ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ  12,200 ರೂ.ದಂಡ ವಸೂಲು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ 12,200 ರೂ.ದಂಡ ವಸೂಲು

June 3, 2020

ಹುಣಸೂರು, ಮೇ8(ಕೆಕೆ)-ನಗರದ ವಿವಿಧಡೆ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು. ಅಂದಾಜು 122 ಮಂದಿಯಿಂದ 12,200 ರೂ.ದಂಡ ವಸೂಲಿಯಾಗಿದೆ.

ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾ ಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಎಚ್ಚರಿಸಿದ್ದರು. ಇದನ್ನು ಲೆಕ್ಕಿಸದೆ ಜನತೆ ಮಾಸ್ಕ್ ಧರಿಸದೆ ರಸ್ತೆಗಿಳಿದ್ದಿದ್ದರು. ಇಂದು ಕಾರ್ಯಾ ಚರಣೆಗಿಳಿದ ನಗರಸಭೆ ಆರೋಗ್ಯ ಹಿರಿಯ ನಿರೀಕ್ಷರಾದ ಸತೀಶ್ ಹಾಗೂ ಮೋಹನ್ 122 ಮಂದಿಗೆ ದಂಡ ವಿಧಿಸಿ, 12,200 ರೂ. ವಸೂಲಿ ಮಾಡಿದ್ದಾರೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಾಸ್ಕ್ ಹಾಕದೆ ಹೊರಬಂದರೆ 100 ರೂ. ನಗರ ಪ್ರದೇಶದಲ್ಲಿ 200 ರೂ. ದಂಡ ನಿಗದಿಪಡಿದ್ದು, ಗ್ರಾಪಂ, ನಗರಸಭೆ, ಹಾಗೂ ಪೆÇಲೀಸ್ ಇಲಾಖೆ ದಂಡ ವಿಧಿಸಲಿವೆ ಎಂದು ತಹಶೀಲ್ದಾರ್ ಸೂಚನೆ ನೀಡಿದ್ದಾರೆ.

Translate »