Tag: Holenarasipura

ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ
ಹಾಸನ

ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ

December 6, 2018

ಹೊಳೆನರಸೀಪುರ: ಸಕ್ಕರೆ ಕಾರ್ಖಾನೆ ವಾಹನ ಮಗುಚಿ ಬಿದ್ದ ಪರಿಣಾಮ 16 ಮಹಿಳಾ ಕಾರ್ಮಿಕರು ಸೇರಿ 17 ಮಂದಿ ಗಾಯಗೊಂಡ ಘಟನೆ ಹೊಳೆನರಸೀ ಪುರ ತಾಲೂಕು ಹಾಸನ-ಮೈಸೂರು ರಸ್ತೆಯ ಹಳೇಕೋಟೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಮಹಿಳಾ ಕಾರ್ಮಿಕರಾದ ಪೂರ್ಣಿಮಾ, ಸುನೀತಾ, ಶಾಂತಮ್ಮ, ಹೇಮಾವತಿ, ಯಶೋಧಮ್ಮ, ನಿಂಗಮ್ಮ, ಜ್ಯೋತಿ, ಗಿರೀಶ್, ರುಕ್ಮಿಣಿ, ಶಾಂತ, ನಾಗಮ್ಮ, ಗಂಗಮ್ಮ, ಕಾಳಮ್ಮ, ಗಾಯಿತ್ರಿ, ಜಯಮ್ಮ, ಸುಜಾತಾ, ನೀಲಮ್ಮ ಅಪಘಾತದಲ್ಲಿ ಗಾಯಗೊಂಡರು. ಸಹ್ಯಾದ್ರಿ ಶುಗರ್ಸ್ ಅಂಡ್ ಡಿಸ್ಟಲರಿ ಕಾರ್ಖಾನೆಯ ಕಾರ್ಮಿಕರಾದ ಇವರೆಲ್ಲರೂ ಮಂಗಳವಾರ ಕೆಲಸ ಮುಗಿಸಿ…

ಹೇಮಾವತಿ ನದಿ ದಡದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ
ಹಾಸನ

ಹೇಮಾವತಿ ನದಿ ದಡದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ

October 31, 2018

ಹೊಳೆನರಸೀಪುರ: ಪಟ್ಟಣದ ಹೇಮಾವತಿ ನದಿ ಪಕ್ಕದಲ್ಲಿರುವ ರಿವರ್ ಬ್ಯಾಂಕ್ ರಸ್ತೆ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ ಮೇಲೆ ಸೋಮವಾರ ದಾಳಿ ನಡೆಸಿದ ನಗರ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿ, ಒಂದು ಎಮ್ಮೆ, ಒಂದು ಹಸು, ಏಳು ಕರು ಸೇರಿದಂತೆ 9 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪಟ್ಟಣದ ಶಿಯಾಮೊಹಲ್ಲದ ಚಿಕ್ಕ ಮಸೀದಿ ರಸ್ತೆಯಲ್ಲಿ ಅಕ್ರಮವಾಗಿ ನಡೆ ಸುತ್ತಿದ್ದ ಕಸಾಯಿಖಾನೆಯಲ್ಲಿ ಜಾನು ವಾರುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಗೋಗ್ಯಾನ್ ಫೌಂಡೇಷನ್ ಸಂಚಾಲಕಿ ಕವಿತಾ ಜೈನ್ ನೀಡಿದ ದೂರಿನ ಮೇರೆಗೆ…

ಲೋಕ ಕಲ್ಯಾಣಾರ್ಥ ಸಾಮೂಹಿಕ ಹೋಮ
ಹಾಸನ

ಲೋಕ ಕಲ್ಯಾಣಾರ್ಥ ಸಾಮೂಹಿಕ ಹೋಮ

September 30, 2018

ಹೊಳೆನರಸೀಪುರ:  ಶ್ರೀ ಗಣ ಪತಿ ಮಹೋತ್ಸವ ಸೇವಾ ಸಮಿತಿಯ 61ನೇ ವರ್ಷದ ಪೂಜಾ ಕಾರ್ಯಕ್ರಮದ ಅಂಗ ವಾಗಿ ಪಟ್ಟಣದಲ್ಲಿ ಶನಿವಾರ ಲೋಕ ಕಲ್ಯಾಣ ಕ್ಕಾಗಿ ಹಾಗೂ ಮಳೆ, ಬೆಳೆ ಸುಭಿಕ್ಷವಾಗಿ ರಲಿ ಎಂದು ಸಾಮೂಹಿಕ ಹೋಮ ಹವನ ನಡೆಸಲಾಯಿತು. 61 ವರ್ಷದ ಹಿಂದೆ ಮಾಜಿ ಶಾಸಕ ದಿವಂಗತ ವೈ.ವೀರಪ್ಪನವರ ನೇತೃತ್ವದಲ್ಲಿ ಶ್ರೀ ಗಣಪತಿ ಮಹೋತ್ಸವ ಸೇವಾ ಸಮಿತಿ ಯನ್ನು ಆರಂಭಿಸಲಾಗಿದ್ದು, 61ನೇ ವರ್ಷಾ ಚರಣೆಯನ್ನು ಅರ್ಥಪೂರ್ಣವಾಗಿ ಆಚರಿ ಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು….

