ಬಿಜೆಪಿಗೆ ಅಧಿಕಾರ ಶತಸಿದ್ಧ: ಶ್ರೀರಾಮುಲು
ಚಾಮರಾಜನಗರ

ಬಿಜೆಪಿಗೆ ಅಧಿಕಾರ ಶತಸಿದ್ಧ: ಶ್ರೀರಾಮುಲು

April 25, 2018

ಗುಂಡ್ಲುಪೇಟೆ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಸಂಸದ ಶ್ರೀರಾಮುಲು ಹೇಳಿದರು.

ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ತಳವಾರ ಮತ್ತು ಪರಿವಾರ ಸಮುದಾಯ ಅನುಭವಿಸುತ್ತಿದ್ದ ಕಷ್ಟವನ್ನು ಅರಿತು ಈ ಸಮುದಾಯವನ್ನು ಎಸ್ಟಿಗೆ ಸೇರಿಸುವುದರೊಂದಿಗೆ ಕೇಂದ್ರ ಸರ್ಕಾರ ಅನುಕೂಲವನ್ನು ಮಾಡಿಕೊಟ್ಟಿದೆ. ಇದಕ್ಕೆ ನಾವು ಚಿರಋಣ ಯಾಗಿರಬೇಕು ಎಂದರು.
ಕ್ಷೇತ್ರದಲ್ಲಿರುವ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ.ಯ ಪರವಾಗಿ ತಮ್ಮ ಒಲವನ್ನು ತೋರುತ್ತಿದ್ದು, ನಮ್ಮ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಅವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಆ ಮೂಲಕ ಕೇಂದ್ರ ಸರ್ಕಾರದ ಋಣ ತೀರಿಸಬೇಕು ಎಂದರು. ಕ್ಷೇತ್ರದಲ್ಲಿ ನಿರಂಜನ್ ಪರವಾದ ಅಲೆ ಇದ್ದು, ಈ ಬಾರಿ ಅತ್ಯಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿಯಾಗಿ ರಾಜ್ಯದೆಲ್ಲೆಡೆಯೂ ಸಹ ಕಾಂಗ್ರೆಸ್ ವಿರೋಧಿ ಅಲೆ ಇದೆ. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಬರುವುದು ಖಚಿತ. ಇದಕ್ಕಾಗಿ 224 ಕ್ಷೇತ್ರಗಳಲ್ಲೂ ಸಹ ನಾನು ಪ್ರಚಾರ ಕೈಗೊಂಡು ನಮ್ಮ ಸಮುದಾಯಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಯನ್ನು ವಿವರಿಸುತ್ತಿದ್ದೇನೆ. ಮೊಳಕಾಲ್ಮೂರು ಕ್ಷೇತ್ರದಲ್ಲಿಯೂ ಸಹ ನನ್ನ ಗೆಲುವು ನಿಶ್ಚಿತ ಎಂದರು.

ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕಳೆದ ಮೂರು ಸಾರಿಯಿಂದಲೂ ಸಹ ನಿರಂತರವಾಗಿ ಸೋಲು ಕಾಣುತ್ತಾ ಬಂದಿದ್ದೇನೆ. ಇದು ನನ್ನ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ದಯಮಾಡಿ ಈ ಬಾರಿ ಯಾವುದೇ ಆಮಿಷಗಳಿಗೆ ಒಳಗಾಗದೇ ನನಗೆ ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ವಿನಂತಿ ಮಾಡಿದರು.

ಸೇರ್ಪಡೆ: ಇದೇ ಸಂದರ್ಭದಲ್ಲಿ ಶ್ರೀರಾಮುಲು ಸಮ್ಮುಖದಲ್ಲಿ ಪುರಸಭೆ ಮಾಜಿ ಸದಸ್ಯ ಎಲ್.ಮಣ ಕಾಂತ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಚುನಾವಣಾ ಉಸ್ತುವಾರಿ ವೀರಯ್ಯ, ನಾಯಕ ಸಮುದಾಯದ ಮುಖಂಡರಾದ ಎನ್.ಮಲ್ಲೇಶ್, ರಾಮಚಂದ್ರು, ಪುರಸಭೆ ಸದಸ್ಯ ರಮೇಶ್, ಮುಖಂಡರಾದ ದೊಡ್ಡಹುಂಡಿ ಜಗದೀಶ್, ಬಿ.ಪಿ.ರಾಜಶೇಖರಪ್ಪ, ಮಂಗಲನಾಗರಾಜು, ಎಸ್.ಪಿ.ಸುರೇಶ್, ಪ್ರಣಯ್, ಮಲಿದಾಸ್, ಮಲ್ಲರಾಜು, ಎಚ್.ಸಿ.ಮಂಜುನಾಥ್, ಸತೀಶ್, ಹುಚ್ಚೇಗೌಡ, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Translate »