ಧರ್ಮಸ್ಥಳದಲ್ಲಿ ತೀರಿಲ್ಲ ನೀರಿನ ಬವಣೆ: ಬಾಳೆಎಲೆ ಮೊರೆ ಹೋದ  ಹೋಟೆಲ್ ಮಾಲೀಕರು!
ಮೈಸೂರು

ಧರ್ಮಸ್ಥಳದಲ್ಲಿ ತೀರಿಲ್ಲ ನೀರಿನ ಬವಣೆ: ಬಾಳೆಎಲೆ ಮೊರೆ ಹೋದ ಹೋಟೆಲ್ ಮಾಲೀಕರು!

May 21, 2019

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದು, ನೇತ್ರಾವತಿಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲ್ ಮಾಲೀಕರು ಬಾಳೆಎಲೆ ಮೊರೆ ಹೋಗಿದ್ದಾರೆ.

ಮಂಗಳೂರಿನಿಂದ 75 ಕಿಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ, ಆದರೆ ಇಂತಹ ಪವಿತ್ರ ಸ್ಥಳದಲ್ಲಿ ನೀರಿನ ಅಭಾವ ತಲೆದೋರಿದೆ. ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಇತ್ತೀಚೆಗೆ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳು ಕೆಲವು ದಿನ ಬಿಟ್ಟು ಬರುವಂತೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದರು.

ಅಲ್ಲದೇ ದೇವರ ಅಭಿಷೇಕಕ್ಕೂ ನೀರಿನ ಕೊರತೆಯಾಗುತ್ತಿರುವುದನ್ನು ಮನಗಂಡ ವೀರೇಂದ್ರ ಹೆಗ್ಗಡೆಯವರು, ನೀರಿನ ಸಮಸ್ಯೆ ನಿವಾರಣೆಯಾಗುವವರೆಗೂ ಭಕ್ತರು ಪ್ರವಾಸವನ್ನು ಮುಂದೂಡಬೇಕೆಂದು ತಿಳಿಸಿದ್ದರು. ದೇವಸ್ಥಾನದ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತದೆ ಎಂದು ಭಾನು ವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಇನ್ನು ನಗರದಲ್ಲಿ ರುವ ಹೋಟೆಲ್ ಮಾಲೀಕರು ನೀರಿನ ಅಭಾವದಿಂದ ಊಟಕ್ಕೆ ಬಾಳೆಎಲೆ ಮೊರೆ ಹೋಗಿದ್ದಾರೆ. ಪ್ಲೇಟ್‍ಗಳನ್ನು ತೊಳೆಯಲು ನೀರು ಬೇಕಾಗುತ್ತದೆ, ಆದರೆ ಬಾಳೆಎಲೆ ಯಲ್ಲಿ ತಿಂದು ಬಿಸಾಡಬಹುದು. ನಾವು ಈ ಮೊದಲು ದಿನಕ್ಕೆ 12 ಸಾವಿರ ಲೀಟರ್ ನೀರು ಬಳಸುತ್ತಿದ್ದೆವು, ಈಗ 6ಸಾವಿರ ಲೀಟರ್ ನೀರು ಸಾಕಾಗುತ್ತಿದೆ, ಇನ್ನು ಮುಂದೆ ಬಾಳೆಲೆಯಲ್ಲೇ ಗ್ರಾಹಕರಿಗೆ ಊಟ ಒದಗಿಸಲಾಗುವುದು ಎಂದು ಸ್ವಾಗತ್ ಹೋಟೆಲ್‍ನ ರಾಘವೇಂದ್ರ ರಾವ್ ಹೇಳಿದ್ದಾರೆ.

Translate »