ಕೊಡವರಿಗೆ ಸೋಷಿಯಲ್ ಕ್ಲಬ್‍ನಿಂದ 1 ಲಕ್ಷ ರೂ ದೇಣಿಗೆ
ಹಾಸನ

ಕೊಡವರಿಗೆ ಸೋಷಿಯಲ್ ಕ್ಲಬ್‍ನಿಂದ 1 ಲಕ್ಷ ರೂ ದೇಣಿಗೆ

September 21, 2018

ಹೊಳೆನರಸೀಪುರ: ಕೊಡಗು ಪ್ರವಾಹ ಸಂತ್ರಸ್ತರ ನಿಧಿಗೆ ಪಟ್ಟಣದ ಸೋಷಿ ಯಲ್ ಕ್ಲಬ್ ವತಿಯಿಂದ ಒಂದು ಲಕ್ಷ ರೂ. ಚೆಕ್ ಅನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಸ್ತಾಂತರಿಸಲಾಯಿತು. ಹಾಸನದ ನಗರದ ಜಿಲ್ಲಾಧಿಕಾರಿ ಕಚೇರಿಗೆ ಕ್ಲಬ್‍ನ ಸದಸ್ಯರು ತೆರಳಿ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಂಕಷ್ಟಕ್ಕೆ ನೆರವಾ ಗುವ ಉದ್ದೇಶದಿಂದ ದೇಣಿಗೆ ನೀಡಿದರು. ಕ್ಲಬ್‍ನ ಸದಸ್ಯರು ಮಾತನಾಡಿ, ಸೋಷಿ ಯಲ್ ಕ್ಲಬ್ ಸಮಾಜಮುಖಿ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಸ್ವಾತಂತ್ರ ದಿನಾಚರಣೆ ಸಮಾ ರಂಭದಲ್ಲಿ ಭಾಗವಹಿಸುವ ಪಟ್ಟಣದ…

ತವರಿನಲ್ಲಿ `ತೆನೆ’ ಮಣಿಸಲು `ಕೈ-ಕಮಲ’ ಒಳಒಪ್ಪಂದ
ಹಾಸನ

ತವರಿನಲ್ಲಿ `ತೆನೆ’ ಮಣಿಸಲು `ಕೈ-ಕಮಲ’ ಒಳಒಪ್ಪಂದ

September 1, 2018

ಹೊಳೆನರಸೀಪುರ:  ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಾವು ಮುಂಗುಸಿಯಂತಿರುವ ಕಾಂಗ್ರೆಸ್, ಬಿಜೆಪಿ ಹೊಳೆರನಸೀಪುರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಮಣಿಸಲು ಒಳ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಲಕ್ಷಣಗಳಿದ್ದು, ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಜೆಡಿಎಸ್‍ನತ್ತ ಮುಖ ಮಾಡುವ ಸಾಧ್ಯತೆಗಳು ಗೋಚರಿಸಿವೆ. ಈ ಬಾರಿಯ ಪುರಸಭಾ ಚುನಾವಣೆ ಯಲ್ಲಿ 23 ವಾರ್ಡ್‍ಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ರಾಷ್ಟ್ರಿಯ ಪಕ್ಷ ಬಿಜೆಪಿ ಮಾತ್ರ ಕಾಂಗ್ರೆಸ್‍ಗೆ ಪರೋಕ್ಷ ಬೆಂಬಲ ಸೂಚಿಸಿ ಕೇವಲ 12 ವಾರ್ಡ್‍ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು…

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ
ಹಾಸನ

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ

August 29, 2018

ಹೊಳೆನರಸೀಪುರ: ತಾಲೂಕಿನ ಹಂಗರ ಹಳ್ಳಿ ಬಳಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನೆಗೂ ಮುನ್ನವೇ ಪದೇ-ಪದೇ ಕುಸಿಯುತ್ತಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಹಂಗರಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆಯು ಈಗಾಗಲೇ 3 ಬಾರಿ ಕುಸಿದಿದ್ದು, ಸುತ್ತಲಿನ ಗ್ರಾಮ ಸ್ಥರು ಹಾಗೂ ಸೇತುವೆ ಸಮೀಪ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಸೇತುವೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೋಟ್ಯಾಂತರ ರೂ. ಅನುದಾನ ವ್ಯರ್ಥವಾಗಿದೆ. ಹಾಸನ…

