Tag: Hunsur

ಹೆಚ್.ಪಿ. ಮಂಜುನಾಥ್ ಬಿರುಸಿನ ಪ್ರಚಾರ
ಮೈಸೂರು

ಹೆಚ್.ಪಿ. ಮಂಜುನಾಥ್ ಬಿರುಸಿನ ಪ್ರಚಾರ

April 27, 2018

ಹುಣಸೂರು: ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ಬನ್ನಿಕುಪ್ಪೆ, ಕಾಡನಕೊಪ್ಪಲು, ತೆಂಕಲಕೊಪ್ಪಲು, ಮರಳಯ್ಯನಕೊಪ್ಪಲು, ಮಾದಹಳ್ಳಿ, ಮೂಡಲಕೊಪ್ಪಲು, ಮಧುಗಿರಿಕೊಪ್ಪಲು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತ ಯಾಚಿಸಿದರು. ಈ ವೇಳೆ ನಂತರ ಮಾತನಾಡಿದ ಶಾಸಕ ಹೆಚ್.ಪಿ. ಮಂಜುನಾಥ್, ಬನ್ನಿಕುಪ್ಪೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹತ್ತಾರು ಕೋಟಿ ರೂ.ಗಳ ರಸ್ತೆ, ನೀರು, ವಸತಿ, ಸಮುದಾಯ ಭವನಗಳು, ದೇವಸ್ಥಾನಗಳು ಜಾತ್ರೆ ಹಬ್ಬ ಹರಿದಿನಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ನನ್ನ ಅವಧಿಯಲ್ಲಿ ನಡೆದಿವೆ. ಇನ್ನೂ ಹೆಚ್ಚಿನ ಸೇವೆ ಮಾಡಲು…

ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ ನಿರ್ಧಾರ
ಮೈಸೂರು

ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ ನಿರ್ಧಾರ

April 26, 2018

ಹುಣಸೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ಆರೋಪಿಸಿ ತಾಲೂಕಿನ ಕೆಲವು ಹಾಡಿ ಆದಿವಾಸಿಗಳು ಪ್ರತಿಭಟನೆ ನಡೆಸಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಬಹಿಷ್ಕರಿ ಸಲು ನಿರ್ಧರಿಸಿದ್ದಾರೆ. ದೊಡ್ಡ ಹೆಜ್ಜೂರು, ನೇರಳೆಕುಪ್ಪೆ ಹಾಗೂ ಹೆಬ್ಬಾಳ ಹಾಡಿ ಆದಿವಾಸಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ತಮ್ಮ ಹಾಡಿಗಳಲ್ಲಿ ಚುನಾವಣಾ ಬಹಿಷ್ಕಾರದ ನಾಮಫಲಕ ಅಳವಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಾಗರಹೊಳೆ ಅರಣ್ಯದಿಂದ ಸ್ಥಳಾಂತರಗೊಂಡ ಗಿರಿ ಜನರಿಗೆ ಭೂಮಿ ನೀಡಿಯೂ ಹಕ್ಕುಪತ್ರ ನೀಡಿಲ್ಲ. ಹೀಗಾಗಿ ಬ್ಯಾಂಕ್‍ಗಳಲ್ಲಿ ಸಾಲ…

ಹುಣಸೂರು: ವಿವಿಧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು

ಹುಣಸೂರು: ವಿವಿಧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

April 25, 2018

ಹುಣಸೂರು: ಹುಣ ಸೂರು ವಿಧಾನಸಭಾ ಕ್ಷೇತ್ರದಿಂದ ನಿನ್ನೆ ಬಿಜೆಪಿ ಅಭ್ಯರ್ಥಿ ರಮೇಶ್ ಕುಮಾರ್, ಸಮಾಜವಾದಿ ಪಕ್ಷದ ಅಭ್ಯರ್ಥಿ ಸತ್ಯ ನಾರಾಯಣ್, ಭಾರತೀಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಲ್ಲೇಶ್, ಪಕ್ಷೇತರ ಅಭ್ಯರ್ಥಿ ಗಳಾದ ಕಲ್ಲಹಳ್ಳಿಯ ರಾಜಣ್ಣ, ಹರೀಶ್ ಹಾಗೂ ಲಕ್ಷ್ಮಣ ನಾಮಪತ್ರ ಸಲ್ಲಿಸಿದರು. ಪಕ್ಷದ ಕಚೇರಿಯಿಂದ ಕಾರ್ಯಕರ್ತ ರೊಡಗೂಡಿ ಮೆರವಣ ಗೆಯಲ್ಲಿ ಹೊರಟು ಉಪವಿಭಾಗಾಧಿಕಾರಿ ಕಚೇರಿಗೆ ಸಾಗಿ ಉಪವಿಭಾಗಾಧಿಕಾರಿ ನಿತೀಶ್ ಅವರಿಗೆ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್, ಎಸ್‍ಸಿ ಮೋರ್ಚಾ…

