ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ
ಹಾಸನ

ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ

May 7, 2018

ಅರಸೀಕೆರೆ: ಜಿಲ್ಲೆಯ ಅರಸೀ ಕೆರೆ ವಿಧಾನ ಸಭೆ ಕ್ಷೇತ್ರವು ಜಿಲ್ಲೆಯ ಉಳಿದ ಕ್ಷೇತ್ರಗಳಂತೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ ಏರ್ಪಟ್ಟಿದೆ.

ಹಾಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ತಮ್ಮ ಹತ್ತು ವರ್ಷಗಳ ಸಾಧನೆಗಳನ್ನುಜನರ ಮುಂದೆ ತೆಗೆದುಕೊಂಡು ಹೋಗುವ ಮೂಲಕ ಮೂರನೇ ಬಾರಿಗೆ ಗೆಲುವನ್ನು ತಮ್ಮ ದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹ್ಯಾಟ್ರಿಕ್ ಹೀರೋ ಆಗಲು ಹಗಲಿರುಳು ಶ್ರಮಿಸುತ್ತಿ ದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ದಿವಂಗತ ಜಿ.ಎಸ್ ಬಸವರಾಜು ಪುತ್ರ ಡಿ.ಬಿ.ಶಶಿಧರ್ ತಮ್ಮ ತಂದೆಯ ಅಧಿಕಾ ರಾವಧಿಯ ಅಭಿವೃದ್ಧಿ ಹಾಗೂ ಸಿಎಂ ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟು ಕೊಂಡು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ ನಡುವೆ ಜಿ.ಮರಿಸ್ವಾಮಿ ಬೆಂಗಳೂರು ಮಹಾನಗರದ ಕ್ಷೇತ್ರವೊಂದರ ಜಿಪಂ ಸದಸ್ಯರಾಗಿದ್ದು, ಹಾಲಿ ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿ ಳಿದಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಒಗ್ಗಟ್ಟಿ ನಿಂದಿರುವಂತೆ ಕಂಡರೂ ಮುಖಂಡರು ಚುನಾವಣೆ ದಿನಾಂಕ ನಿಗದಿ ಮುಂಚೆಯೇ ಹೊರ ಊರುಗಳ ಅಭ್ಯರ್ಥಿ ಸ್ಪರ್ಧೆ ಮಾಡು ವುದನ್ನು ವಿರೋಧಿಸಿದ ಪರಿಣಾಮ ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ ಕಣದಿಂದ ಹಿಂದೆ ಸರಿದರು. ಈ ಕಾರಣ ಜಿ.ಮರಿಸ್ವಾಮಿ ಗೆಲುವಿನ ಪರೀಕ್ಷೆಗಾಗಿ ಕಣಕ್ಕೆ ಧುಮುಕಿದ್ದಾರೆ.

Translate »