ಮೈಸೂರು: ಕುವೆಂಪುನಗರದ ನಾದಾಮೃತ ಸಂಗೀತ ವಿದ್ಯಾಲಯವು ರಾಜು ಅನಂತಸ್ವಾಮಿ ಸ್ಮರಣಾರ್ಥ ಏ.28ರಂದು ಸಂಜೆ 5.30 ಗಂಟೆಗೆ ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯ ಕ್ರಮ ಆಯೋಜಿಸಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಾರ್ಯಕ್ರಮಕ್ಕೆ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಚಾಲನೆ ನೀಡಲಿದ್ದು, ರಂಗಾ ಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಅಧ್ಯಕ್ಷತೆ ವಹಿಸುವರು. ಮೈಸೂರು ಅನಂತಸ್ವಾಮಿಯವರ ಪತ್ನಿ ಶಾಂತಾ ಅನಂತಸ್ವಾಮಿ ಭಾಗವಹಿಸುವರು ಎಂದರು. ಹಿರಿಯ ತಬಲ ವಾದಕ ಇಂದುಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಿದ್ದು, ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರ ಭಾಗವಹಿಸುವರು. ನಂತರ ವಿದ್ಯಾರ್ಥಿಗಳಿಂದ ರಾಜು ಅನಂತಸ್ವಾಮಿ ಗೀತಗಾಯನ ನಡೆಯಲಿದೆ ಎಂದರು.