ಬಿಎಸ್‍ಎನ್‍ಎಲ್ ನೌಕರರ ಪ್ರತಿಭಟನೆ
ಹಾಸನ

ಬಿಎಸ್‍ಎನ್‍ಎಲ್ ನೌಕರರ ಪ್ರತಿಭಟನೆ

October 31, 2018

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್‍ಎನ್‍ಎಲ್ ಅಧಿಕಾರಿ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಒಕ್ಕೂಟ, ಆಲ್ ಯೂನಿಯನ್ಸ್ ಹಾಗೂ ಅಸೋ ಸಿಯೇಷನ್ಸ್ ವತಿಯಿಂದ ಬಿಎಸ್‍ಎನ್‍ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಎಸ್‍ಎನ್‍ಎಲ್ ನೌಕರರ ವೇತನ ಪರಿ ಷ್ಕರಣೆ, ಪಿಂಚಣಿ ಪರಿಷ್ಕರಣೆ, ನೇರ ನೇಮ ಕಾತಿ ಆದ ಬಿಎಸ್‍ಎನ್‍ಎಲ್ ನೌಕರರಿಗೆ ಶೇ.30ರಷ್ಟು ನಿವೃತ್ತಿ ಸವಲತ್ತುಗಳು ಹಾಗೂ ಬಿಎಸ್‍ಎನ್‍ಎಲ್‍ಗೆ 4 ಜಿ ತರಂಗಗಳನ್ನು ಕೊಡಬೇಕು ಮತ್ತು ಮೂಲ ವೇತನದ ಮೇಲೆ ಮಾತ್ರ ಪಿಂಚಣಿ ದೇಣಿಗೆಯನ್ನು ಕಡಿತ ಸೇರಿದಂತೆ ವಿವಿಧ ಬೇಡಿಕೆ ಬಗ್ಗೆ ನೀಡಿದ ಭರವಸೆಗಳು ಇಂದಿಗೂ ಈಡೇ ರಿಸಿರುವುದಿಲ್ಲ ಎಂದು ದೂರಿದರು.

ಜಾರಿಯಾಗಬೇಕಾಗಿರುವ ಮೂರನೇ ವೇತನ ಪರಿಷ್ಕರಣೆ ಬಿಎಸ್‍ಎನ್‍ಎಲ್ ಸಂಸ್ಥೆಗೆ ಜಾರಿ ಯಾಗದೇ ನೌಕರರು ಮಾನಸಿಕವಾಗಿ ಕುಂದಿ ದ್ದಾರೆ. ವೇತನ ಪರಿಷ್ಕರಣೆ ವರದಿಯ ಪ್ರಕಾರ ಮೂರು ವರ್ಷಗಳ ಹಿಂದೆ ಕಂಪನಿಗೆ ಲಾಭ ಆಗಿರದಿದ್ದರೇ ಆ ಕಂಪನಿಗೆ ವೇತನ ಪರಿಷ್ಕರಣೆ ಲಾಭ ಆಗುವುದಿಲ್ಲ. ಕಂಪನಿಯ ಬೆಳವಣಿ ಗೆಗೆ ಲಾಭ ಮಾಡಲು ಸಹಕಾರಿ ಯಾಗುವ ಮೂಲಭೂತ ಸರಕು-ಸಾಮಗ್ರಿಗಳನ್ನು ಕೇಂದ್ರ ಸರಕಾರ ಬಿಎಸ್‍ಎನ್‍ಎಲ್ ಕಂಪನಿಗೆ ನೀಡದೇ ಸಾಧ್ಯವಿಲ್ಲ ಎಂದು ಹೇಳಿದರು. 2007 ರಿಂದ 2012ರವರೆಗಿನ ಬಿಎಸ್‍ಎನ್ ಎಲ್ ಕಂಪನಿಗೆ ತನ್ನ ದೂರ ಸಂಪರ್ಕ ಜಾಲ ವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಅತಿ ಅವಶ್ಯಕವಿರುವ ಮೂಲಭೂತ ಸಾಮಗ್ರಿ ಗಳನ್ನು ಖರೀದಿಸಲು ಕೇಂದ್ರ ಸರಕಾರ ಅನು ಮತಿ ನೀಡಿರುವುದಿಲ್ಲ ಎಂದ ಅವರು ಇದು ಸಂಸ್ಥೆ ನಷ್ಟಕ್ಕೆ ಪ್ರಮುಖ ಕಾರಣಗಳಾಗಿದೆ ಎಂದರು. 2013ರ ನಂತರದಲ್ಲಿ ತೀವ್ರ ಮಟ್ಟದ ಬದಲಾವಣೆ ಬಿಎಸ್‍ಎನ್‍ಎಲ್ ಕಂಪನಿ ಯಲ್ಲಿ ಆಗಿದ್ದು, ಕಂಪನಿಯು ತನ್ನ ದೂರ ಸಂಪರ್ಕ ಜಾಲವನ್ನು ಅಧಿಕಗೊಳಿಸಿ ಕೊಂಡಿದೆ. ಕಂಪನಿ ಅಧಿಕಾರಿ ಮತ್ತು ಅಧಿ ಕಾರೇತನ ನೌಕರ ವರ್ಗವು ಕಂಪನಿಯ ಬೆಳವಣಿಗೆಗೆ ಪೂರಕವಾದ ಗ್ರಾಹಕ ಸಂತೃಪ್ತಿ ಚಳುವಳಿ ಮತ್ತು ಮುಗುಳ್ನಗೆಯೊಂದಿಗೆ ಸೇವೆ ಮೊದಲಾದ ಮಹತ್ವದ ಗ್ರಾಹಕ ಸಂವೇದಿ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ನಿರ್ವಹಿಸಿದೆ ಎಂದು ಹೇಳಿದರು.

