ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ
ಹಾಸನ

ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ

December 6, 2018

ಹೊಳೆನರಸೀಪುರ: ಸಕ್ಕರೆ ಕಾರ್ಖಾನೆ ವಾಹನ ಮಗುಚಿ ಬಿದ್ದ ಪರಿಣಾಮ 16 ಮಹಿಳಾ ಕಾರ್ಮಿಕರು ಸೇರಿ 17 ಮಂದಿ ಗಾಯಗೊಂಡ ಘಟನೆ ಹೊಳೆನರಸೀ ಪುರ ತಾಲೂಕು ಹಾಸನ-ಮೈಸೂರು ರಸ್ತೆಯ ಹಳೇಕೋಟೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಮಹಿಳಾ ಕಾರ್ಮಿಕರಾದ ಪೂರ್ಣಿಮಾ, ಸುನೀತಾ, ಶಾಂತಮ್ಮ, ಹೇಮಾವತಿ, ಯಶೋಧಮ್ಮ, ನಿಂಗಮ್ಮ, ಜ್ಯೋತಿ, ಗಿರೀಶ್, ರುಕ್ಮಿಣಿ, ಶಾಂತ, ನಾಗಮ್ಮ, ಗಂಗಮ್ಮ, ಕಾಳಮ್ಮ, ಗಾಯಿತ್ರಿ, ಜಯಮ್ಮ, ಸುಜಾತಾ, ನೀಲಮ್ಮ ಅಪಘಾತದಲ್ಲಿ ಗಾಯಗೊಂಡರು.
ಸಹ್ಯಾದ್ರಿ ಶುಗರ್ಸ್ ಅಂಡ್ ಡಿಸ್ಟಲರಿ ಕಾರ್ಖಾನೆಯ ಕಾರ್ಮಿಕರಾದ ಇವರೆಲ್ಲರೂ ಮಂಗಳವಾರ ಕೆಲಸ ಮುಗಿಸಿ ತಮ್ಮ ಊರುಗಳಿಗೆ ಕಾರ್ಖಾನೆಯ ವಾಹನದಲ್ಲಿ (ಕೆಎ51-ಡಿ443) ತೆರಳುತ್ತಿದ್ದಾಗ ಹಳೇಕೋಟೆ ಗ್ರಾಮದ ಬಳಿ ಚಾಲಕ ಹಠಾತ್ತನೆ ಬ್ರೇಕ್ ಹಾಕಿದಾಗ ವಾಹನ ಮಗುಚಿ ಬಿದ್ದಿದೆ. ಗಾಯಾಳುಗಳು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »