ನೀರಿನ ಕೊರತೆ: ಧರ್ಮಸ್ಥಳ ಯಾತ್ರೆ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ
ಮೈಸೂರು

ನೀರಿನ ಕೊರತೆ: ಧರ್ಮಸ್ಥಳ ಯಾತ್ರೆ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ

May 18, 2019

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ನೀರಿನ ಅಭಾವ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗಳಿಗೂ ಬಿಸಿ ಮುಟ್ಟಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿ ಗಳು ಕೆಲವು ದಿನಗಳ ಮಟ್ಟಿಗೆ ತಮ್ಮ ಯಾತ್ರೆಯನ್ನು ಮುಂದೂಡುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದ್ದಾರೆ.

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಭಕ್ತರಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ನೀರಿನ ಅಭಾವ ಉಂಟಾಗಿದೆ, ಇನ್ನೂ ದೇವ ಸ್ಥಾನದ ವಸತಿ ಗೃಹಗಳಿಗೂ ಹೆಚ್ಚಿನ ನೀರು ಖರ್ಚಾಗುತ್ತದೆ. ಈಗ ನೀರಿನ ಅಭಾವ ಇರುವುದರಿಂದ ಧರ್ಮಸ್ಥಳ ಯಾತ್ರಿಕರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಡಾ. ಹೆಗ್ಗಡೆಯವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Translate »