ಕೊಡವರಿಗೆ ಸೋಷಿಯಲ್ ಕ್ಲಬ್‍ನಿಂದ 1 ಲಕ್ಷ ರೂ ದೇಣಿಗೆ
ಹಾಸನ

ಕೊಡವರಿಗೆ ಸೋಷಿಯಲ್ ಕ್ಲಬ್‍ನಿಂದ 1 ಲಕ್ಷ ರೂ ದೇಣಿಗೆ

September 21, 2018

ಹೊಳೆನರಸೀಪುರ: ಕೊಡಗು ಪ್ರವಾಹ ಸಂತ್ರಸ್ತರ ನಿಧಿಗೆ ಪಟ್ಟಣದ ಸೋಷಿ ಯಲ್ ಕ್ಲಬ್ ವತಿಯಿಂದ ಒಂದು ಲಕ್ಷ ರೂ. ಚೆಕ್ ಅನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಸ್ತಾಂತರಿಸಲಾಯಿತು.

ಹಾಸನದ ನಗರದ ಜಿಲ್ಲಾಧಿಕಾರಿ ಕಚೇರಿಗೆ ಕ್ಲಬ್‍ನ ಸದಸ್ಯರು ತೆರಳಿ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಂಕಷ್ಟಕ್ಕೆ ನೆರವಾ ಗುವ ಉದ್ದೇಶದಿಂದ ದೇಣಿಗೆ ನೀಡಿದರು.

ಕ್ಲಬ್‍ನ ಸದಸ್ಯರು ಮಾತನಾಡಿ, ಸೋಷಿ ಯಲ್ ಕ್ಲಬ್ ಸಮಾಜಮುಖಿ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಸ್ವಾತಂತ್ರ ದಿನಾಚರಣೆ ಸಮಾ ರಂಭದಲ್ಲಿ ಭಾಗವಹಿಸುವ ಪಟ್ಟಣದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಗಣ್ಯರು ಸೇರಿದಂತೆ 5 ಸಾವಿರ ಜನರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತರಿಗೆ ಸನ್ಮಾನ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧನ ಸಹಾಯ ಮತ್ತು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ತೆರೆಯಲು ಕಂಪ್ಯೂಟರ್‍ಗಳನ್ನು ಉಚಿತ ವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಸೋಷಿಯಲ್ ಕ್ಲಬ್‍ನಲ್ಲಿ ಇರುವ ಒಳಾಂಗಣ ಕ್ರೀಡಾಂಗಣವನ್ನು ಹಲವು ಸಂಘ ಸಂಸ್ಥೆಗಳಿಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶೆಟಲ್ ಪಂದ್ಯಾವಳಿ ಆಯೋಜಿಸಲು ಉಚಿತವಾಗಿ ನೀಡಲಾಗು ತ್ತಿದೆ. ಈ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸೋಷಿಯಲ್ ಕ್ಲಬ್ 1939ರಲ್ಲಿ ಪ್ರಾರಂಭ ವಾಗಿ ಹಲವು ಗಣ್ಯ ವ್ಯಕ್ತಿಗಳಿಗೆ ಸದಸ್ಯತ್ವ ವನ್ನು ನೀಡಿದೆ. ಹಿರಿಯ ಕ್ರಿಕೆಟ್ ಆಟಗಾರ ಸೈಯದ್ ಕಿರ್ಮಾನಿ ಕ್ಲಬಿನ ಗೌರವ ಸದಸ್ಯ ರಾಗಿದ್ದಾರೆ ಎಂದು ವಿವರಿಸಿದರು.

Translate »