ಸ್ಥಗಿತವಾಗಿದ್ದ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ
ಚಾಮರಾಜನಗರ

ಸ್ಥಗಿತವಾಗಿದ್ದ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ

October 31, 2018

ಚಾಮರಾಜನಗರ: ಸ್ಥಗಿತವಾಗಿದ್ದ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.
‘ಮೈಸೂರು ಮಿತ್ರ’ ತನ್ನ ಸೆ.29ರ ಸಂಚಿಕೆಯಲ್ಲಿ ‘ಚಾ.ನಗರ ಜೋಡಿ ರಸ್ತೆ ಅಭಿ ವೃದ್ಧಿ ಕಾಮಗಾರಿ ಸ್ಥಗಿತ’ ಎಂಬ ಶೀರ್ಷಿಕೆಯಡಿ ಕಾಮಗಾರಿ ಸ್ಥಗಿತಗೊಂಡಿದ್ದರ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಒಂದೇ ದಿನಕ್ಕೆ ಕಾಮಗಾರಿ ಪುನಾರಂಭಗೊಂಡಿದೆ.

ನಗರದ ಏಕೈಕ ಬಿ.ರಾಚಯ್ಯ ಜೋಡಿ ರಸ್ತೆಯ 3.1 ಕಿಲೋ ಮೀಟರ್ ರಸ್ತೆ ಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿ ಸುವ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿತ್ತು. ಕಾಮಗಾರಿ ಆರಂಭ ಗೊಂಡು ಒಂದು ವರ್ಷ ಕಳೆದರೂ, ಪೂರ್ಣ ಗೊಂಡಿರಲಿಲ್ಲ. ಬದಲಿಗೆ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿತ್ತು. ಇಲ್ಲಿನ ವರ್ತ ಕರ ಭವನದ ಮುಂಭಾಗ ಕಾಂಕ್ರಿಟ್ ಹಾಕುವ ಯಂತ್ರ ಕಳೆದ ಒಂದು ತಿಂಗಳಿ ನಿಂದ ನಿಂತಲ್ಲೇ ನಿಂತಿತ್ತು. ಈ ಬಗ್ಗೆ ‘ಮೈಸೂರು ಮಿತ್ರ’ ಚಿತ್ರಗಳ ಸಹಿತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳ ಪರಿಶೀಲಿಸಿದ ಡಿಸಿ: ನಗರದ ಡಿವೈ ಎಸ್ಪಿ ಕಚೇರಿಯಿಂದ ನ್ಯಾಯಾಲಯದ ಮುಂಭಾಗ, ಕರಿನಂಜನಪುರ ರಸ್ತೆ, ಅಂಬೇ ಡ್ಕರ್ ಭವನದ ಮುಂಭಾಗದ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನಾಗರಿಕರು ಯಮಯಾತನೆ ಅನುಭವಿಸುತ್ತಿದ್ದರು. ಈ ವಿಷಯ ತಿಳಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಂಗಳವಾರ ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿದರು.

ಡಿವೈಎಸ್‍ಪಿ ಕಚೇರಿಯಿಂದ ನ್ಯಾಯಾಲಯ, ಕರಿನಂಜನಪುರ ರಸ್ತೆ, ಅಂಬೇಡ್ಕರ್ ಭವನದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವವರೆಗೆ ಜಿಲ್ಲಾಧಿ ಕಾರಿಗಳು ನಡೆದುಕೊಂಡೇ ಸ್ಥಳ ಪರಿಶೀ ಲಿಸಿದರು. ಜಿಲ್ಲಾ ಕಾರಾಗೃಹದ ಮುಂಭಾಗ ಅಂಬೇಡ್ಕರ್ ಭವನದ ಮುಂಭಾಗ ಸ್ಥಗಿ ತವಾಗಿರುವ ಕಾಮಗಾರಿ ವೀಕ್ಷಿಸಿದರು. ಅಲ್ಲದೆ ಟೇಪ್ ಹಿಡಿದು ರಸ್ತೆಯ ಉದ್ದ-ಅಗಲ ಪರಿಶೀಲಿಸಿದರು.

ಈ ವೇಳೆ ಸ್ಥಳದ ಲ್ಲಿದ್ದ ರಸ್ತೆ ಅಭಿವೃದ್ಧಿಯಿಂದ ಜಾಗ ಹಾಗೂ ಕಟ್ಟಡ ಕಳೆದು ಕೊಳ್ಳುತ್ತಿರುವವರೊಟ್ಟಿಗೆ ಚರ್ಚಿಸಿದರು. ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ನಾಗರಿಕರು ಜಿಲ್ಲಾಡಳಿತ ದೊಂದಿಗೆ ಸಹಕರಿಸುವಂತೆ ಇದೇ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮನವಿ ಮಾಡಿದರು.

ಪಿಡಬ್ಲ್ಯೂಡಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಾಸುದೇವ್, ಚಿee ವಿಜಯಕುಮಾರ್, ನಗರಸಭೆ ಆಯುಕ್ತ ಎಂ.ರಾಜಣ್ಣ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಸತ್ಯಮೂರ್ತಿ, ಪರಿಸರ ಅಧಿಕಾರಿ ಗಿರಿಜಮ್ಮ, ತಹಶೀಲ್ದಾರ್ ಪುರಂದರ ಇತರ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

Translate »