Tag: Sriramulu

ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ
ಮೈಸೂರು

ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ

September 20, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸೋಕೆ ನಾವು ಹೋಗಿಲ್ಲ. ಕಾಂಗ್ರೆಸ್ ನಾಯಕರೇ ಗುಂಪು ಮಾಡಿಕೊಂಡು ಕಚ್ಚಾಡುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಸದಸ್ಯ ಹಾಗೂ ಶಾಸಕ ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ವರ್ಗಾವಣೆ ದಂಧೆ ಹಣದ ಕಾರಣಕ್ಕೆ ಅಸಮಾಧಾನ ಉಂಟಾಗಿದೆ. ಸಮ್ಮಿಶ್ರ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದೆ. ಅವರು ಭಿನ್ನಮತ ಸೃಷ್ಟಿಸಿಕೊಂಡು ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯಾವ ಶಾಸಕರನ್ನೂ ಸಂಪರ್ಕ…

ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು
ಮೈಸೂರು

ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು

July 10, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್, ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ. ಇದನ್ನು ಸರಿಪಡಿಸದಿದ್ದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಪುಷ್ಠಿ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸೋನಾರ್ ಬೀದಿಯ ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿ ಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಹೆಚ್‍ಡಿಕೆ ಮಂಡಿಸಿರುವ ಬಜೆಟ್, ಕೇವಲ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸಿಮಿತವಾಗಿದೆ ಎಂಬ ಭಾವನೆ ಉತ್ತರ ಕರ್ನಾಟಕದ ಜನರಲ್ಲಿ ಮೂಡಿದೆ….

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು
ಮೈಸೂರು

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು

May 29, 2018

ಕೊಪ್ಪಳ: ಜಾತ್ಯಾತೀತ ಜನತಾ ದಳಕ್ಕೆ 100 ವರ್ಷ ಆದರೂ ಬಹು ಮತ ಬರಲ್ಲ. ಬೇಕಾದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಧಿಕಾರ ಇದೆ ಎಂದು ಪೊಲೀಸರನ್ನು ಬಳಸಿ ಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಸರ್ಕಾರ ಬಹಳ ದಿನ ಇರಲ್ಲ. ಸದ್ಯದಲ್ಲೇ ಬಿದ್ದುಹೋಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಯಾಗುವುದು ಶತಸಿದ್ಧ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ
ಚಾಮರಾಜನಗರ

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ

May 5, 2018

ಕೊಳ್ಳೇಗಾಲ:  ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಗೆ ವಲಸೆ ಬಂದಿದ್ದಾರೆ. ನಾನು ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದು, ಎರಡು ಕ್ಷೇತ್ರದಲ್ಲೂ ಕಾರ್ಯಕರ್ತರು ಹಾಗೂ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಅವರು ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಹಾಗೂ ಕೌದಳ್ಳಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಮತಯಾಚಿಸಿ ಮಾತನಾಡಿ. ರಾಜ್ಯದಲ್ಲಿ 80 ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ…

ಸಮುದಾಯದ ಪ್ರಗತಿಗಾಗಿ ಪರಿವಾರ, ತಳವಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ
ಮೈಸೂರು

ಸಮುದಾಯದ ಪ್ರಗತಿಗಾಗಿ ಪರಿವಾರ, ತಳವಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ

April 26, 2018

ತಿ.ನರಸೀಪುರ: ಪರಿವಾರ ಮತ್ತು ತಳವಾರ ಉಪ ಜಾತಿಗಳನ್ನು ಪ.ಪಂಗಡ ಸಮುದಾಯಗಳಿಗೆ ಸೇರ್ಪಡೆ ಗೊಳಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮುದಾಯದ ಸಾಮಾಜಿಕ ಪ್ರಗತಿಗೆ ಹೆಚ್ಚಿನ ಒತ್ತನ್ನು ನೀಡಿದೆ. ವಿಧಾನ ಸಭಾ ಚುನಾವಣೆಯಲ್ಲಿ ಸಮಸ್ತ ನಾಯಕ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿ ಸಬೇಕೆಂದು ಸಂಸದ ಶ್ರೀರಾಮುಲು ಹೇಳಿದರು. ಪಟ್ಟಣದಲ್ಲಿ ನಡೆದ ನಾಯಕ ಸಮು ದಾಯದ ಸಭೆಯಲ್ಲಿ ಮಾತನಾಡಿ, ಸಮುದಾಯ ಬಿಜೆಪಿ ಬೆಂಬಲಿಸಿ ರಾಜ್ಯದಲ್ಲಿ ಅಧಿಕಾರವನ್ನು ನೀಡಿದರೆ ಪ.ಪಂಗಡ ಮೀಸಲಾತಿ ಪ್ರಮಾಣವನ್ನು ಶೇ.7.5 ರಷ್ಟು…

