ಆನೆ ದಾಳಿ: ಮಾನಸಿಕ ಅಸ್ವಸ್ಥ ಸಾವು
ಮೈಸೂರು

ಆನೆ ದಾಳಿ: ಮಾನಸಿಕ ಅಸ್ವಸ್ಥ ಸಾವು

May 18, 2019

ಪಿರಿಯಾಪಟ್ಟಣ: ಆನೆ ದಾಳಿಯಿಂದ ಅಪರಿಚಿತ ಮಾನಸಿಕ ಅಸ್ವಸ್ಥನೋರ್ವ ಮೃತಪಟ್ಟಿರುವ ಘಟನೆ ಗುರು ವಾರ ರಾತ್ರಿ ಜರುಗಿದೆ. ತಾಲೂಕಿನ ಅಳ್ಳೂರು ಗೇಟ್‍ನ ಹುಣಸೂರು ಮತ್ತು ಗೋಣಿಕೊಪ್ಪ ರಸ್ತೆಯ ಪಕ್ಕದ ಅರಣ್ಯದ ಪೊದೆಯಲ್ಲಿ ಮೃತ ದೇಹ ದೊರೆತಿದೆ.

ಬೆಳಗಿನ ಜಾವ ದಾರಿಹೋಕರು ಈ ಮೃತದೇಹವನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಲಾಗಿ, ಸ್ಥಳಕ್ಕೆ ಪಿರಿಯಾ ಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಕಮಾರ್ ಭೇಟಿ ನೀಡಿ, ಪರಿಶೀಲಿಸಿದರು. ಕಳೆದ ಐದಾರು ದಿನಗಳಿಂದ ಮಾನಸಿಕ ಅಸ್ವಸ್ಥ ಗೇಟ್ ಬಳಿ ಓಡಾಡುತ್ತಿದ್ದು, ಆತನೇ ಆನೆ ದಾಳಿಯಲ್ಲಿ ಬಲಿಯಾಗಿದ್ದಾನೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ರತನ್ ಕುಮಾರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.

ರೈತರ ಅಕ್ರೋಶ: ಅರಣ್ಯಕ್ಕೆ ಸೇರಿದ ಆನೆ ಚೌಕೂರು, ಅಳಲೂರು, ಮಾಲಂಗಿ, ಮುದ್ದನಹಳ್ಳಿ, ಪಂಚವಳ್ಳಿ ಸುತ್ತ ಮುತ್ತ ರೈತರ ಜಮೀನಿಗೆ ಪ್ರತಿನಿತ್ಯವು ಕಾಡಾನೆ ಹಾವಳಿಯಿಂದ ಜಮೀನಿನಲ್ಲಿದ್ದ ಬೆಳೆ, ತೋಟ, ಮನೆಗಳು ನಾಶವಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನ ವಾಗುತ್ತಿಲ್ಲ. ಹಿರಿಯ ಅಧಿಕಾರಿಗಳು ಗಮನಹರಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟುವಂತೆ ರೈತ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

Translate »