟು ಪ್ರಾರಂಭಿಸಿದರೆ, ಕೆಲವು ಸಾರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿದವು….

ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ
ಮೈಸೂರು

ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ

ಹುಣಸೂರು: ರಾಜ್ಯದಲ್ಲಿ ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹತ್ಯೆಯನ್ನು ಖಂಡಿಸಿ ಗ್ರಾಮ ಲೆಕ್ಕಾಧಿಕಾರಿಗಳು ಒಂದು ದಿನದ ಸಾಂಕೇತಿಕ ರಜೆ ಚಳವಳಿ ನಡೆಸಿ ಉಪ ವಿಭಾಗಾಧಿಕಾರಿ ಕೆ.ನಿತೀಶ್ ಅವರಿಗೆ ಮನವಿ ಸಲ್ಲಿಸಿದರು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿ ಗಳಿಗೆ ಜೀವ ಭಯ ಹುಟ್ಟಿಸುವ…

ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅವಕಾಶ
ಮೈಸೂರು

ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅವಕಾಶ

ಹುಣಸೂರು: ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಸರ್ಕಾರದಿಂದ ರೈತರಿಂದ ನಮೂನೆ-57ರಲ್ಲಿ ಅರ್ಜಿ ಆಹ್ವಾನಿಸಿದ್ದು, 2019ರ ಮಾ.16ರೊಳಗೆ ಸೂಕ್ತ ದಾಖಲೆಯೊಂದಿಗೆ ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಪಿ.ಸಿ.ಮೋಹನ್ ತಿಳಿಸಿದ್ದಾರೆ. ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಸುತ್ತೋಲೆಯಂತೆ ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಲವಾರು ಮಾರ್ಗ ಸೂಚಿಗಳನ್ನು ಪ್ರಕಟಿಸಲಾಗಿದ್ದು, ಅರ್ಹ ರೈತರು ತಾಲೂಕು ಕಚೇರಿ ಭೇಟಿ…

ಕಾಮಗಾರಿ ಸ್ಥಗಿತಗೊಳಿಸಲು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಕಾಮಗಾರಿ ಸ್ಥಗಿತಗೊಳಿಸಲು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಹುಣಸೂರು: ನಗರದ ದೇವರಾಜ ಅರಸು ಕ್ರೀಡಾಂಗಣದ ಮುಂದೆ ಸ್ವಚ್ಛ ಭಾರತ್ ಮಿಷನ್‍ಯಡಿ ನಗರಸಭೆ ಯಿಂದ ನಿರ್ಮಿಸುತ್ತಿರುವ ಸಾರ್ವಜನಿಕ ಹೈಟೆಕ್ ಶೌಚಾಲಯ ಕಾಮಗಾರಿ ಸ್ಥಗಿತಗೊಳಿಸುವಂತೆ ಬಾಲಕರ ಸರ್ಕಾರಿ ಕಿರಿಯ ಕಾಲೇಜು ವಿದ್ಯಾರ್ಥಿಗಳಿಂದು ಪ್ರತಿಭಟಿಸಿದರು. ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ನಗರದ ಕ್ರೀಡಾಂಗಣ ಮತ್ತು ಕಾಲೇಜು ಮುಂಭಾಗದಲ್ಲೇ ಶೌಚಾಲಯ ನಿರ್ಮಿಸುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು. ಕಾಲೇಜಿನ ಪ್ರಾಂಶುಪಾಲ ನಾಗರಾಜು ಅರಸು ಮಾತನಾಡಿ, ಕ್ರೀಡಾಂಗಣ ಮತ್ತು ಕಾಲೇಜಿನ ಮುಂಭಾಗದಲ್ಲೇ ಸಾರ್ವ ಜನಿಕ ಶೌಚಾಲಯ ಕಟ್ಟುತ್ತಿರುವುದು ಅವಲಕ್ಷಣವಾಗಿದೆ….

ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ
ಮೈಸೂರು

ಗೊಮ್ಮಟಗಿರಿ ಶಾಂತಮೂರ್ತಿಗೆ ವೈಭವದ ಮಸ್ತಕಾಭಿಷೇಕ

ಹುಣಸೂರು: ಜೈನ ಧರ್ಮದ ಆರಾಧ್ಯ ದೈವ ಹುಣಸೂರು ತಾಲೂಕು ಗೊಮ್ಮಟಗಿರಿಯ ಗೊಮ್ಮಟೇಶ್ವರ ನಿಗೆ ಇಂದು ವೈಭವದ 69ನೇ ಮಸ್ತಕಾಭಿಷೇಕ ಜರುಗಿತು. ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸಿದ ಮೂರ್ತಿಯನ್ನು ಕಂಡು ಭಕ್ತರು ಪುಳಕಿತರಾದರು. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಬಳಿಯ ದಿಗಂಬರ ಜೈನ ಅತಿಶಯ ಕ್ಷೇತ್ರ ಶ್ರೀ ಗೊಮ್ಮಟಗಿರಿಯ ವಿರಾಟ್‍ಯೋಗಿ ಗೊಮ್ಮಟೇಶ್ವರನಿಗೆ 69ನೇ ಮಸ್ತಕಾಭಿಷೇಕದ ಪ್ರತಿ ಅಭಿಷೇಕದಲ್ಲೂ ತನ್ನ ನಗು ಮುಖದ ತನ್ಮಯತೆಯ ಭಾವ ಮೆರೆದಾಗ ಭಕ್ತರು ಬಾಹುಬಲಿ ಭಗವಾನಕೀ ಜೈ, ಗೊಮ್ಮಟೇಶ್ವರಕೀ ಜೈ ಎನ್ನುತ್ತಾ ಭಕ್ತಿಪರವಶರಾದರು. ಅಭಿಷೇಕಕ್ಕೂ ಮುನ್ನ…

ಶುದ್ಧ ನೀರಿನ ಘಟಕಗಳಿಗೆ ಶಾಸಕ ಹೆಚ್.ವಿಶ್ವನಾಥ್ ಮರುಚಾಲನೆ
ಮೈಸೂರು

ಶುದ್ಧ ನೀರಿನ ಘಟಕಗಳಿಗೆ ಶಾಸಕ ಹೆಚ್.ವಿಶ್ವನಾಥ್ ಮರುಚಾಲನೆ

ಹುಣಸೂರು: ನಗರದದ್ಯಾಂತ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಬಾರದೆ ನೆನೆಗುದಿಗೆ ಬಿದ್ದಿದ್ದ ಶುದ್ಧ ನೀರಿನ ಘಟಕಗಳಿಗೆ ಇಂದು ಶಾಸಕ ಹೆಚ್.ವಿಶ್ವನಾಥ್ ಮರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದೆ ಕುಡಿಯುವ ನೀರಿನ ಘಟಕ ಗಳನ್ನು ನಿರ್ಮಿಸುವಾಗ ಕೊಳವೆ ಬಾವಿ ಕೊರೆದು ನೀರಿನ ಸಂಪನ್ಮೂಲವನ್ನು ಮಾಡಿ ಕೊಂಡು ನಂತರ ಘಟಕವನ್ನು ನಿರ್ಮಿಸಬೇಕಿತ್ತು. ಅದರೆ ಕೇವಲ ದಾಖಲೆಗಳಿಗಾಗಿ ನಗರದ ವಿವಿಧ ಕಡೆಗಳಲ್ಲಿ ತಲಾ 8.25 ಲಕ್ಷ ರೂ. ವೆಚ್ಚದಲ್ಲಿ 8 ಘಟಕಗಳನ್ನು 66 ಲಕ್ಷ…

