ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ:ಸಿಹೆಚ್‍ವಿ
ಮೈಸೂರು

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ:ಸಿಹೆಚ್‍ವಿ

April 26, 2018

ಕಂಪಲಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗೆದ್ದುಅಧಿಕಾರದ ಚುಕ್ಕಾಣ ಹಿಡಿಯಲಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್ ನುಡಿದರು.

ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕ ಟೇಶ್ ಪರ ಕಂಪಲಾಪುರ ಕೊಪ್ಪಲಿನಲ್ಲಿ ಮತಯಾಚಿಸಿ ಮಾತನಾಡಿದರು. ಸಿದ್ದ ರಾಮಯ್ಯನವರು ಮುಖ್ಯ ಮಂತ್ರಿಯಾಗಿ ಕಳೆದ 5 ವರ್ಷಗಳಲ್ಲಿ ಜನರ ಆಶೋತ್ತರ ಗಳನ್ನು ಈಡೇರಿಸಿದ್ದಾರೆ. ಜೊತೆಗೆ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ದೀರ್ಘಾ ವಧಿಯ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಬಿಜೆಪಿ ಜೆಡಿಎಸ್ ಕುತಂತ್ರ ರಾಜಕಾರಣ : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದ ರಾಮಯ್ಯರನ್ನು ಸೋಲಿಸಲು ಬಿಜೆಪಿ ಜೆಡಿಎಸ್ ಕುತಂತ್ರ ರಾಜಕಾರಣ ಮಾಡು ತ್ತಿವೆ. ರಾಜ್ಯದ ಜನರ ಆಶೀರ್ವಾದ, ದೈವಾನುಗ್ರಹ ಇರುವವರೆಗೆ ಯಾರೂ ಏನೂ ಮಾಡಲಾಗದು ಎಂದರು.

ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿ ಯಾಗುವುದರ ಜೊತೆಗೆ ರಾಷ್ಟ್ರನಾಯಕ ರಾಗುತ್ತಾರೆ ಎಂದು ನುಡಿದರು.

2019 ಕ್ಕೆ ನಾನೇ ಲೋಕಸಭಾ ಅಭ್ಯರ್ಥಿ :2019 ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ನನ್ನನ್ನು ಗೆಲ್ಲಿಸಿದರೆ ವೆಂಕಟೇಶ್ ಜೊತೆಗೂಡಿ ತಾಲೂ ಕನ್ನು ಇನ್ನೂ ಅಭಿವೃದ್ಧಿ ಮಾಡುತ್ತೇನೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಯಚಂದ್ರ, ಲೋಕೇಶ್, ಡೇರಿ ಅಧ್ಯಕ್ಷ ಎಂ. ರಮೇಶ್, ಗ್ರಾ.ಪಂ.ಸದಸ್ಯ ಪ್ರಕಾಶ್‍ಗೌಡ, ಮಾಜಿ ಉಪಾ ಧ್ಯಕ್ಷ ಕೆ.ಎಂ.ಲಕ್ಷ್ಮಣ್, ಮುಖಂಡರಾದ ನಿಲಂಗಾಲ ಜಯಣ್ಣ, ವಕೀಲ ರಾಜೇಗೌಡ, ಎಸ್.ಅಪ್ಪಾಜಿಗೌಡ, ಕೆ.ಎಂ.ರಾಮಪ್ಪ, ಪಂಪ್‍ಸೆಟ್ ಮಹದೇವ್, ಕೆ.ಗೋಪಾಲ್, ಪಿ.ಎಂ.ಬಸವರಾಜ್ ಹಾಜರಿದ್ದರು.

Translate »