ಅರಸೀಕೆರೆ: ಸರ್ಕಾರದ ವತಿ ಯಿಂದ ನೀಡುವ ಬೆಳೆ ವಿಮೆಯ ಪರಿ ಹಾರ ಹಣವನ್ನು ಬ್ಯಾಂಕಿನವರು ಮುಟ್ಟು ಗೋಲು ಹಾಕಿಕೊಂಡಿರುವುದನ್ನು ವಿರೋ ಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಗೀಜಿಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಗೀಜೀಹಳ್ಳಿ ಗ್ರಾಮದ ಲ್ಲಿರುವ ಕೆನರಾ ಬ್ಯಾಂಕಿನ ಮುಂದೆ ಪ್ರತಿ ಭಟನೆ ನಡೆಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ಮಾತನಾಡಿ, ಸರ್ಕಾರಗಳು ರೈತರ ನೆರ ವಿಗಾಗಿ ಬೆಳೆ ನಷ್ಟ ಹೊಂದಿದ ಸಂದರ್ಭ ದಲ್ಲಿ ವಿಮೆ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಆದರೆ ಇನ್ನೊಂ ದೆಡೆ ಬ್ಯಾಂಕಿನಲ್ಲಿ ಸಾಲ ಪಡೆದ ರೈತರಿಗೆ ವಿಮೆ ಹಣವನ್ನು ನೀಡದೇ ಬ್ಯಾಂಕ್‍ಗಳು ಅನ್ಯಾಯವೆಸಗುವ ಮೂಲಕ ರೈತರು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಿದೆ. ಈ ಬೆಳವಣಿಗೆಗೆಳು ಹೀಗೆ ಮುಂದು ವರೆದರೆ ಉಗ್ರ ಪ್ರತಿಭಟನೆಗೆ ಮುಂದಾ ಗುವುದಾಗಿ ಎಚ್ಚರಿಸಿದರು.
ಕಾರ್ಯದರ್ಶಿ ಬೋರನಕೊಪ್ಪಲು ಶಿವ ಮೂರ್ತಿ ಮಾತನಾಡಿ, ಬೆಳೆ ವಿಮೆ ಬಿಡು ಗಡೆಯಾಗಿ 3 ತಿಂಗಳು ಕಳೆದಿದೆ. ಆದರೇ ವಿಮೆ ಹಣವನ್ನು ಬ್ಯಾಂಕ್‍ಗಳು ಮುಟ್ಟು ಗೋಲು ಹಾಕಿಕೊಂಡಿವೆ, ಮುಖ್ಯಮಂತ್ರಿ ಗಳು ಬ್ಯಾಂಕಿನ ಅಧಿಕಾರಿಗಳ ಸಭೆ ಕರೆದು ಸೂಚಿಸಿದ್ದರೂ ಅಧಿಕಾರಿಗಳು ರೈತರ ಹಣವನ್ನು ಬಿಡುಗಡೆ ಮಾಡುತ್ತಿಲ್ಲ, ಇಷ್ಟೇ ಅಲ್ಲದೇ ವೃದ್ದಾಪ್ಯ ವೇತನ, ಎನ್‍ಆರ್ ಐಜಿ ಯೋಜನೆಯ ಹಣವನ್ನು ನೀಡದೇ ರೈತ ಕುಟುಂಬಗಳು ಹಸಿವಿನಿಂದ ಇರುವ ಹಾಗೆ ಮಾಡುತ್ತಿದ್ದು ಈ ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೇ ಪ್ರತಿ ಭಟನೆ ಮುಂದುವರೆಸುವುದಾಗಿ ಹೇಳಿದರು.
ಗೀಜೀಹಳ್ಳಿ ಕೆನರಾಬ್ಯಾಂಕ್ ಮ್ಯಾನೇ ಜರ್ ಭರತ್‍ಕುಮಾರ್ ಮಾತನಾಡಿ, ರೈತರ ಸಾಲಕ್ಕೆ ಯಾವುದೇ ವಿಮೆ ಹಣ ವನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ, ಎಲ್ಲಾ ರೈತರ ಬೆಳೆ ವಿಮೆ ಸೇರಿದಂತೆ ನರೇಗ ದಲ್ಲಿ ಮಾಡಿರುವ ಕೆಲಸಗಳ ಹಣವನ್ನು ರೈತರಿಗೆ ನೀಡಿದ್ದು ರೈತರ ಪರವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಹೇಳಿಕೆ ನೀಡಿದರು.ಪ್ರತಿಭಟನೆಯಲ್ಲಿ ಮುದ್ದನಹಳ್ಳಿ ಪಟೇಲ್ ಮಂಜಪ್ಪ, ಜವನಹಳ್ಳಿ ನಿಂಗಪ್ಪ, ರಾಜಣ್ಣ, ಅಣ್ಣಾಯ್ಕನಹಳ್ಳಿ ಶಿವಮೂರ್ತಿ, ಭೈರೇಶ್, ಆನಂದ್ ಇನ್ನಿತರರು ಇದ್ದರು.