ನಾಯಕತ್ವ ತ್ಯಜಿಸಿದ ಗಂಭೀರ್, ಶ್ರೇಯಸ್‍ಗೆ ಪಟ್ಟ
ದೇಶ-ವಿದೇಶ

ನಾಯಕತ್ವ ತ್ಯಜಿಸಿದ ಗಂಭೀರ್, ಶ್ರೇಯಸ್‍ಗೆ ಪಟ್ಟ

April 26, 2018

ನವದೆಹಲಿ: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡುತ್ತಿರು ವುದರಿಂದ ಬೇಸತ್ತು ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದಾರೆ. ಗಂಭೀರ್ ನಾಯಕತ್ವದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು ರನ್ ರೇಟ್‍ನಲ್ಲೂ ತಂಡ ಹೇಳಿಕೊಳ್ಳುವಂತಾ ಸಾಧನೆ ಮಾಡಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣ ಸಿ ಗೌತಮ್ ಗಂಭೀರ್ ನಾಯಕತ್ವದಿಂದ ಕೆಳಗಿಳಿದಿದ್ದು ಯುವ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ. ಮತ್ತೊಂದೆಡೆ ಗೌತಮ್ ಗಂಭೀರ್ ಸಹ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆರು ಪಂದ್ಯಗಳ ಪೈಕಿ ಗೌತಮ್ ಕೇವಲ 85 ರನ್‍ಗಳನ್ನು ಮಾತ್ರ ಸಿಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 55 ರನ್ ಸಿಡಿಸಿದ್ದು ಬಿಟ್ಟರೆ ಇನ್ಯಾವ ಪಂದ್ಯದಲ್ಲೂ 20 ರನ್‍ಗಳ ಗಡಿ ದಾಟಿಲ್ಲ.

Translate »