ಹೊಳೆನರಸೀಪುರ: ಪಟ್ಟಣದ ಹೇಮಾವತಿ ನದಿ ಪಕ್ಕದಲ್ಲಿರುವ ರಿವರ್ ಬ್ಯಾಂಕ್ ರಸ್ತೆ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ ಮೇಲೆ ಸೋಮವಾರ ದಾಳಿ ನಡೆಸಿದ ನಗರ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿ, ಒಂದು ಎಮ್ಮೆ, ಒಂದು ಹಸು, ಏಳು ಕರು ಸೇರಿದಂತೆ 9 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಪಟ್ಟಣದ ಶಿಯಾಮೊಹಲ್ಲದ ಚಿಕ್ಕ ಮಸೀದಿ ರಸ್ತೆಯಲ್ಲಿ ಅಕ್ರಮವಾಗಿ ನಡೆ ಸುತ್ತಿದ್ದ ಕಸಾಯಿಖಾನೆಯಲ್ಲಿ ಜಾನು ವಾರುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಗೋಗ್ಯಾನ್ ಫೌಂಡೇಷನ್ ಸಂಚಾಲಕಿ ಕವಿತಾ ಜೈನ್ ನೀಡಿದ ದೂರಿನ ಮೇರೆಗೆ ಪೊಲೀಸರು ಸೋಮ ವಾರ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದರು.
ಪುರಸಭೆಯ ಅನುಮತಿ ಪಡೆಯದೆ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಹೊಳೆನರಸೀಪುರದವರೇ ಆದ ತಾಜು ಅಲಿಯಾಸ್ ತಾಜು ಹುದ್ದೀನ್ (42), ಖಲೀಲ್ ಅಲಿಯಾಸ್ ಖಲೀಲ್ ಖಾನ್ (55), ಶೌಕತ್ ಅಲಿಯಾಸ್ ಶೌಕತ್ ಆಲಿ (60), ಫಾರ್ಮನ್ ಆಲಿ (50), ತೋಹಿದ್ ಅಲಿ ಯಾಸ್ ತೋಹಿದ್ ಆಲಿ (35), ಅಪ್ರೋಜ್ ಅಲಿಯಾಸ್ ಅಪ್ರೋಜ್‍ಖಾನ್ (30) ಎಂಬವರನ್ನು ಬಂಧಿಸಿ, ಜಾನುವಾರುಗಳನ್ನು ವಶಪಡಿಸಿಕೊಂಡರು.
ಈ ವೇಳೆ ಫೌಂಡೇಷನ್‍ನ ಸಂಚಾಲಕಿ ಕವಿತಾ ಜೈನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಹಲವು ವರ್ಷಗಳಿಂದ ಅಕ್ರಮವಾಗಿ ಇಲ್ಲಿ ಕಸಾಯಿಖಾನೆ ನಡೆ ಯುತ್ತಿದ್ದರೂ ಪುರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಮೌನತಾಳಿದ್ದು, ಯಾವುದೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಸಂಘ-ಸಂಸ್ಥೆಗಳು ತಮ್ಮ ಸ್ವಯಂ ಸೇವಾ ಸಂಸ್ಥೆಗೆ ವೀಡಿಯೋ ಸಮೇತ ಮಾಹಿತಿ ನೀಡಿದ್ದರೆಂದು ಹೇಳಿದರು.
ಕಸಾಯಿಖಾನೆಗೆ ಪುರಸಭೆ ಯಾವುದೇ ಪರವಾನಗಿ ನೀಡಿಲ್ಲ. ಆದರೂ ಹಲವು ವರ್ಷಗಳಿಂದ ಈ ಕಸಾಯಿಖಾನೆ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಕೇಳಿದರೆ ನಗರಸಭೆಯ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ತಮಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ತಾಳಿದ್ದರು. ಹೀಗಾಗಿ ಪೊಲೀಸರಿಗೆ ದೂರು ನೀಡ ಲಾಗಿತ್ತು. ಡಿವೈಎಸ್‍ಪಿ ಲಕ್ಷ್ಮೇಗೌಡ, ನಗರ ಠಾಣೆ ಪಿಎಸ್‍ಐ ಕುಮಾರ್ ಮತ್ತು ಅವರ ತಂಡ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪಿಎಸ್‍ಐ ಕುಮಾರ್ ಮಾತನಾಡಿ, ದಾಳಿ ವೇಳೆ ವಶಕ್ಕೆ ಪಡೆದ ಮಾಂಸವನ್ನು ಹೂಳಲಾಗಿದೆ. ಕಸಾಯಿಖಾನೆಯಲ್ಲಿ 7 ಅಂಗಡಿಗಳಿದ್ದು, ದಾಳಿ ವೇಳೆ 3 ಅಂಗಡಿ ಗಳು ಮಾತ್ರ ತೆರೆಯಲಾಗಿತ್ತು. ತಾಲೂಕಿನ ಹಲವೆಡೆ ಅಕ್ರಮ ಹಾಗೂ ಅನಧಿಕೃತ ಕಸಾಯಿಖಾನೆಗಳು ಇರುವ ಕುರಿತು ಮಾಹಿತಿ ಲಭ್ಯವಿದ್ದು, ಒಂದೆರಡು ದಿನಗಳಲ್ಲಿ ಅದಕ್ಕೆ ಬೀಗ ಹಾಕಿಸಿ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ದಾಳಿಯಲ್ಲಿ ವಶಕ್ಕೆ ಪಡೆದು ರಾಸುಗಳನ್ನು ಮೈಸೂರಿನ ಪಿಂಜರಪೋಲ್ ಗೋಶಾಲೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.
ಹತ್ತಾರು ವರ್ಷಗಳಿಂದ ಹೇಮಾವತಿ ನದಿ ದಡದಲ್ಲಿ ಕಸಾಯಿಖಾನೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಪುರಸಭಾ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ವಿಫಲವಾಗಿತ್ತು. ಅಷ್ಟೆ ಅಲ್ಲದೆ ಹಲ ವಾರು ಸಂಘ-ಸಂಸ್ಥೆ ಪದಾಧಿಕಾರಿಗಳು ದೂರು ನೀಡುತ್ತಲೇ ಬಂದಿದ್ದರು. ಗೋಹತ್ಯೆ ಮಾಡಿದ ತ್ಯಾಜ್ಯ ವಸ್ತು ನೇರವಾಗಿ ಹೇಮಾ ವತಿ ನದಿಗೆ ಹರಿಯುತ್ತಿದೆ ಎಂದು ಚಿತ್ರ ಸಮೇತ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಶ್ರೀಮತಿ ರೇಖಾ ಬಾಯಿ ಮತ್ತು ಸಿಬ್ಬಂದಿ ಬಂಧಿಸಿ, 122 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.