ಕಾಂಗ್ರೆಸ್‍ಗೆ ಸಿ.ಕೆ.ಮಂಜುನಾಥ್ ರಾಜೀನಾಮೆ
ಚಾಮರಾಜನಗರ

ಕಾಂಗ್ರೆಸ್‍ಗೆ ಸಿ.ಕೆ.ಮಂಜುನಾಥ್ ರಾಜೀನಾಮೆ

April 26, 2018

ಚಾಮರಾಜನಗರ: ಚಾಮರಾಜನಗರ ಟೌನ್ ಬ್ಲಾಕ್ ಕಾಂಗ್ರೆಸ್ ಎಸ್‍ಸಿ ವಿಭಾಗದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಟಿ ಯಲ್ಲಿ ಅವರು ಈ ವಿಷಯ ತಿಳಿಸಿದರು.

ನಾನು ಕಳೆದ 15 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೆ. ಎಲ್ಲಾ ಚುನಾವಣೆ ಗಳಲ್ಲೂ ಸಕ್ರಿಯವಾಗಿ ಓಡಾಡುತ್ತಿದ್ದೆ. ನನ್ನ ಕಾರ್ಯಕ್ಷಮತೆಯನ್ನು ಪರಿಗಣ ಸಿ ನನ್ನನ್ನು ಚಾಮರಾಜನಗರ ನಗರಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹಾಗೆಯೇ ಪಕ್ಷದ ಕೆಲಸ ನಿರ್ವಹಿಸಲು ಚಾ.ನಗರ ಟೌನ್ ಕಾಂಗ್ರೆಸ್ ಎಸ್‍ಸಿ ವಿಭಾಗದ ಅಧ್ಯಕ್ಷ ರನ್ನಾಗಿ ಮಾಡಲಾಗಿತ್ತು. ಆದರೆ ನನ್ನ ಗಮನಕ್ಕೆ ತರದೆ ನನ್ನನ್ನು ನಗರಸಭೆ ನಾಮ ನಿರ್ದೇಶನ ಸ್ಥಾನದಿಂದ ತೆಗೆದು ಹಾಕ ಲಾಯಿತು. ಇದರಿಂದ ಬೇಸರ ಆಯಿತು ಹಾಗೂ ಪಕ್ಷದಲ್ಲಿ ಇತ್ತೀಚಿನ ಬೆಳವಣ ಗೆ ಗಳಿಂದ ಬೇಸರವಾದ ಕಾರಣ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದರು.

ಪುಟ್ಟರಂಗಶೆಟ್ಟಿ ವಿರುದ್ಧ ವಾಗ್ದಾಳಿ: ಇದೇ ವೇಳೆ ಸಿ.ಕೆ.ಮಂಜುನಾಥ್ ಅವರು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು. ಪುಟ್ಟರಂಗಶೆಟ್ಟಿ ದಲಿತ ಸ್ವಾಭಿ ಮಾನ ರಾಜಕಾರಣ ಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ದಲಿತರನ್ನು ಗಣ ನೆಗೆ ತೆಗೆದುಕೊಳ್ಳುತ್ತಿಲ್ಲ. ದಲಿತರು ತಮ್ಮನ್ನೇ ಬೆಂಬಲಿಸುತ್ತಾರೆ ಎಂಬ ಭ್ರಮೆಯಲ್ಲಿ ಪುಟ್ಟ ರಂಗಶೆಟ್ಟಿ ಇದ್ದು, ದಲಿತರನ್ನು ನಿರ್ಲಕಿ ್ಷಸುತ್ತಿದ್ದಾರೆ. ಹೀಗಾಗಿ ಬೇಸತ್ತು ನಾನು ಆ ಪಕ್ಷ ತೊರೆಯುತ್ತಿದ್ದೇನೆ ಎಂದರು.

ದಲಿತರ ಮತಗಳನ್ನು ಪಡೆದು ಶಾಸಕರಾದ ಜಿಲ್ಲೆಯ ಜನಪ್ರತಿನಿಧಿಗಳು, ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿಗೆ ಯಾರೊಬ್ಬರು ಧ್ವನಿಗೂಡಿಸಲಿಲ್ಲ ಎಂದು ದೂರಿದ ಸಿ.ಕೆ.ಮಂಜುನಾಥ್, ಈ ಚುನಾವಣೆಯಕಲ್ಲಿ ದಲಿತರು ಕಾಂಗ್ರೆ ಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನಾನು ಯಾವ ಪಕ್ಷ ಸೇರಬೇಕು ಎಂದು ಇನ್ನೂ ತೀರ್ಮಾನಿಸಿಲ್ಲ. ಒಂದೆರಡು ದಿನ ದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು. ಬ್ಲಾಕ್ ಕಾಂಗ್ರೆಸ್ ಎಸ್‍ಸಿ ವಿಭಾಗದ ಉಪಾಧ್ಯಕ್ಷ ಕೃಷ್ಣಮೂರ್ತಿ, ರಾಮಸಮುದ್ರ ಪ್ರಸನ್ನ, ಗಂಗವಾಡಿ ಸೋಮಣ್ಣ, ಬೈರ ಲಿಂಗಸ್ವಾಮಿ, ಪ್ರವೀಣ್ ಕುಮಾರ್, ಭಾನುಪ್ರಕಾಶ್ ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.

Translate »