ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಹಾಸನ

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

May 5, 2018

ಹೊಳೆನರಸೀಪುರ: ಸಿಎಂ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಜೆಡಿಎಸ್ ಬೆಂಬಲಿಗರಿಂದ ತಾಲೂಕಿನ ವಿವಿಧೆಡೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಲ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಮಣ್ಣು ಸುರಿದು, ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದರೆ, ಮಹಿಳಾ ಕಾರ್ಯ ಕರ್ತರು ಪೊರಕೆ ಪ್ರದರ್ಶಿಸಿ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವೆಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣ ವಾಯಿತು. ಪರಿಸ್ಥಿತಿ ಅರಿತ ಚುನಾವಣಾಧಿಕಾರಿ ಪೊಲೀಸ್ ಸಿಬ್ಬಂದಿ ಯೊಂದಿಗೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿ ದರು. ಎಸ್‍ಪಿ ರಾಹುಲ್ ಕುಮಾರ್ ಶಹಪುರವಾಡ್ ಭೇಟಿ ನೀಡಿ, ಅಗತ್ಯ ಭದ್ರತೆ ಕೈಗೊಂಡರು.

ವಿವರ: ಇಂದು ಬೆಳಿಗ್ಗೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಾಸನ ತಾಲೂಕಿನ ದುದ್ದ ಹೋಬಳಿ ದೇವಿಹಳ್ಳಿ ಸೇರಿದಂತೆ ಹಳೆಕೋಟೆ ಹೋಬಳಿಯ ಹಲವು ಗ್ರಾಮ ಗಳಲ್ಲಿ ಮಂಜೇಗೌಡ ಮತ್ತು ಅವರ ಬೆಂಬಲಿಗರು ಬೆಳಿಗ್ಗೆ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಕ್ಕೆ ಪ್ರವೇಶಿಸ ದಂತೆ ಕೆಲವರು ರಸ್ತೆಗೆ ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದು ಕಂಡುಬಂತು. ಹಳೆಕೋಟೆ ಹೋಬಳಿಯ ದೊಡ್ಡಕುಂಚೆವು ಗ್ರಾಪಂನ ಕೊಡಿಹಳ್ಳಿ ಗ್ರಾಮ ಗ್ರಾಮದ ಒಳಗೆ ಪ್ರವೇಶಿಸ ದಂತೆ ತಡೆದರು. ಈ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ, ಸಿಆರ್‍ಪಿಎಫ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮಧ್ಯಾಹ್ನ ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹಂಗರಹಳ್ಳಿಗೆ ಪ್ರಚಾರಕ್ಕೆ ಹೋಗುವ ಮಾರ್ಗ ಮಧ್ಯೆ ರಸ್ತೆಗೆ ಜೆಡಿಎಸ್ ಕಾರ್ಯ ಕರ್ತರು ರಸ್ತೆಗೆ ಮಣ್ಣು ಸುರಿದು ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡ ಮತ್ತು ಬೆಂಬಲಿಗರು ಗ್ರಾಮಕ್ಕೆ ಪ್ರವೇಶಿಸ ದಂತೆ ತಡೆಯೊಡ್ಡಿದ್ದು ಕಂಡುಬಂತು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಇರಿಸು ಮುರಿಸು ಉಂಟಾಯಿತು. ಅಲ್ಲದೆ, ಬಸವನಾಯಕನಹಳ್ಳಿ, ಹನುಮನಹಳ್ಳಿ, ಹರಳಳ್ಳಿ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರವೇಶಕ್ಕೆ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರಿಂದ ವಿರೋಧ ವ್ಯಕ್ತವಾಯಿತು. ಇದರಿಂದ ಅಸಮಾಧಾನಗೊಂಡು ಕಾಂಗ್ರೆಸ್‍ನವರು ಪಕ್ಷದ ಪರ ಜೈಕಾರ ಹಾಕಿದರು. ಜೆಡಿಎಸ್ ಬೆಂಬಲಿಗರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೂಡಲೇ ಪರಿಸ್ಥಿತಿ ಅರಿತ ಚುನಾವಣಾಧಿಕಾರಿ ಎಸ್.ಕೆ. ರಾಜು ಹಾಗೂ ಡಿವೈಎಸ್‍ಪಿ ರಾಮಲಿಂಗೇಗೌಡ ನೇತೃತ್ವದಲ್ಲಿ ಕಾರ್ಯಾ ಚರಣೆ ನಡೆಸಿ ಪರಿಸ್ಥಿತಿ ತಹಬದಿಗೆ ತರಲಾಯಿತು. ಎಸ್‍ಪಿ ರಾಹುಲ್ ಕುಮಾರ್ ಶಹಪುರವಾಡ್ ಭೇಟಿ ನೀಡಿ ಮಾಹಿತಿ ಪಡೆದರಲ್ಲದೆ, ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ನಂತರ ಅಭ್ಯರ್ಥಿ ಮಂಜೇಗೌಡರು ಭದ್ರತೆಯೊಂದಿಗೆÀ ಪ್ರಚಾರ ನಡೆಸಿದರು.

Translate »