ಬಿಎಸ್‍ಎನ್‍ಎಲ್ ಕಂಪನಿಗೆ ಶೀಘ್ರ ದಲ್ಲಿಯೇ ಕೇಂದ್ರ ಸರಕಾರವು 4ಜಿ ಸೇವೆ ಗಳನ್ನು ಕೊಡಮಾಡಬೇಕು. ಎಲ್ಲಾ ಖಾಸಗಿ ಕಂಪನಿಗಳು ಇಂದು 4ಜಿ ಸೇವೆಗಳನ್ನು ಕೊಡುತ್ತಿದೆ. ಆದರೆ ಬಿಎಸ್‍ಎನ್‍ಎಲ್ ಗೆ ಈ ಸೇವೆಯನ್ನು ಕೇಂದ್ರ ಸರಕಾರ ಇದು ವರೆಗೂ ಕೊಡಲಾಗಿರುವುದಿಲ್ಲ. ಸಭೆಯಲ್ಲಿ ಕೇಂದ್ರ ಸಂಪರ್ಕ ಮಂತ್ರಿಗಳು 4ಜಿ ತರಂಗ ಗಳನ್ನು ಸಂಸ್ಥೆಗೆ ಕೊಡಲು ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಆದರೂ ಇದುವರೆಗೂ ಅದು ಕಾರ್ಯಗತವಾಗಿರುವುದಿಲ್ಲ ಕೂಡಲೇ 4ಜಿ ನೀಡಬೇಕು ಎಂದು ಆಗ್ರಹಿಸಿದರು.

ಮೂಲ ವೇತನದ ಮೇಲೆ ಪಿಂಚಣಿ ದೇಣಿಗೆ ಕಡಿತ, ಬಿಎಸ್‍ಎನ್‍ಎಲ್ ನಿಂದ ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿ ಪರಿಷ್ಕರಣೆ ಹಾಗೂ ಬಿಎಸ್‍ಎನ್‍ಎಲ್‍ಗೆ ನೇರ ನೇಮ ಕಾತಿ ಆದ ನೌಕರರಿಗೆ ಎರಡನೇ ವೇತನ ಆಯೋ ಗದ ಶಿಫಾರಸ್ಸಿನಂತೆ ನಿವೃತ್ತಿ ಸವಲತ್ತುಗಳನ್ನು ಇದುವರೆಗೂ ಜಾರಿಗೊಳಿಸಿರುವುದಿಲ್ಲ ಎಂದು ಆರೋಪಿಸಿದರು. ಕೂಡಲೇ ನಮ್ಮ ನ್ಯಾಯ ಯುತ ಬೇಡಿಕೆ ಯನ್ನು ಈಡೇರಿಸುವಂತೆ ಬಿಎಸ್ ಎನ್‍ಎಲ್ ಭವನದ ಮುಂದೆ ನೌಕರರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಎಸ್‍ಎನ್‍ಎಲ್ ಅಧಿ ಕಾರಿ ಮತ್ತು ಅಧಿಕಾರೇತರ ನೌಕರರ ಸಂಘ ಟನೆಗಳ ಒಕ್ಕೂಟ, ಆಲ್ ಯೂನಿ ಯನ್ಸ್ ಹಾಗೂ ಅಸೋಸಿಯೇಷನ್ಸ್ ಆಫ್ ಬಿಎಸ್ ಎನ್‍ಎಲ್ ನೌಕರರ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಗೋವಿಂದೇಗೌಡ, ಎನ್.ಎಫ್. ಟಿ.ಇ. ಜಿಲ್ಲಾ ಕಾರ್ಯದರ್ಶಿ ರಾಜ, ಎಐಬಿ ಎಸ್ ಎನ್‍ಎಲಿಎ ಕಾಂತರಾಜನ್, ಎನ್.ಎನ್. ಇ.ಎ. ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಹಾಜರಿದ್ದರು.

Translate »