ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ತಮ್ಮ ನೂರಾರು ಬೆಂಗಲಿಗರೊಂದಿಗೆ ಬುಧವಾರ ಚಾಮರಾಜನಗರ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಬೆಳಿಗ್ಗೆ 8 ಘಂಟೆಗೆ ನಗರದ ಚಾಮರಾಜೇ ಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಪ್ರಚಾರ ಅರಂಭಿಸಿದರು. ನಗರದ ಚಿಕ್ಕಂಗಡಿ ಬೀದಿ, ಬಣಜಿಗರ ಬೀದಿ, ಸಂತೇ ಮರಹಳ್ಳಿ ವೃತ್ತ, ಕೆಳಗಡೆ ನಾಯಕರ ಬೀದಿ, ಉಪ್ಪಾರರ ಬೀದಿ, ಬೆಸ್ತರ ಬೀದಿ, ಆದಿಶಕ್ತಿ ದೇವಸ್ಥಾನದ ಬೀದಿ, ಪೋಸ್ಟ್ ಆಫೀಸ್ ರಸ್ತೆ, ರೈಲ್ವೆ ಬಡಾವಣೆಯ ನಾಯಕರ ಬೀದಿ ಸೇರಿದಂತೆ ನಗರದ ವಿವಿಧೆಡೆ ತಮ್ಮ ಬೆಂಬಲಿಗ ರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕೆಳಗಡೆ ನಾಯಕರ ಬೀದಿ ಮತ್ತು ಉಪ್ಪಾರ ಬೀದಿಯಲ್ಲಿ ಮಹಿಳೆಯರು ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರಿಗೆ ಆರತಿ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಮಾತ ನಾಡಿದ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಚಾಮರಾಜನಗರ ಪಟ್ಟಣದಲ್ಲಿ ಆಡಳಿತ ಪಕ್ಷದ ವಿರೋಧಿ ಅಲೆ ಇರುವುದರಿಂದ ಬಿಜೆಪಿಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಮಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಈ ಬಾರಿ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅತ್ಯಧಿಕ ಮತಗಳನ್ನು ಪಡೆದು ಜಯಗಳಿ ಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 10 ಬಾರಿ ಚಾಮರಾಜ ನಗರಕ್ಕೆ ಭೇಟಿ ನೀಡಿದರೂ ಚಾಮರಾಜ ನಗರ ಪಟ್ಟಣ ಯಾವುದೇ ಅಭಿವೃದ್ಧಿ ಕಾಣ ಲಿಲ್ಲ. ನಗರದಲ್ಲಿ ರಸ್ತೆಗಳಿಲ್ಲದೆ ಜನರು ಒಡಾಡುವುದಕ್ಕೆ ಆಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದೇ ಇವರ ಸಾಧನೆ. ಒಂದು ಡಿವಿಯೇಷನ್ ರಸ್ತೆ ಮಾಡಲು ಎರಡು ವರ್ಷ ಬೇಕೇ ಎಂದು ಪ್ರಶ್ನಿಸಿದ ಅವರು, ಇನ್ನು ನಗರದಲ್ಲಿ 10 ವರ್ಷಗಳಾದರೂ ಒಳಚರಂಡಿ ಕಾಮಗಾರಿ ಮುಗಿದಿಲ್ಲ. ಇದ ರಿಂದ ನಗರದ ಜನತೆ ನರಕಯಾತನೆ ಅನುಭವಿಸುವಂತಾಗಿದೆ. ಇದೇ ಚಾಮರಾಜ ನಗರಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಮಲ್ಲಿಕಾರ್ಜುನಪ್ಪ ವ್ಯಂಗ್ಯವಾಡಿದರು.
ಚಾಮರಾಜನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಜಯಗಳಿಸಿದರೆ ಚಾಮರಾಜನಗರ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡ ಲಾಗುವುದು, ನಗರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು. ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಸೇರಿದಂತೆ ನಗರದ ಜನತೆಗೆ ಮೊದಲು ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪಾದಯಾತ್ರೆಯಲ್ಲಿ ಪತ್ನಿ ರಾಜೇಶ್ವರಿ ಅವರು ಪಾಲ್ಗೊಂಡು ಪತಿ ಮಲ್ಲಿಕಾರ್ಜುನಪ್ಪ ಅವರಿಗೆ ಸಾಥ್ ನೀಡಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ನಾಗಶ್ರೀ ಪ್ರಸಾಪ್, ನಗರಸಭಾ ಸದಸ್ಯರಾದ ರಾಜೇಶ್, ಸೆಲ್ವಿಬಾಬು, ಕುಮಾರ್, ಲೋಕೇಶ್, ನಾರಾ ಯಣಸ್ವಾಮಿ, ಶ್ರೀಕಾಂತ್, ಮೂಡ್ಲುಪುರ ರಾಜಶೇಖರ್, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಮಂಜುನಾಥ್, ಕಾಂತು, ನಗರಸಭಾ ಮಾಜಿ ಅಧ್ಯಕ್ಷ ಮಹದೇವ ನಾಯಕ, ನಂದಿಭವನ ಪ್ರಸಾದ್, ಮೂಡ್ಲು ಪುರ ನಂದೀಶ್, ಬಿಜೆಪಿ ಟೌನ್ ಅಧ್ಯಕ್ಷ ಸುಂದರ್ ರಾಜ್, ಶಿವಣ್ಣ, ಪೃಥ್ವಿರಾಜ್, ಶಿವನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜ್, ಎಂಅರ್‍ಎಫ್ ಮಹೇಶ್, ಮಾಧ್ಯಮ್ ಪ್ರಮುಖ ಮಂಜುನಾಥ್, ವೀರೇಂದ್ರ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.