ತಿ.ನರಸೀಪುರ: ಪರಿವಾರ ಮತ್ತು ತಳವಾರ ಉಪ ಜಾತಿಗಳನ್ನು ಪ.ಪಂಗಡ ಸಮುದಾಯಗಳಿಗೆ ಸೇರ್ಪಡೆ ಗೊಳಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮುದಾಯದ ಸಾಮಾಜಿಕ ಪ್ರಗತಿಗೆ ಹೆಚ್ಚಿನ ಒತ್ತನ್ನು ನೀಡಿದೆ. ವಿಧಾನ ಸಭಾ ಚುನಾವಣೆಯಲ್ಲಿ ಸಮಸ್ತ ನಾಯಕ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿ ಸಬೇಕೆಂದು ಸಂಸದ ಶ್ರೀರಾಮುಲು ಹೇಳಿದರು.
ಪಟ್ಟಣದಲ್ಲಿ ನಡೆದ ನಾಯಕ ಸಮು ದಾಯದ ಸಭೆಯಲ್ಲಿ ಮಾತನಾಡಿ, ಸಮುದಾಯ ಬಿಜೆಪಿ ಬೆಂಬಲಿಸಿ ರಾಜ್ಯದಲ್ಲಿ ಅಧಿಕಾರವನ್ನು ನೀಡಿದರೆ ಪ.ಪಂಗಡ ಮೀಸಲಾತಿ ಪ್ರಮಾಣವನ್ನು ಶೇ.7.5 ರಷ್ಟು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸಮುದಾಯವನ್ನು ನಿರ್ಲಕ್ಷಿಸಿರುವುದರಿಂದ ಜಾಗೃತರಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಕೊಡುವ ಮೂಲಕ ಬೆಂಬಲಿಸಬೇಕೆಂದು ಕರೆ ನೀಡಿದರು. ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಮಾತನಾಡಿ, ತಾಲೂಕಿನ ಸಮಸ್ತ ನಾಯಕ ಸಮುದಾಯದ ಪರವಾಗಿ ಕೆಲಸವನ್ನು ಮಾಡಲು ಪಕ್ಷದ ಅಭ್ಯರ್ಥಿಯಾಗಿದ್ದೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಆಮಿಷಕ್ಕೆ ಒಳಗಾಗದೆ ಬಿಜೆಪಿ ಬೆಂಬಲಿ ಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಎಸ್ಟಿ ಅಧ್ಯಕ್ಷ ಮೂಗೂರು ಕುಮಾರ ಹಾಗೂ ಎಸ್ಸಿ ಅಧ್ಯಕ್ಷ ವಿ. ವೆಂಕಟೇಶ್ ಅವರು ಶ್ರೀರಾಮುಲು ಸಮ್ಮುಖ ದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವ ಮೂರ್ತಿ ನಾಯಕ ಸಮುದಾಯ ಮುಖಂಡರು ಹಾಜರಿದ್ದರು.