Tag: Karnataka Elections 2018

ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?
ಹಾಸನ

ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?

May 7, 2018

ಹಾಸನ: ಎಲ್ಲಾ ಪಕ್ಷಗಳಲ್ಲೂ ಗುರುತಿಸಿಕೊಂಡು ಪ್ರಚಾರ ಮಾಡುತ್ತಿರುವ ಚಲನಚಿತ್ರ ನಟರಿಗೆ ಯಾವ ಬದ್ಧತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ತಾಲೂಕಿನ ಗೊರೂರು ಸಂತೇಮಾಳ ದಲ್ಲಿ ನಡೆದ ಜೆಡಿಎಸ್, ಬಿಎಸ್‍ಪಿ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಚಲನಚಿತ್ರ ನಟನೋರ್ವ ಹಾಸನದಲ್ಲಿ ಬೆಳಿಗ್ಗೆ ಜೆಡಿಎಸ್ ಪರ ಮತ ಯಾಚನೆ ಮಾಡಿ, ಮಧ್ಯಾಹ್ನ ಸಕಲೇಶಪುರ ದಲ್ಲಿ ಬಿಜೆಪಿ ಪರ ಮತ ನೀಡಿ ಎನ್ನುವ ಇವರಿಗೆ ಯಾವ ಬದ್ಧತೆ ಇದೆ…

ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ
ಹಾಸನ

ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ

May 7, 2018

ಅರಸೀಕೆರೆ: ಜಿಲ್ಲೆಯ ಅರಸೀ ಕೆರೆ ವಿಧಾನ ಸಭೆ ಕ್ಷೇತ್ರವು ಜಿಲ್ಲೆಯ ಉಳಿದ ಕ್ಷೇತ್ರಗಳಂತೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ ಏರ್ಪಟ್ಟಿದೆ. ಹಾಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ತಮ್ಮ ಹತ್ತು ವರ್ಷಗಳ ಸಾಧನೆಗಳನ್ನುಜನರ ಮುಂದೆ ತೆಗೆದುಕೊಂಡು ಹೋಗುವ ಮೂಲಕ ಮೂರನೇ ಬಾರಿಗೆ ಗೆಲುವನ್ನು ತಮ್ಮ ದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹ್ಯಾಟ್ರಿಕ್ ಹೀರೋ ಆಗಲು ಹಗಲಿರುಳು ಶ್ರಮಿಸುತ್ತಿ ದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ದಿವಂಗತ ಜಿ.ಎಸ್ ಬಸವರಾಜು ಪುತ್ರ ಡಿ.ಬಿ.ಶಶಿಧರ್…

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್
ಚಾಮರಾಜನಗರ

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್

May 6, 2018

ಚಾಮರಾಜನಗರ:  ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ. ಇದು 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ `ಕೈ’ ಕೋಟೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ‘ಕಮಲ’ ವನ್ನು ಅರಳಿಸಬೇಕು ಎಂದು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ `ಕೈ’ಯ ಕೋಟೆಯಾಗಿದೆ. 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ…

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ
ಚಾಮರಾಜನಗರ

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ

May 6, 2018

ಚಾಮರಾಜನಗರ:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರೈತರಿಗೆ ಅನೇಕ ಉಪಯುಕ್ತವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರಿಗೆ, ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಎಲ್ಲಾ ವರ್ಗದ ಜನರಿಗೂ ಒಂದಲ್ಲ…

ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ
ಚಾಮರಾಜನಗರ

ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ

May 6, 2018

ಸಂತೇಮರಹಳ್ಳಿ:  ಕೊಳ್ಳೇಗಾಲ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡ ರೊಂದಿಗೆ ಸಂತೇಮರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಬಿರು ಸಿನ ಮತ ಪ್ರಚಾರ ನಡೆಸಿದರು. ಸಂತೇಮರಹಳ್ಳಿಯ ಮಹದೇಶ್ವರ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮತ ಯಾಚನೆ ಆರಂಭಿಸಿದರು. ಈ ವೇಳೆ ಕಾರ್ಯಕರ್ತರು ಎ.ಆರ್.ಕೃಷ್ಣಮೂರ್ತಿ ಅವರಿಗೆ ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು. ತಮಟೆ ಹಾಗೂ ಪಟಾಕಿ ಸಿಡಿಸಿ ಘೋಷಣೆ ಕೂಗಿದರು. ಬಳಿಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಮೀಸಲು ಕ್ಷೇತ್ರ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದು,…

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಹಾಸನ

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

May 5, 2018

ಹೊಳೆನರಸೀಪುರ: ಸಿಎಂ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಜೆಡಿಎಸ್ ಬೆಂಬಲಿಗರಿಂದ ತಾಲೂಕಿನ ವಿವಿಧೆಡೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಮಣ್ಣು ಸುರಿದು, ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದರೆ, ಮಹಿಳಾ ಕಾರ್ಯ ಕರ್ತರು ಪೊರಕೆ ಪ್ರದರ್ಶಿಸಿ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವೆಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ…

ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು
ಚಾಮರಾಜನಗರ

ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು

May 5, 2018

ಚಾಮರಾಜನಗರ: ಇದೇ ತಿಂಗಳ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಒಟ್ಟು 830887 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 207603 ಮತದಾರರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 211522 ಮತದಾರರು, ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 206146 ಮತ ದಾರರು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 205616 ಮತದಾರರು (ಒಟ್ಟು 830887) ಹಕ್ಕು ಚಲಾ ಯಿಸಲಿದ್ದಾರೆ. ಒಟ್ಟು 830887…

ಹಿರಿಕಾಟಿಯಲ್ಲಿ ಗೀತಾ ಮಹದೇವಪ್ರಸಾದ್‍ಗೆ ಮಹಿಳೆಯರ ತರಾಟೆ
ಚಾಮರಾಜನಗರ

ಹಿರಿಕಾಟಿಯಲ್ಲಿ ಗೀತಾ ಮಹದೇವಪ್ರಸಾದ್‍ಗೆ ಮಹಿಳೆಯರ ತರಾಟೆ

May 5, 2018

ಗುಂಡ್ಲುಪೇಟೆ:  ಮತಯಾಚನೆಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ (ಗೀತಾಮಹದೇವಪ್ರಸಾದ್) ಅವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು ತಮ್ಮ ಬೀದಿಗಳಿಗೆ ಬಂದು ಸಮಸ್ಯೆಗಳನ್ನು ಕಣ್ಣಾರೆ ನೋಡುವಂತೆ ಒತ್ತಾಯಿಸಿದ ಪ್ರಸಂಗ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ನಂತರ ಹಿರಿಕಾಟಿಗೆ ಆಗಮಿಸಿದಾಗ ಗ್ರಾಮದ ಮಹಿಳೆಯರು ಮತ್ತು ಯುವಕರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ ಮತ್ತು ಸ್ಮಶಾನ ಸೇರಿದಂತೆ ಹಲವು ಮೂಲಸೌಕರ್ಯಗಳ…

ಹೈವೋಲ್ಟೇಜ್ ಚಾಮುಂಡೇಶ್ವರಿಯಲ್ಲಿ ರಂಗೇರುತ್ತಿದೆ ಚುನಾವಣಾ ಕಣ
ಮೈಸೂರು

ಹೈವೋಲ್ಟೇಜ್ ಚಾಮುಂಡೇಶ್ವರಿಯಲ್ಲಿ ರಂಗೇರುತ್ತಿದೆ ಚುನಾವಣಾ ಕಣ

May 4, 2018

ಮೈಸೂರು: ರಾಜ್ಯವಷ್ಟೇ ಅಲ್ಲದೆ ಇಡೀ ದೇಶವೇ ಎದುರು ನೋಡು ತ್ತಿರುವ ಮೈಸೂರಿನ ಚಾಮುಂಡೇಶ್ವರಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ದಿನೇ ದಿನೆ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್‍ನಿಂದ ಸ್ವತಃ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಸ್ಪರ್ಧಿಸಿರುವುದೇ ಚಾಮುಂಡೇಶ್ವರಿ ಕ್ಷೇತ್ರ ಹೈವೋಲ್ಟೇಜ್ ಕಣವಾಗಲು ಪ್ರಮುಖ ಕಾರಣ. ಹಿಂದೊಮ್ಮೆ ಉಪ ಚುನಾವಣೆ ಅನಿ ವಾರ್ಯವಾಗಿ ಜೆಡಿಎಸ್‍ನ ಶಿವಬಸಪ್ಪ ವಿರುದ್ಧ ಕಣಕ್ಕಿಳಿ ದಿದ್ದ ಸಿದ್ದರಾಮಯ್ಯ, ಬಲು ತ್ರಾಸದಾಯಕವಾಗಿ ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ…

ಕಾಂಗ್ರೆಸ್ ಬೆಂಬಲಿಸಲು ಕ್ರೈಸ್ತ ಸಮುದಾಯದ ನಿರ್ಧಾರ
ಮೈಸೂರು

ಕಾಂಗ್ರೆಸ್ ಬೆಂಬಲಿಸಲು ಕ್ರೈಸ್ತ ಸಮುದಾಯದ ನಿರ್ಧಾರ

May 4, 2018

ಮೈಸೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರೈಸ್ತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹೆಚ್ಚು ನೆರವಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಕ್ರೈಸ್ತರ ಸಂಘಗಳ ಒಕ್ಕೂಟದ ಮುಖಂಡ, ಕನ್ನಡ ಕ್ರೈಸ್ತ ಸಂಘದ ಪ್ರೊ.ರಾಫೆಲ್ ತಿಳಿಸಿದರು. ಕ್ರೈಸ್ತ ಸಮುದಾಯದ ಇಬ್ಬರಿಗೆ ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಐವಾನ್ ಡಿಸೋಜ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸಿದೆ. ಹಲವರನ್ನು ವಿವಿಧ ನಿಗಮ ಮಂಡಳಿಗಳಿಗೆ ಸದಸ್ಯರಾಗಿ ನೇಮಕ…

1 2 3 4 5 14
Translate »