ಜಿಲ್ಲಾ ಬ್ರಾಹ್ಮಣ ಸಮಾವೇಶ ಪೂರ್ವಭಾವಿ ಸಭೆ
ಮೈಸೂರು

ಜಿಲ್ಲಾ ಬ್ರಾಹ್ಮಣ ಸಮಾವೇಶ ಪೂರ್ವಭಾವಿ ಸಭೆ

ಹುಣಸೂರು: ಮೈಸೂರು ನಗರದ ಶ್ರೀ ಗಣಪತಿ ಸಚ್ಚಿದಾ ನಂದ ಸ್ವಾಮಿಗಳ ಆಶ್ರಮದಲ್ಲಿ ಡಿ.15 ಮತ್ತು 16 ರಂದು ಎರಡು ದಿನಗಳ ಕಾಲ ಜಿಲ್ಲಾ ಬ್ರಾಹ್ಮಣ ಸಮಾವೇಶ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿ ಸುವಂತೆ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು. ನಗರದ ಬ್ರಾಹ್ಮಣರ ಬಡಾವಣೆಯ ಶ್ರೀರಾಘವೇಂದ್ರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದಲ್ಲಿ ಸಾಕಷ್ಟು ಮಂದಿ ಬಿಪಿಎಲ್ ರೇಖೆಗಿಂತ ಕೆಳಗಿನವರಿದ್ದರೂ ಸಹ ಮುಂದುವರೆದ ಜನಾಂಗವೆಂಬ ಹಣೆಪಟ್ಟಿ ಕಟ್ಟಿದ್ದರಿಂದಾಗಿ…

ಹುಣಸೂರಿನಲ್ಲಿ ಮಕ್ಕಳ ದಿನಾಚರಣೆ
ಮೈಸೂರು

ಹುಣಸೂರಿನಲ್ಲಿ ಮಕ್ಕಳ ದಿನಾಚರಣೆ

ಹುಣಸೂರು:  ಮಾನವ, ಕೃಷಿ ಮತ್ತು ಪರಿಸರಕ್ಕೆ ಪೂರಕವಾಗಿರುವ ಪಕ್ಷಿಗಳ ಸಂರಕ್ಷಿಸುವ ಜೊತೆಗೆ ಅವುಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಮೈಸೂರಿನ ಪಕ್ಷಿ ಪ್ರೇಮಿ, ಸೆಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‍ನ ಏಳನೇ ತರಗತಿ ವಿದ್ಯಾರ್ಥಿನಿ ಎಸ್.ವರ್ಷಿಣಿ ತಿಳಿಸಿದರು. ನಗರದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ಅತಿಥಿಯಾಗಿದ್ದ ವರ್ಷಿಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ, ಆಧುನಿಕತೆ ಬೆಳೆದಂತೆ ಪಕ್ಷಿಗಳ ಸಂತತಿಯೂ ಸಹ ನಶಿಸುತ್ತಿರುವುದು ಬೇಸರದ ಸಂಗತಿ, ಇಂದು ನಾವೆಲ್ಲ ಮೊಬೈಲ್ ಇಲ್ಲದ ಜೀವನವೇ ಇಲ್ಲವೆಂಬಂತೆ ಆಗಿದ್ದೇವೆ. ಆ ಮೊಬೈಲ್ ಟವರ್…

2 ಹುಲಿ, ಒಂದು ಆನೆ ಸಾವು
ಮೈಸೂರು

2 ಹುಲಿ, ಒಂದು ಆನೆ ಸಾವು

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ 2 ಹುಲಿ ಹಾಗೂ ಒಂದು ಆನೆ ಕಳೇಬರ ಪತ್ತೆಯಾಗಿವೆ. ಗುಂಡ್ಲುಪೇಟೆ ವರದಿ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಅರಣ್ಯವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 12 ವರ್ಷ ಪ್ರಾಯದ ಈ ಗಂಡು ಹುಲಿಯು ಆಹಾರವಿಲ್ಲದೆ ನರಳಿ ಸತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಬಳಿ…

1 2 3 7