ಜನತೆಗೆ 24×7 ಕುಡಿಯುವ ನೀರು ಸರಬರಾಜು
ಹಾಸನ

ಜನತೆಗೆ 24×7 ಕುಡಿಯುವ ನೀರು ಸರಬರಾಜು

August 28, 2018

ಹೊಳೆನರಸೀಪುರ: ಪಟ್ಟಣದ ಜನತೆಗೆ 24×7 ಕುಡಿಯುವ ನೀರು ಸರಬ ರಾಜು ಮಾಡಲಾಗುವುದು ಎಂದು ಲೋಕೋ ಪಯೋಗಿ, ಜಿಲ್ಲಾ ಉಸ್ತವಾರಿ ಸಚಿವ ಹೆಚ್.ಡಿ.ರೇವಣ್ಣ ಭರವಸೆ ನೀಡಿದರು. ಇದೇ ತಿಂಗಳ 31ರಂದು ನಡೆಯುವ ಪುರಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಗಳ ಪರ ಪ್ರಚಾರಕ್ಕೂ ಮುನ್ನ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 20 ವರ್ಷಗಳಿಂದಲೂ ಜೆಡಿಎಸ್ ಪುರ ಸಭಾ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಪ್ರಸ್ತುತ ಚುನಾವಣೆಯಲ್ಲೂ 23 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದೆ…

ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ
ಮೈಸೂರು

ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ

August 25, 2018

ಹೊಳೆನರಸೀಪುರ: ಜನರ ಆಶೀರ್ವಾದವಿದೆ, ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಾಲೂಕಿನ ಹಾಡ್ಯ ಗ್ರಾಮದಲ್ಲಿ ಜರುಗಿದ ಈಶ್ವರ ಹಾಗೂ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾವು ರಾಜಕೀಯ ದಲ್ಲಿ ಎಂದು ಹೆದರಿ ಓಡಿ ಹೋಗುವುದಿಲ್ಲ. ರಾಜಕೀಯ ನಿಂತ ನೀರಲ್ಲ. ಕಾಲಚಕ್ರ ಸದಾ ಚಲಿಸುತ್ತಿರುತ್ತದೆ. ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿ ಬದಲಾವಣೆಯಾಗುತ್ತದೆ. ಜನರ ಆಶೀರ್ವಾದವಿದೆ, ಮತ್ತೊಮ್ಮೆ ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಭವಿಷ್ಯ ನುಡಿದರು. ನನ್ನ ಸರ್ಕಾರದ ಅವಧಿಯಲ್ಲಿ…

ಹೇಮಾವತಿ ನದಿಗೆ ಹಾರಿದ ವ್ಯಕ್ತಿ: ವೀಡಿಯೋ ವೈರಲ್
ಹಾಸನ

ಹೇಮಾವತಿ ನದಿಗೆ ಹಾರಿದ ವ್ಯಕ್ತಿ: ವೀಡಿಯೋ ವೈರಲ್

August 21, 2018

ಹೊಳೆನರಸೀಪುರ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಗೆ ಹಾರಿ ವ್ಯಕ್ತಿಯೋರ್ವ ಈಜಿ ದಡ ಸೇರುವ ಹುಚ್ಚು ಸಾಹಸ ಪ್ರದರ್ಶಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಟ್ಟಣದ ಕೋಟೆ ಶ್ರೀರಾಮು ಎಂಬಾತ ನದಿಗೆ ಹಾರಿದ ಹುಚ್ಚು ಸಾಹಸಿ. ತನ್ನ ಪುಟಾಣಿ ಮಕ್ಕಳಾದ ಹರ್ಷಗೌಡ, ಧೃವಗೌಡ ಸಮ್ಮುಖದಲ್ಲಿ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾನೆ. ಮಕ್ಕಳು ಅಪ್ಪ ನದಿಗೆ ಹಾರಬೇಡ ಎಂಬ ಅಳಲನ್ನು ಲೆಕ್ಕಿಸದೆ ಎತ್ತರದ ಸೇತುಯಿಂದ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾರೆ….

ಮಕ್ಕಳಲ್ಲಿ ನೈತಿಕ, ಸಾಮಾಜಿಕ ಮೌಲ್ಯ ಬೆಳೆಸಲು ಸಲಹೆ
ಹಾಸನ

ಮಕ್ಕಳಲ್ಲಿ ನೈತಿಕ, ಸಾಮಾಜಿಕ ಮೌಲ್ಯ ಬೆಳೆಸಲು ಸಲಹೆ

August 4, 2018

ಹೊಳೆನರಸೀಪುರ:  ‘ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ನೈತಿಕ, ಸಾಮಾಜಿಕ, ಶೈಕ್ಷಣಿಕ ಮೌಲ್ಯ ಬೆಳೆಸಬೇಕು’ ಎಂದು ತಹಶೀಲ್ದಾರ್ ವೈ.ಎಂ.ರೇಣು ಕುಮಾರ್ ಸಲಹೆ ನೀಡಿದರು. ಪಟ್ಟಣದ ಚೆನ್ನಾಂಬಿಕಾ ಚಿತ್ರಮಂದಿರ ದಲ್ಲಿ ನಡೆದ ‘ಅರಿವು’ ಎಂಬ ಮಕ್ಕಳ ಚಲನ ಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಅರಿವು ಮೂಡಿಸಲು ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಾಗಿ ವಿಷಯಾಧಾರಿತ ಶಿಕ್ಷಣದ ಜೊತೆಗೆ ಮನೋರಂಜನೆಯ ಮೂಲಕ ಶಿಕ್ಷಣ ನೀಡಬೇಕು. ಇದಕ್ಕೆ ಪೂರಕವಾಗಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಬುದ್ಧ,…

1 2 3 4
Translate »