ಹುಣಸೂರು, ಮೇ 8(ಕೆಕೆ)- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೋಣನಹೊಸಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ನಿವಾಸಿ, ಜಿಪಂ ಸದಸ್ಯ ಕಟ್ಟನಾಯಕ ಅವರಿಗೆ ಸೇರಿದ ಹಸು ಮೃತಪಟ್ಟಿದೆ. ಕಟ್ಟನಾಯಕ ಅವರು ತಮ್ಮ ತೋಟದಲ್ಲಿ ಹಸುವನ್ನು ಮೇಯಲು ಬಿಟ್ಟದ್ದರು. ಈ ವೇಳೆ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ. ಹುಲಿ ದಾಳಿ ಕಣ್ಣಾರೆ ಕಂಡ ಕಟ್ಟನಾಯಕ ಹಾಗೂ ಪಕ್ಕದ ಜಮೀನಿನÀವರ ಕೂಗಾಟದಿಂದ ಹಸುವಿನ ಕಳೇಬರ ಬಿಟ್ಟು ಹುಲಿ ಅರಣ್ಯದತ್ತ ಓಡಿದೆ.