ಏ.28: `ಮಾನಸ ಸರೋವರ- 50’ ಸಂಗೀತ ಕಾರ್ಯಕ್ರಮ
ಮೈಸೂರು

ಏ.28: `ಮಾನಸ ಸರೋವರ- 50’ ಸಂಗೀತ ಕಾರ್ಯಕ್ರಮ

April 26, 2018

ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಡಾ.ಶ್ರೀನಾಥ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವಸಂತಗಳು ತುಂಬಿ ರುವ ಹಿನ್ನೆಲೆಯಲ್ಲಿ ನಿನಾದ ಮ್ಯೂಸಿಕಲ್ ಟ್ರಸ್ಟ್ ವತಿಯಿಂದ ಶ್ರೀನಾಥ್‍ರ ಗೌರApril 28: `Mansa Lake – 50 ‘music program ವಾರ್ಥ `ಮಾನಸ ಸರೋವರ-50’ ಶೀರ್ಷಿಕೆಯಡಿ ಏ.28ರಂದು ಸಂಗೀತ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎ.ಎಸ್.ಪ್ರಸನ್ನಕುಮಾರ್ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಮೈಸೂರಿನ ಜೆಕೆ ಮೈದಾನದ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಉದಯೋನ್ಮುಖ ಗಾಯಕ ಮತ್ತು ಗಾಯಕಿಯರು ಶ್ರೀನಾಥ್ ಅಭಿನಯದ ಸಿನಿಮಾಗಳ ಗೀತೆಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವತಃ ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಗಾಯಕರಾದ ಅಮೂಲ್ಯ, ಅಪೂರ್ವ, ಅಶ್ವಿನಿ, ಭವಾನಿ, ನಟರಾಜ್, ಭುವನೇಶ್ವರಿ ಸೇರಿದಂತೆ ಹಲವು ಗಾಯಕರು ಗೀತೆಗಳನ್ನು ಸಾದರಪಡಿಸಲಿದ್ದಾರೆ ಎಂದರು. ಟ್ರಸ್ಟ್‍ನ ಕಾಶಿನಾಥ್ ಕಾಮತ್, ವೆಂಕಟೇಶ್, ಮಂಜುನಾಥ್, ಲೋಕೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »