ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?
ಹಾಸನ

ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?

May 7, 2018

ಹಾಸನ: ಎಲ್ಲಾ ಪಕ್ಷಗಳಲ್ಲೂ ಗುರುತಿಸಿಕೊಂಡು ಪ್ರಚಾರ ಮಾಡುತ್ತಿರುವ ಚಲನಚಿತ್ರ ನಟರಿಗೆ ಯಾವ ಬದ್ಧತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಾಲೂಕಿನ ಗೊರೂರು ಸಂತೇಮಾಳ ದಲ್ಲಿ ನಡೆದ ಜೆಡಿಎಸ್, ಬಿಎಸ್‍ಪಿ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಚಲನಚಿತ್ರ ನಟನೋರ್ವ ಹಾಸನದಲ್ಲಿ ಬೆಳಿಗ್ಗೆ ಜೆಡಿಎಸ್ ಪರ ಮತ ಯಾಚನೆ ಮಾಡಿ, ಮಧ್ಯಾಹ್ನ ಸಕಲೇಶಪುರ ದಲ್ಲಿ ಬಿಜೆಪಿ ಪರ ಮತ ನೀಡಿ ಎನ್ನುವ ಇವರಿಗೆ ಯಾವ ಬದ್ಧತೆ ಇದೆ ಎಂದು ಆಕ್ರೋಶವ್ಯಕ್ತಪಡಿಸಿದರಲ್ಲದೆ, ಅನೇಕರಿಗೆ ರಾಜಕೀಯ ಪ್ರಜ್ಞೆಯು ಇರುವುದಿಲ್ಲ. ಅಂತ ಹವರು ಚುನಾವಣೆ ಪ್ರಚಾರಕ್ಕೆ ಬಂದರೆ ಮತದಾರರು ಮರುಳಾಗುವುದಿಲ್ಲ ಎಂದರು.

ರಾಜ್ಯದ ಜನತೆ ನೆಮ್ಮದಿಯಿಂದ ಇರಲು ನಾನು ಹೋರಾಟ ಮಾಡುತ್ತಿದ್ದೇನೆ. ಜನಪರ ಆಡಳಿತ ನೀಡಬೇಕು ಎಂಬುದು ನನ್ನ ಉದ್ದೇಶ. ನಾವು ಘೋಷಣೆ ಮಾಡಿ ರುವ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಗಮನ ಕೊಡಲಾಗಿದ್ದು, ಗೊರೂರು ಹೇಮಾವತಿ ಜಲಾಶಯ ಆವರಣವನ್ನು ಕೆಆರ್‍ಎಸ್ ಮಾದರಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ರೈತರ ಸಾಲ ಮನ್ನಾದ ಜೊತೆ ಸ್ತ್ರೀಶಕ್ತಿ ಸ್ವಸ ಹಾಯ ಸಂಘದ ಸಾಲ ಮನ್ನಾ ಮಾಡು ವಂತೆ ಮನವಿಗಳು ಬಂದಿವೆ. ಈ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ವಯೋವೃದ್ಧರಿಗೆ ಮಾಸಿಕ 5 ಸಾವಿರ ಮಾಸಾಶನ ನೀಡುವ ಬಗ್ಗೆ ಚಿಂತಿಸಿದ್ದು, ನಮ್ಮ ಪ್ರಣಾಳಿಕೆಯಲ್ಲಿ ಇಂತಹ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮತದಾರರು ಶಕ್ತಿ ತುಂಬಬೇಕು ಎಂದರು.

ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ತರಲು ಹಾಗೂ ಈ ಕ್ಷೇತ್ರ ಅಭಿವೃದ್ಧಿ ಗೊಳಿ ಸಲು ಸಹಕರಿಸಬೇಕು ಎಂದು ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ಕುಮಾರ ಸ್ವಾಮಿ, ಮಧುಬಂಗಾರಪ್ಪ, ಮಾಜಿ ಸದಸ್ಯ ಎಂಎಲ್‍ಸಿ ಪಟೇಲ್ ಶಿವರಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Translate »