ಹುಣಸೂರು: ಹುಣ ಸೂರು ವಿಧಾನಸಭಾ ಕ್ಷೇತ್ರದಿಂದ ನಿನ್ನೆ ಬಿಜೆಪಿ ಅಭ್ಯರ್ಥಿ ರಮೇಶ್ ಕುಮಾರ್, ಸಮಾಜವಾದಿ ಪಕ್ಷದ ಅಭ್ಯರ್ಥಿ ಸತ್ಯ ನಾರಾಯಣ್, ಭಾರತೀಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಲ್ಲೇಶ್, ಪಕ್ಷೇತರ ಅಭ್ಯರ್ಥಿ ಗಳಾದ ಕಲ್ಲಹಳ್ಳಿಯ ರಾಜಣ್ಣ, ಹರೀಶ್ ಹಾಗೂ ಲಕ್ಷ್ಮಣ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಚೇರಿಯಿಂದ ಕಾರ್ಯಕರ್ತ ರೊಡಗೂಡಿ ಮೆರವಣ ಗೆಯಲ್ಲಿ ಹೊರಟು ಉಪವಿಭಾಗಾಧಿಕಾರಿ ಕಚೇರಿಗೆ ಸಾಗಿ ಉಪವಿಭಾಗಾಧಿಕಾರಿ ನಿತೀಶ್ ಅವರಿಗೆ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್, ಎಸ್‍ಸಿ ಮೋರ್ಚಾ ಅಧ್ಯಕ್ಷ ಅಪ್ಪಣ್ಣ, ನಗರಾಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ಮಂಜು ನಾಥ್, ಖಜಾಂಚಿ ವಿರೇಶ್‍ರಾವ್ ಬೋಪಡೆ, ಜಿಲ್ಲಾಧ್ಯಕ್ಷ ಚಂದ್ರಶೇಖರ್, ತಂಬಾಕು ಮಂಡಲಿ ಸದಸ್ಯ ಕಿರಣ್ ಕುಮಾರ್, ಮುಖಂಡರಾದ ಕೆ.ಟಿ. ಗೋಪಾಲ್, ಮಹದೇವ, ವೆಂಕಟಮ್ಮ, ಕಮಲಮ್ಮ, ಬಸವ ರಾಜು ಹಾಗೂ ಇನ್ನಿತರರು ಹಾಜರಿದ್ದರು.
ಸಮಾಜವಾದಿ ಪಕ್ಷದ ಅಭ್ಯರ್ಥಿ, ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯನಾರಾಯಣ್ ತಮ್ಮ ಬೆಂಬಲಿಗರೊಂದಿಗೆ ಮೆರವಣ ಗೆ ಯಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ತಾಲೂಕು ಅಧ್ಯಕ್ಷ ಹೆಚ್.ಎಸ್. ವರದರಾಜು, ಪ್ರಧಾನ ಕಾರ್ಯದರ್ಶಿ ಚಲುವ ರಾಜು, ಯುವ ಅಧ್ಯಕ್ಷ ಕಾಂತರಾಜು, ಮಹಿಳಾ ಅಧ್ಯಕ್ಷೆ ಸವಿತಾಘಾಟ್ಕೆ, ಅಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮಾಜಿ ಸೈನಿಕರಾದ ಚಂಗಪ್ಪ, ಗಣಪತಿರಾವ್, ದೊಡ್ಡೇ ಗೌಡ, ರಮೇಶ್ ಪಾಲ್ಗೊಂಡಿದ್ದರು. ಪಕ್ಷೇತರ ಅಭ್ಯರ್ಥಿ ಕಲ್ಲಹಳ್ಳಿಯ ರಾಜಣ್ಣ, ಹರೀಶ್, ಲಕ್ಷ್ಮಣ್, ಭಾರತೀಯ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಅವರು ಉಪ ವಿಭಾಗಾಧಿ ಕಾರಿ ನಿತೀಶ್ ಅವರಿಗೆ ನಾಮಪತ್ರ ಸಲ್ಲಿಸಿದರು.