ಬೆಂಗಳೂರು: ಕೊರೊನಾ ಹಿನ್ನೆಲೆ ಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿಗಳ ವಿಲೇ ಪ್ರಕ್ರಿಯೆಯನ್ನು ಆಹಾರ ಇಲಾಖೆಯು ಡಿಸೆಂಬರ್ ಮೊದಲ ವಾರದಲ್ಲಿ ಆರಂಭಿಸಲಿದೆ. ಜತೆಗೆ, ಆನ್‍ಲೈನ್‍ನಲ್ಲಿಯೂ ಹೊಸ ದಾಗಿ ಅರ್ಜಿ ಸಲ್ಲಿಸುವ ಸಂಬಂಧ ಅವ ಕಾಶ ಕಲ್ಪಿಸುವ ನಿರೀಕ್ಷೆಯಿದೆ.
9 ತಿಂಗಳ ಬಳಿಕ ಅನುಮತಿ: ಕೊರೊನಾ ನಿಯಂತ್ರಿಸುವ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಹಾಗೂ ಬಾಕಿ ಅರ್ಜಿ ಗಳ ವಿಲೇ ಪ್ರಕ್ರಿಯೆಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ, ಹೊಸ ಕಾರ್ಡ್‍ಗಾಗಿ ಅರ್ಜಿದಾರರು ಮತ್ತಷ್ಟು ತಿಂಗಳು ಕಾಯಬೇಕಾಗಿತ್ತು. ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಹಾಗೂ ಆನ್ ಲಾಕ್ ತೆರವು ಹಿನ್ನೆಲೆಯಲ್ಲಿ ಹಿಂದಿನ ವ್ಯವಸ್ಥೆ ಯಂತೆ ಎಲ್ಲ ವಹಿವಾಟುಗಳು ನಡೆಯು ತ್ತಿರುವುದರಿಂದ ಬಾಕಿ ಅರ್ಜಿಗಳ ವಿಲೇ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ ಮೊದಲ ವಾರದಲ್ಲಿ ಅನು ಮತಿ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮೂರು ಲಕ್ಷ ಅರ್ಜಿ ಬಾಕಿ: ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 35,56 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಇದರಲ್ಲಿ 31.77 ಲಕ್ಷ ಅರ್ಜಿಗಳು ವಿಲೇಯಾಗಿದ್ದು, 3.78 ಲಕ್ಷ ಅರ್ಜಿಗಳು ವಿಲೇಯಾಗದೆ ಬಾಕಿ ಉಳಿದಿವೆ. 2017ರಲ್ಲಿ ಸಲ್ಲಿಕೆಯಾಗಿರುವ ಅತಿ ಹೆಚ್ಚು 25,28,736 ಅರ್ಜಿಗಳ ಪೈಕಿ 25,00,736 ಅರ್ಜಿಗಳು ವಿಲೇಯಾಗಿದ್ದು, 28 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. 2018ರಲ್ಲಿ ಸಲ್ಲಿಕೆಯಾಗಿರುವ 6,38,154 ಅರ್ಜಿಗಳ ಪೈಕಿ 3,77,199 ಅರ್ಜಿಗಳು ವಿಲೇವಾದರೆ ಬರೋಬ್ಬರಿ 2,60,955 ಅರ್ಜಿಗಳು ವಿಲೇವಾಗಿಲ್ಲ ಹಾಗೂ 2019ರಲ್ಲಿ 89,847 ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿವೆ. ಏನೇನು ದಾಖಲೆಗಳು ಬೇಕು: ರೇಷನ್ ಕಾರ್ಡ್‍ಗಾಗಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರ ಬೇಕು.