ನಂಜನಗೂಡಿನಲ್ಲಿ ಭಗೀರಥ ಜಯಂತಿ ಆಚರಣೆ
ಮೈಸೂರು

ನಂಜನಗೂಡಿನಲ್ಲಿ ಭಗೀರಥ ಜಯಂತಿ ಆಚರಣೆ

April 26, 2018

ನಂಜನಗೂಡು: ತಾಲೂಕು ಉಪ್ಪಾರ ಜನಾಂಗದ ವತಿ ಯಿಂದ (ಮೇಲು ಸಕ್ಕರೆ ಶೆಟ್ಟರು) ನಗರದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಉಪ್ಪಾರರ ಕಲ್ಯಾಣ ಮಂಟಪದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು.

ಸಮಾಜದ ತಾಲೂಕು ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ಹಗಿನವಾಳು ಮೂಗಶೆಟ್ಟಿ ಮಾತನಾಡಿ, ಭಗೀರಥ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಮಹರ್ಷಿ ಗಳ ತತ್ವ ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಇಂತಹ ಮಹನೀಯ ರನ್ನು ಒಂದು ವರ್ಗಕ್ಕೆ ಸೀಮಿತ ಮಾಡ ಬಾರದು. ಎಲ್ಲಾ ವರ್ಗಗಳವರೂ ಈ ಮಹ ನೀಯರ ಜಯಂತಿ ಆಚರಿಸುವಂತಾಗ ಬೇಕೆಂದು ತಿಳಿಸಿದರು.

ಜಿ.ಪಂ ಸದಸ್ಯ ಲತಾ ಸಿದ್ದಶೆಟ್ಟಿ, ಸಮಾ ಜದ ಪ್ರಧಾನ ಕಾರ್ಯದರ್ಶಿ ಡೈರಿ ಮಹ ದೇವಶೆಟ್ಟಿ, ಮುಖಂಡರಾದ ಕನಕನಗರ ಮಹದೇವು, ಅಣ್ಣಯ್ಯ ಶೆಟ್ಟಿ, ಕೃಷ್ಣ, ಕೂಡ್ಲಾಪುರ ರಾಜು, ಗಣೇಶ್, ತಾ.ಪಂ ಸದಸ್ಯ ವೆಂಕಟೇಶ್, ನಾಗರಾಜು, ಸಿದ್ದ ರಾಜು, ಮಹದೇವ ಶೆಟ್ಟಿ, ಪುಟ್ಟಸ್ವಾಮಿಶೆಟ್ಟಿ, ನಾಗರಾಜು, ಮಂಜುನಾಥ್, ಹೆಮ್ಮರಗಾಲ ಬೆಳ್ಳಶೆಟ್ಟಿ, ಚಿಕ್ಕಣ್ಣ, ಗಿರೀಶ್ ಹಾಗೂ ಇನ್ನಿತರರು ಹಾಜರಿದ್ದರು.

Translate »