ಬಿರುಗಾಳಿಗೆ ತೆಂಗಿನ ಮರಗಳು ಧರೆಗೆ
ಮೈಸೂರು

ಬಿರುಗಾಳಿಗೆ ತೆಂಗಿನ ಮರಗಳು ಧರೆಗೆ

April 24, 2018

ಹುಣಸೂರು: ಕಳೆದೆರಡು ದಿನಗಳಿಂದ ಹುಣಸೂರು ತಾಲೂಕಿನ ಅಲ್ಲಲ್ಲಿ ಗುಡುಗು, ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದರೆ, ಮನೆಯ ಮೇಲ್ಚಾವಣೆ ಹಾರಿ ಹೋಗಿದೆ. ಲಕ್ಷಾಂತರ ರೂ.ಗಳ ನಷ್ಟಸಂಭವಿಸಿದೆ. ತಾಲೂಕಿನ ಚಿಕ್ಕಹೆಜ್ಜೂರಿನ ದೇವರಾಜ ಅವರಿಗೆ ಸೇರಿದ ಮನೆ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಅರ್ಧಕ್ಕೆ ಕಡಿದು ಬಿದ್ದಿದೆ. ಮನೆಯ ಮೇಲ್ಚಾವಣ ಗೆ ಹಾಕಿದ್ದ ಹೆಂಚುಗಳು ಬಿರುಗಾಳಿಗೆ ಹಾರಿ ಹೋಗಿದೆ, ಗೋಡೆ ಬಿರುಕು ಬಿಟ್ಟಿದೆ. ಗ್ರಾಮದ ನಂಜುಂಡಪ್ಪ ಎಂಬುವರ ಮನೆ ಸಹ ಬಿರುಕು ಬಿಟ್ಟಿದೆ,…

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ
ಮೈಸೂರು

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ

April 19, 2018

ಹುಣಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಸರ್ಕಾರಿ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣದ ಎಪಿಎಂಸಿ ಯಾರ್ಡ್‍ನ ಜಿ–ಬ್ಲಾಕ್‍ನಲ್ಲಿ ಪ್ರಾಂಗಣ ವಿಸ್ತರಣಾ ಕಾಮಗಾರಿಗೆ ಮಂಡ್ಯದ ಮುರಳೀಧರ್ ಎಂಬುವವರಿಗೆ 2017-18ನೇ ಸಾಲಿನಲ್ಲಿ ಟೆಂಡರ್ ನೀಡಲಾಗಿತ್ತು. ಆದರೆ ಕಾಮಗಾರಿ ಯನ್ನು ಏ.16ರಂದು ಆರಂ ಭಿಸಿದ್ದಾರೆ. ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋ ಪಿಸಿದ್ದಾರೆ. ಮಾ.27 ರಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ಸಹ ಕಾರ್ಮಿಕರು ಕೆಲಸದಲ್ಲಿ ಕಾರ್ಯನಿರತರಾಗಿದ್ದು, ಸ್ಥಳದಲ್ಲಿ ಕಬ್ಬಿಣ,…

ವಿಷ ಸೇವಿಸಿ ಯುವಕ ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ಯುವಕ ಆತ್ಮಹತ್ಯೆ

April 19, 2018

ಹುಣಸೂರು: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಶಿವಪುರ ಗ್ರಾಮದ ಲೇ. ಸ್ವಾಮಿಗೌಡರ ಪುತ್ರ ಸಾಗರ್ (19) ಆತ್ಮಹತ್ಯೆ ಮಾಡಿಕೊಂಡವನು. ಈತ ಗ್ರಾಮದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ದಾಸನಪುರದ ಬಳಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕಾರು ಡಿಕ್ಕಿ: ಪಾದಚಾರಿ ಸಾವು
ಮೈಸೂರು

ಕಾರು ಡಿಕ್ಕಿ: ಪಾದಚಾರಿ ಸಾವು

April 19, 2018

ಹುಣಸೂರು:  ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಪಟ್ಟಣದ ಯಶೋಧರಪುರ ಬಳಿಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕುಂದಹಳ್ಳಿ ಗ್ರಾಮದ ಪುಷ್ಪರಾಜ್ (52) ಮೃತರು. ಕೆಲಸದ ನಿಮಿತ್ತ ವಿರಾಜ ಪೇಟೆಯಿಂದ ಹುಣಸೂರಿಗೆ ಮಂಗಳ ವಾರ ಮಧ್ಯರಾತ್ರಿ ಬಂದ ಪುಷ್ಪರಾಜ್ ಯಶೋಧರಪುರ ಟೀ ಅಂಗಡಿ ಬಳಿ ಬಸ್ ಇಳಿದು ಪಿರಿಯಾಪಟ್ಟಣದ ಕಡೆಗೆ ಹೋಗುವ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಟೀ ಕುಡಿಯುವುದಕ್ಕಾಗಿ ರಸ್ತೆ ದಾಟುತ್ತಿದ್ದಾಗ ಪಿರಿಯಾಪಟ್ಟಣದ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆ…

1 6 7 8
Translate »