ಮೈಸೂರು-ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ
ಮೈಸೂರು

ಮೈಸೂರು-ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ

November 22, 2020

ಮೈಸೂರು,ನ.21(ಎಸ್‍ಬಿಡಿ)- ಬಹುನಿರೀಕ್ಷಿತ ಮೈಸೂರು-ಮಂಗಳೂರು ನಡು ವಿನ ವಿಮಾನಯಾನ ಸೇವೆಗೆ ಅಂತೂ ಕಾಲ ಕೂಡಿಬಂದಿದೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಉಡಾನ್ ಯೋಜನೆಯಡಿ ಡಿಸೆಂಬರ್ 10ರಿಂದ ಈ ಮಾರ್ಗದಲ್ಲಿ ಸೇವೆ ಆರಂಭಿಸಲಿದೆ.

ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರ ಡುವ ವಿಮಾನ ಮಧ್ಯಾಹ್ನ 12. 15ಕ್ಕೆ ಮಂಗಳೂರು ತಲುಪಲಿದೆ. ಮತ್ತೆ ಅಲ್ಲಿಂದ ಮಧ್ಯಾಹ್ನ 12. 40ಕ್ಕೆ ಹೊರಟು 1.40ಕ್ಕೆ ಮೈಸೂರಿಗೆ ವಾಪಸ್ಸಾಗಲಿದೆ. ಈ ವಿಷಯವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪ್‍ಸಿಂಹ, ಪ್ರಧಾನಿ ಮೋದಿ ಹಾಗೂ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಹರ್ದೀಪ್‍ಪುರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಂಗಳೂರು ಮೂಲದ ಸಾವಿರಾರು ಕುಟುಂಬಗಳು ಮೈಸೂರಿನಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಈ 2 ನಗರಗಳ ನಡುವೆ ವಿಮಾನಯಾನ ಸೇವೆಗೆ ಬೇಡಿಕೆ ಯಿತ್ತು. ಈ ನಿಟ್ಟಿನಲ್ಲಿ ಉದ್ಯಮಿಗಳು, ಹಲವು ಸಂಘಸಂಸ್ಥೆಗಳು ನಿರಂತರವಾಗಿ ಆಗ್ರಹಿಸಿ ದ್ದರು. ಹಾಗಾಗಿ ಕಳೆದ ಅ.25ರಿಂದಲೇ ಸೇವೆ ಆರಂಭಿಸುವುದಾಗಿ ಪ್ರಕಟಿಸಲಾಗಿತ್ತಾದರೂ ಕೆಲ ಕಾರಣದಿಂದ ವಿಳಂಬವಾಗಿತ್ತು. ಸದ್ಯ ಮೈಸೂರು-ಮಂಗಳೂರು ವಿಮಾನ ಯಾನ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಟಿಕೆಟ್ ಕಾಯ್ದಿರಿಸುವುದು ಸೇರಿದಂತೆ ಹೆಚ್ಚಿನ ಮಾಹಿತಿಗೆ www.airindia.in ಸಂಪರ್ಕಿಸಬಹುದು. ಜೊತೆಗೆ ಯಾವುದೇ ಟ್ರಾವೆಲ್ ಏಜೆಂಟ್ಸ್ ಸಂಪರ್ಕಿಸಬಹುದಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮವನ್ನು ನಾಗರಿಕ ವಿಮಾನಯಾನ ಸಚಿವಾಲಯ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Translate »