ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು
ಮೈಸೂರು

ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು

August 11, 2019

ಹುಣಸೂರು,ಆ.10(ಕೆಕೆ)-ಕೆಲ ದಿನಗಳಿಂದ ನಿರಂತರವಾಗಿ ಸುರಿಯು ತ್ತಿರುವ ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಸಮೀಪದ ಆಸ್ಪತ್ರೆ ಕಾವಲ್ ಗ್ರಾಪಂ ವ್ಯಾಪ್ತಿಯ ಬಲ್ಲೆನಹಳ್ಳಿಯಲ್ಲಿ ಇಂದು ಸಂಜೆ ಸಂಭವಿಸಿದೆ.

ಗ್ರಾಮದಲ್ಲಿನ ಲೇಟ್ ಮಹಮದ್ ಅಲಿ ಪುತ್ರಿ ಮುಬಿನಾ(34) ಮೃತಪಟ್ಟ ವರಾಗಿದ್ದು, ತಂದೆ- ತಾಯಿ ತೀರಿಹೋದ ಬಳಿಕ ಒಬ್ಬರೇ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿರಂತರ ಮಳೆಯಿಂದ ಇಂದು ಸಂಜೆ ಮನೆ ಗೋಡೆಗಳು ಕುಸಿದು ಬಿದ್ದು, ಮುಬೀನಾ ಸಿಲುಕಿಕೊಂಡಿದ್ದಾರೆ. ತಕ್ಷಣ ನೆರೆಯ ವರು ಗೋಡೆ ಕೆಳಗೆ ಸಿಲುಕಿ ತೀವ್ರ ವಾಗಿ ಗಾಯಗೊಂಡಿದ್ದ ಮುಬಿನಾಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿ ದ್ದಾರೆ. 2 ದಿನಗಳ ಹಿಂದಷ್ಟೇ ಮಳೆ ಯಿಂದಾಗಿ ಮನೆಗೋಡೆ ಕುಸಿದು ತಾಲೂ ಕಿನ ವೀರನಹೊಸಳ್ಳಿ ಹಾಡಿಯ ಆದಿ ವಾಸಿ ಗಣಪತಿ ಎಂಬುವವರು ಸಾವನ್ನಪ್ಪಿ ರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅನಾಹುತ ಸಂಭವಿಸಿದೆ.

Translate »