ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ
ಹಾಸನ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ

September 21, 2018

ಹಾಸನ:  ‘ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧಿಸಲಾಗಿದ್ದು, ಇದನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣದ ವಿವಿಧ ಟೀ ಸ್ಟಾಲ್‍ಗಳು, ಹೋಟೆಲ್‍ಗಳು, ಪ್ರಾವಿಜನ್ ಸ್ಟೋರ್ ಹಾಗೂ ಬೀದಿ ಬದಿ ವ್ಯಾಪಾರಿ ಅಂಗಡಿಗಳಿಗೆ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾಳಿ ನಡೆಸಿ 1,180 ರೂ. ದಂಡ ವಸೂಲಿ ಮಾಡಿದ್ದಾರೆ.

ಧೂಮಪಾನ, ಗುಟ್ಕಗಳಂತಹ ದುರಭ್ಯಾಸಗಳಿಗೆ ಬಲಿಯಾದರೆ ಗಂಟಲು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಆಸ್ತಮ ಮೂತ್ರ ಕೋಶ ಕ್ಯಾನ್ಸರ್, ಕ್ಷಯ, ಶ್ವಾಸಕೋಶ ಹಾಗೂ ಗ್ಯಾಂಗ್ರಿನ್‍ನಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚಿತ್ರಮಂದಿರ ಶಾಲಾ ಕಾಲೇಜುಗಳ ಆವರಣದಿಂದ ನೂರು ಮೀಟರ್ ಅಂತರದಲ್ಲಿ ಮತ್ತು ಹೆಚ್ಚು ಜನಸಂದಣಿ ಸ್ಥಳಗಳಲ್ಲಿ ಸಾರ್ವಜನಿಕರು ಯಾವುದೇ ತರಹದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ಮತ್ತು ಪ್ರದರ್ಶನಕ್ಕೆ ಇಟ್ಟಿದ್ದರೆ, 2003 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೋಟ್ಪಾ ಕಾಯ್ದೆಯಡಿ ದಂಡ ವಿಧಿಸಲಾಗುವುದು ಎಂದರು.

ಹಾಸನ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭಾರತಿ ಮಾತನಾಡಿ, ಕೆಲವರು ಬೇಜವಾಬ್ದಾರಿಯಿಂದ ನಾಮ ಫಲಕ ಹಾಕದೇ ಇರುವುದರಿಂದ ಅಂಗಡಿ ಹೋಟೇಲ್‍ಗಳ ಮಾಲಿಕರುಗಳಿಗೂ ಸಹ ಸ್ಥಳದಲ್ಲೇ ದಂಡ ವಿಧಿಸಲಾಗಿದೆ ಎಂದರು.
ದಾಳಿಯ ಸಂದರ್ಭದಲ್ಲಿ ತಾಲೂಕÀು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ಸಹಾಯಕರಾದ ಲಲಿತಮ್ಮ, ರೇಣುಕಮ್ಮ, ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚಂದ್ರು ಮತ್ತು ಪೊಲೀಸ್ ಠಾಣೆ ಸಿಬ್ಬಂದಿ ಪಾಲ್ಗೊಂಡಿದ್ದರು.

Translate »