ಪರಿವಾರ, ತಳವಾರ ಸಮುದಾಯ ಎಸ್‍ಟಿ ಸೇರ್ಪಡೆ ಕನಸು ನನಸು ಸಂಸದ ಬಿ. ಶ್ರೀರಾಮುಲು
ಮೈಸೂರು

ಪರಿವಾರ, ತಳವಾರ ಸಮುದಾಯ ಎಸ್‍ಟಿ ಸೇರ್ಪಡೆ ಕನಸು ನನಸು ಸಂಸದ ಬಿ. ಶ್ರೀರಾಮುಲು

April 25, 2018

ನಂಜನಗೂಡು: ಕಳೆದ 30 ವರ್ಷಗಳಿಂದ ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ನಡೆಯಿತು. ಕಾಂಗ್ರೆಸ್ ಸರ್ಕಾರ ಸೇರ್ಪಡೆ ಭರವಸೆ ನೀಡಿ ಕೈ ತೊಳೆದುಕೊಂಡಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರ ಈ ವಿವಾದ ಬಗೆಹರಿಸಿಕೊಡುವ ಮೂಲಕ ನಾಯಕ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಸಂಸದ ಶ್ರೀರಾಮುಲು ಹೇಳಿದರು.ನಗರದ ದವಳ ಸಭಾಂಗಣದಲ್ಲಿ ನಡೆದ ನಾಯಕ ಸಮುದಾಯ ಸಭೆಯಲ್ಲಿ ಅವರು ಮಾತನಾಡಿದರು. 30 ವರ್ಷದಿಂದ ಉದ್ಯೋಗಕ್ಕಾಗಿ, ವಿದ್ಯಾ ಭ್ಯಾಸಕ್ಕಾಗಿ ಜನಾಂಗದ ಅನೇಕ ಬಡವರು ಪ್ರಮಾಣ ಪತ್ರ ಸಿಗದೇ ಪರದಾಡು…

ಬಿಜೆಪಿಗೆ ಅಧಿಕಾರ ಶತಸಿದ್ಧ: ಶ್ರೀರಾಮುಲು
ಚಾಮರಾಜನಗರ

ಬಿಜೆಪಿಗೆ ಅಧಿಕಾರ ಶತಸಿದ್ಧ: ಶ್ರೀರಾಮುಲು

April 25, 2018

ಗುಂಡ್ಲುಪೇಟೆ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಸಂಸದ ಶ್ರೀರಾಮುಲು ಹೇಳಿದರು. ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ತಳವಾರ ಮತ್ತು ಪರಿವಾರ ಸಮುದಾಯ ಅನುಭವಿಸುತ್ತಿದ್ದ ಕಷ್ಟವನ್ನು ಅರಿತು ಈ ಸಮುದಾಯವನ್ನು ಎಸ್ಟಿಗೆ ಸೇರಿಸುವುದರೊಂದಿಗೆ ಕೇಂದ್ರ ಸರ್ಕಾರ ಅನುಕೂಲವನ್ನು ಮಾಡಿಕೊಟ್ಟಿದೆ. ಇದಕ್ಕೆ ನಾವು ಚಿರಋಣ ಯಾಗಿರಬೇಕು ಎಂದರು. ಕ್ಷೇತ್ರದಲ್ಲಿರುವ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ.ಯ ಪರವಾಗಿ ತಮ್ಮ ಒಲವನ್ನು ತೋರುತ್ತಿದ್ದು,…

Translate »