ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಷಾದ ರಾಜ್ಯಪಾಲರು ನೀಡಿದ ಸಮಯಾವಕಾಶದಲ್ಲಿ ಬಹುಮತ ಸಾಬೀತುಪಡಿಸಬಹುದಿತ್ತು ಆದರೆ ಕೋರ್ಟ್ ಆದೇಶದಿಂದ ಕೈತಪ್ಪಿತು ಪಕ್ಷದ ಕಾರ್ಯಕಾರಣ ಯಲ್ಲಿ ವಿಚಾರ ಪ್ರಸ್ತಾಪ ಬೆಂಗಳೂರು: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯ ದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಕಾರ್ಯಕಾರಣ ಉದ್ಘಾಟಿಸಿ ಮಾತನಾಡಿದ ಬಿಎಸ್‍ವೈ, ವಿಧಾನಸಭೆ ಚುವಾವಣೆ…
ಚುನಾವಣಾ ಪ್ರಚಾರ ವೇಳೆ ಗ್ಯಾಸ್ ಬಲೂನ್ ಸ್ಫೋಟ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿರುವ ಬಡ ಬಾಲಕ
June 16, 20183 ತಿಂಗಳಾದರೂ ದೊರಕದ ಪರಿಹಾರ, ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ ಮಂಡ್ಯ: ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಡ ಬಾಲಕನೊಬ್ಬನ ಬದುಕು ಬರಡಾಗಿದೆ. ತೀವ್ರ ಕಡು ಬಡತನದ ಈ ಕುಟುಂಬ ಗಾಯಾಳು ಬಾಲಕನನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ನೆರವು ನೀಡುತ್ತೇವೆ ಎಂದಿದ್ದ, ದುರಂತಕ್ಕೆ ಕಾರಣರೂ ಆದ ಕಾಂಗ್ರೆಸ್ ನಾಯಕರು ಇತ್ತ ಸುಳಿದಿಲ್ಲ. ತೀವ್ರ ಸುಟ್ಟಗಾಯಗಳಿಂದ ಕಳೆದ ಮೂರು ತಿಂಗಳಿಂದ ನರಳುತ್ತ್ತಿರೋ ಈ ಬಾಲಕನ ಹೆಸರು ಮಾದೇಶ. ಏನಿದು ಪ್ರಕರಣ: ಕಳೆದ ಮಾರ್ಚ್ 23…
ಆಳುವವರಿಗೆ ವಿದ್ಯಾರ್ಹತೆ ಬೇಕಲ್ಲವೇ?
June 3, 2018– ಡಾ. ವಿ. ರಂಗನಾಥ್ ಕರ್ನಾಟಕ ವಿಧಾನಸಭೆಗೆ 12.5.2018 ರಂದು ಚುನಾವಣೆ ನಡೆದು, 15.2.2018 ರಂದು ಮತಗಳ ಎಣಿಕೆಯೂ ಮುಗಿದಿದೆ. ಈ ಸಲದ ಚುನಾ ವಣೆಯ ಫಲಿತಾಂಶ ಹೇಗಿರಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತಾರು ದಿನ ರಾಜ್ಯ ಪ್ರವಾಸ ಮಾಡಿ, ಬಿಜೆಪಿಯವರು ಹೇಳಿಕೊಳ್ಳುವಂತೆ ‘ಮೋದಿ ಅಲೆ’ ಸೃಷ್ಟಿಸಿದ್ದರು. ಅದಕ್ಕೆ ಕೌಂಟರ್ ಎನ್ನುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಅನೇಕ ಬಾರಿ ರಾಜ್ಯ ಪ್ರವಾಸ ಮಾಡಿ, ಅವರ ಪಕ್ಷದ ಪರ ಪ್ರಚಾರ ಮಾಡಿದರು….
ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ
May 29, 2018ಮೈಸೂರು: ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕ್ಷೇತ್ರದ ಜನತೆ ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ. ಆದರೂ ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಸೋಲು ಗೆಲುವು ಸಹಜ. ಹಾಗೆಂದು ಎದೆಗುಂದದೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಶಾಸಕ ಅವಧಿಯಲ್ಲಿ ತಾವು ರಸ್ತೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಶೇ.90ರಷ್ಟು ಅಭಿವೃದ್ಧಿಪರ ಕೆಲಸಗಳನ್ನು…
ಕುಮಾರಸ್ವಾಮಿಗೆ ವಿಶ್ವಾಸ ಮತ
May 26, 2018ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿದರು. ಆರು ತಿಂಗಳ ಮಟ್ಟಿಗೆ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ರಾಜ್ಯಪಾಲರು, ಕುಮಾರಸ್ವಾಮಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಮುಖ್ಯಮಂತ್ರಿಯವರ ವಿಶ್ವಾಸ ಮತ ಮಂಡನೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ತಮ್ಮ ಪಕ್ಷದ ಸದಸ್ಯರೊಟ್ಟಿಗೆ…
ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ, ಕಾಂಗ್ರೆಸ್ ಮುಖಂಡರೇ ಸರ್ಕಾರ ರಚನೆ ಪ್ರಸ್ತಾಪ ಮುಂದಿಟ್ಟರು…
May 26, 2018ಬೆಂಗಳೂರು: ಸಂದಿಗ್ದ ಸನ್ನಿವೇಶದಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಚುನಾವಣೆಗೂ ಮುನ್ನ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಿ, ರಾಜ್ಯಕ್ಕೆ ಮತ್ತು ನನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್‍ಗೆ ಇಡೀ ರಾಜ್ಯದಲ್ಲಿ ಒಳ್ಳೆ ಹೆಸರು ತಂದುಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಬಡವರು ಮತ್ತು ರೈತರ ಕಲ್ಯಾಣಕ್ಕೆ ನನ್ನ ಸರ್ಕಾರ ಸದಾ ಸಿದ್ಧ. ಮೈತ್ರಿ ಕಾಂಗ್ರೆಸ್ ನಾಯಕರೊಟ್ಟಿಗೆ ಚರ್ಚೆ ಮಾಡಿ, ರೈತರ ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಮತ್ತೆ ಪುನರುಚ್ಛಾರ ಮಾಡಿದರು. ಅಧಿಕಾರಕ್ಕೆ ಬರಲು ಕಾರಣಕರ್ತರಾದ ಕಾಂಗ್ರೆಸ್…
ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಮತದಾನ ಜಾಗೃತಿ: ಡಿಸಿಯಿಂದ ಜಾಗೃತಿ ಓಟ, ಮಾನವ ಸರಪಳಿ ರಚನೆ, ಮಾನವ ನಿರ್ಮಿತ ಕರ್ನಾಟಕ ನಕ್ಷೆ ಪ್ರದರ್ಶನ
May 9, 2018ಹಾಸನ: ಜಿಲ್ಲಾಡಳಿತ, ಜಿಪಂ ಸೇರಿದಂತೆ ಇತರೆ ಇಲಾಖೆ, ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೇರಿ ದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ಗಮನ ಸೆಳೆದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇಂದು ವಿಶಿಷ್ಟ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಜಾಫರ್ ಅವರು, ಜಿಪಂ ಸಿಇಓ…
`ಸಿದ್ದರುಪಯ್ಯ’ ಸರ್ಕಾರ ಇರುವವರೆಗೂ ಅಭಿವೃದ್ಧಿ ಅಸಾಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ
May 8, 2018ಸೋಮವಾರಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ದರುಪಯ್ಯ ಎಂದು ಕರೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಕರ್ನಾಟಕದಲ್ಲಿ ಸಿದ್ದರುಪಯ್ಯಾ ಸರ್ಕಾರ ಇರುವವರೆಗೆ ರಾಜ್ಯ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು. ಭಾರತೀಯ ಜನತಾಪಕ್ಷದ ವತಿಯಿಂದ ಇಲ್ಲಿನ ಜೇಸಿವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿಯ ಚಿಂತನೆಯಿಲ್ಲ. ಜನನಿ ಜನ್ಮ ಭೂಮಿಯ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಮತ್ತು ಗೌರವ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಯ…
ದೇವೇಗೌಡರು ಪ್ರಧಾನಿ, ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಒಕ್ಕಲಿಗಗೌಡ ನನಗೂ ಒಂದು ಅವಕಾಶ ಬೇಕು ಇಂಧನ ಸಚಿವ ಡಿ.ಕೆ.ಶಿವಕುಮಾರ್
May 8, 2018ಸೋಮವಾರಪೇಟೆ: ಒಕ್ಕಲಿಗ ಕೋಟಾದಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಅವರು ಕೇಳುವುದರಲ್ಲಿ ಅರ್ಥವಿಲ್ಲ. ನಾನು ಕೂಡ ಒಕ್ಕಲಿಗನಾಗಿದ್ದು, ಮುಂದಿನ ದಿನಗಳಲ್ಲಿ ನನಗೂ ಕೂಡ ಅವಕಾಶ ಸಿಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಜೆಡಿಎಸ್ 20 ಸ್ಥಾನವನ್ನೂ ಪಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಈಗಾಗಲೇ ಜೆಡಿಎಸ್‍ನವರಿಗೆ ಅರಿವಾಗಿರುವುದರಿಂದ ನಮ್ಮ ಪ್ರಣಾಳಿಕೆಗೆ ಬೆಂಬಲ ನೀಡುವ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿಕೆ…
ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿನ ಸಂಚಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಬಿಎಸ್‍ವೈ ವಿರುದ್ಧ ವಾಗ್ದಾಳಿ
May 8, 2018ಚಾಮರಾಜನಗರ: ಜಿಲ್ಲೆಯ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭೇಟಿ ನೀಡಿ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮೊದಲಿಗೆ ಹನೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಲ್ಲಿನ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ನಂತರ ಹೆಲಿಕಾಪ್ಟರ್‍ನಲ್ಲಿ ಕೊಳ್ಳೇಗಾಲಕ್ಕೆ ಆಗಮಿಸಿದರು. ಅಲ್ಲಿನ ನ್ಯಾಷನಲ್ ಮಿಡಲ್ ಸ್ಕೂಲ್…