ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಶಾಲಾ ಪ್ರಶಸ್ತಿ
ಮೈಸೂರು

ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಶಾಲಾ ಪ್ರಶಸ್ತಿ

October 31, 2018

ಪ್ರಶಸ್ತಿ ದೊರೆತಿದ್ದಕ್ಕೆ ಶಾಲೆ ಆವರಣದಲ್ಲಿ ಶಿಕ್ಷಕರು, ಗ್ರಾಮಸ್ಥರ ಸಂಭ್ರಮ

ಪಿರಿಯಾಪಟ್ಟಣ:  ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಹೊಂದಿರುವ ತಾಲೂಕಿನ ಪ್ರಥಮ ಸರ್ಕಾರಿ ಶಾಲೆ ಹಿರಿಮೆಗೆ ಪಾತ್ರವಾಗಿರುವ ಹುಣಸೇಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ `ತಾಲೂಕಿನ ಅತ್ಯುತ್ತಮ ಶಾಲಾ ಪ್ರಶಸ್ತಿ’ ದೊರಕಿದ್ದು, ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಉತ್ತಮ ಶಿಕ್ಷಕರ ಪರಿಶ್ರಮ ಹಾಗೂ ಗ್ರಾಮಸ್ಥರು, ದಾನಿಗಳ ನೆರವಿನಿಂದ ಶಾಲೆ ತಾಲೂಕಿನಲ್ಲೇ ಉತ್ತಮ ಶಾಲೆ ಪ್ರಶಸ್ತಿ ಪಡೆದುಕೊಳ್ಳುವುದು ಸಾಧ್ಯವಾಗಿದೆ. ಶಿಕ್ಷಕರ ದಿನಾಚರಣೆಯಂದೇ ಇಲಾಖೆಯಿಂದ ಪ್ರಶಸ್ತಿ ದೊರೆತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದ ಮುಖ್ಯ ಶಿಕ್ಷಕ ಎಚ್.ಟಿ.ಗಣೇಶ್, ಪ್ರಶಸ್ತಿ ಫಲಕ ಪ್ರದರ್ಶಿಸಿದರು. ಪ್ರಶಸ್ತಿ ಸಾಧನೆಯ ಹಾದಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ದಾನಿ ಯಾಗಿರುವ ಎಚ್.ಎ.ಚಂದ್ರು, ಎಸ್‍ಡಿಎಂಸಿ ಅಧ್ಯಕ್ಷ ಎಚ್.ಪಿ.ಮಂಜುನಾಥ್, ಉಪಾಧ್ಯಕ್ಷೆ ಕವಿತಾ, ಎಸ್‍ಡಿಎಂಸಿ  ಮಾಜಿ ಅಧ್ಯಕ್ಷರಾದ ರಮೇಶ್, ನಟರಾಜ್, ಸದಸ್ಯರಾದ ವೆಂಕಟೇಶ್ ನಾಯಕ್, ಕುಮಾರ್, ಶಾಲೆಯ ಶಿಕ್ಷಕರಾದ ಚಂದ್ರು, ಮಂಜುನಾಥ್, ಗ್ರಾಮದ ಮುಖಂಡ ರಾದ ಹರೀಶ್, ತಾಪಂ ಮಾಜಿ ಸದಸ್ಯ ಪ್ರಕಾಶ್, ಗ್ರಾಪಂ ಸದಸ್ಯ ಮಧು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹೇಂದ್ರ ಮತ್ತಿತರÀರಿದ್ದರು.

ಅನುದಾನ: ಹಿಂದೆ ಶಾಲೆ ಅತೀ ಹಳೆಯ ಕಟ್ಟಡದಲ್ಲಿ ನಡೆಯುತ್ತಿತ್ತು. ಪ್ರಕಾಶ್ ಅವರು ತಾಪಂ ಸದಸ್ಯರಾಗಿದ್ದಾಗ ಶಾಲೆಯ ಕಟ್ಟಡದ ರಿಪೇರಿಗೆ, ಛಾವಣಿ ಬದಲಾವಣೆಗೆ, ಡೆಕ್ ಗಾಗಿ 2.50 ಲಕ್ಷ ರೂ. ಅನುದಾನ ಕೊಡಿಸಿ ಶಾಲೆಯ ಅಭಿವೃದ್ಧಿಗೆ ನೆರವಾಗಿದ್ದರು ಎಂದು ಗಣೇಶ್ ವಿವರಿಸಿದರು.

ಸಮಸ್ಯೆಗಳು: ಶಾಲೆಯಲ್ಲಿ 5 ಕೊಠಡಿ ಗಳಷ್ಟೇ ಇವೆ. ಒಬ್ಬ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಶಾಲೆಗೆ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಶಾಲೆ ಮಾಲಂಗಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಸೋಲಾರ್ ಸ್ಮಾರ್ಟ್ ಕ್ಲಾಸ್ ಬಿಟ್ಟರೆ ಶಾಲಾಭಿವೃದ್ಧಿಗೆ ಪಂಚಾಯಿತಿಯಿಂದ ಯಾವುದೇ ಕೊಡುಗೆ ಇಲ್ಲ. ಶಾಲೆಯ ಅಭಿವೃದ್ಧಿ ಸಂಬಂಧಿಸಿ ಅನೇಕ ಬೇಡಿಕೆ ಸಲ್ಲಿಸಿದ್ದರೂ ಫಲ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Translate »