Tag: Holenarasipura

ಶೀತಪೀಡಿತ ಗ್ರಾಮಗಳ ಸ್ಥಳಾಂತರಿಸುವಂತೆ ಆಗ್ರಹ
ಹಾಸನ

ಶೀತಪೀಡಿತ ಗ್ರಾಮಗಳ ಸ್ಥಳಾಂತರಿಸುವಂತೆ ಆಗ್ರಹ

July 31, 2018

ಹಾಸನ: ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಕೂಡಲೇ ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾಡಳಿತ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಗ್ರಾಮಗಳ ಗ್ರಾಮಸ್ಥರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಇದೇ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಜೀವನ ನಾವು ಸಾಗಿಸುತ್ತಿದ್ದೇವೆ. ಈ ಗ್ರಾಮಗಳ ಸುತ್ತ ಹೇಮಾ ವತಿ ಬಲದಂಡೆ ನಾಲೆ ಹಾದು ಹೋಗಿದೆ. ನಾಲೆಗೆ…

ನೇಣು ಬಿಗಿದುಕೊಂಡು ವ್ಯಕ್ತಿ ಸಾವು
ಹಾಸನ

ನೇಣು ಬಿಗಿದುಕೊಂಡು ವ್ಯಕ್ತಿ ಸಾವು

July 25, 2018

ಹೊಳೆನರಸೀಪುರ:  ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಶರಣಾಗಿರುವ ಘಟನೆ ಹಾಸನ-ಮೈಸೂರು ಹೆದ್ದಾರಿಯ ಆಲದಹಳ್ಳಿ ರಸ್ತೆಯ ಬಳಿ ನಡೆದಿದೆ. ಮೃತನು ಚನ್ನೇಶ(40) ಮೃತ ವ್ಯಕ್ತಿ ಬಿಸಲೆಹಳ್ಳಿಯ ಕಡೂರು ನಿವಾಸಿ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರವಿ ಶಂಕರ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತನ ಜೇಬಿನಲ್ಲಿ ಆಧಾರ್ ಕಾರ್ಡ್ ಇದ್ದ ಕಾರಣ ಆತನ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…

ಅಪರಿಚಿತ ಮಹಿಳೆ ಶವ ಪತ್ತೆ: ಕೊಲೆ ಶಂಕೆ
ಹಾಸನ

ಅಪರಿಚಿತ ಮಹಿಳೆ ಶವ ಪತ್ತೆ: ಕೊಲೆ ಶಂಕೆ

July 25, 2018

ಹೊಳೆನರಸೀಪುರ: ಅಪರಿಚಿತ ಮಹಿಳೆ ಶವ ಜಕ್ಕವಳ್ಳಿಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿದೆ. ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಮೇಲೆ ಹಸಿರು ಸೀರೆ, ಕೈಯಲ್ಲಿ ಹಚ್ಚೆ ಗುರುತುಗಳಿವೆ. ದುಷ್ಕರ್ಮಿಗಳು ಮಹಿಳೆಯನ್ನು ಬೇರೆಡೆ ಕೊಲೆಗೈದು ರಸ್ತೆ ಪಕ್ಕದ ಜಮೀನನಲ್ಲಿ ಬೀಸಾಡಿ ಹೋಗಿರಬುದು ಎನ್ನಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉದ್ಘಾಟನೆ ಮುನ್ನವೇ ಕುಸಿದ ಹಳೇಕೋಟೆ ಬಳಿಯ ಮೈಸೂರು-ಹಾಸನ ಹೆದ್ದಾರಿ ರೈಲ್ವೆ ಮೇಲ್ಸೇತುವೆ ತಡೆಗೋಡೆ
ಹಾಸನ

ಉದ್ಘಾಟನೆ ಮುನ್ನವೇ ಕುಸಿದ ಹಳೇಕೋಟೆ ಬಳಿಯ ಮೈಸೂರು-ಹಾಸನ ಹೆದ್ದಾರಿ ರೈಲ್ವೆ ಮೇಲ್ಸೇತುವೆ ತಡೆಗೋಡೆ

July 22, 2018

ಹೊಳೆನರಸೀಪುರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೂ ಆದ ಹೆಚ್.ಡಿ.ರೇವಣ್ಣನವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರೀ ಕಾಮಗಾರಿಗಳು ಕಳಪೆಯಿಂದ ಕೂಡಿವೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಲಾರಂಭಿಸಿದೆ. ಹಳೇಕೋಟೆಯ ಹಂಗರಹಳ್ಳಿ ಬಳಿಯ ಮೈಸೂರು-ಹಾಸನ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇದಕ್ಕೆ ಸಾಕ್ಷಿಯಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರೇ ಈ ಬಗ್ಗೆ ಕಿಡಿಕಾರಿದ್ದಾರೆ. ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮೇಲ್ಸೇತುವೆಯ ತಡೆಗೋಡೆ ಕುಸಿಯುತ್ತಿದ್ದು, ಕಾಮಗಾರಿಯ…

ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ
ಹಾಸನ

ಜವರಿಕೊಪ್ಪಲಿನಲ್ಲಿ ಗುಂಪು ಘರ್ಷಣೆ

July 14, 2018

ಹೊಳೆನರಸೀಪುರ: ಹಳ್ಳಿ ಮೈಸೂರು ಹೋಬಳಿ, ದೊಡ್ಡಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜವರಿ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ 2 ವರ್ಷಗಳೇ ಕಳೆದಿದ್ದರೂ, ನಿರ್ಮಾಣಕ್ಕೆ ಕಾಲ ಕೂಡಿಬಂದಿಲ್ಲ. ಇದಕ್ಕೆ ನಿಗದಿತ ಜಾಗದ ವಿಚಾರವಾಗಿ ನಡೆಯುತ್ತಿರುವ ಜಟಾ ಪಟಿಯೇ ಪ್ರಮುಖ ಕಾರಣವಾಗಿದೆ. ಇದೇ ವಿಚಾರ ಇಂದೂ ಸಹ ಗ್ರಾಮ ದಲ್ಲಿ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದು, ಘರ್ಷಣೆಗೂ ಕಾರಣವಾಗಿದೆ. ವಿಷಯ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಹಳ್ಳಿಮೈಸೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಶಕುಂತಲಾ ಹಾಗೂ…

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ
ಹಾಸನ

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ

July 12, 2018

ಹೊಳೆನರಸೀಪುರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ಹೊಳೆನರಸೀಪುರದಲ್ಲಿ ಸಾರ್ವಜನಿಕರಿಂದ 190ಕ್ಕೂ ಅಧಿಕ ಕುಂದು-ಕೊರತೆಗಳ ಅರ್ಜಿ ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಅವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎಲ್ಲಾ ತಾಲೂಕುಗಳಂತೆ ಹೊಳೆನರಸೀಪುರದಲ್ಲಿ ಭೂಮಿಗೆ ಸಂಬಂಧಿ ಸಿದ ಮನವಿಗಳೇ ಹೆಚ್ಚಾಗಿ ಬಂದವು ಪೋಡಿ, ಸರ್ವೆ, ಹದ್ದುಬಸ್ತು, ಜಮೀನು ಮಂಜೂರಾತಿ, ಅಕ್ರಮ ಸಕ್ರಮ, ಕೆರೆ ಜಾಗ, ದಾಖಲಾತಿ ಸರಿಪಡಿಸುವುದು ಹೀಗೆ ಹತ್ತಾರು ಮನವಿಗಳು ಬಂದವು. ಹೇಮಾವತಿ ಯೋಜನಾ…

ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ
ಹಾಸನ

ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ

July 9, 2018

ಹೊಳೆನರಸೀಪುರ: ವಿದ್ಯೆ ಮತ್ತು ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ ಎಂದು ಟಿ.ಮಾಯಗೌಡನಹಳ್ಳಿಯ ರಾಜಾಪುರ ಮಠದ ಸೋಮಶೇಖರ ಶ್ರೀ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ ಬಸವ ಭವನದಲ್ಲಿ ತಾಲೂಕು ವೀರಶೈವ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು . ನಾಗಾಲೋಟದಲ್ಲಿ ಸಾಗುತ್ತಿರವ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಕಠಿಣವಾಗಿರುತ್ತದೆ. ವಿದ್ಯಾರ್ಥಿಗಳ ಜೀವನ ಮಹತ್ವದ್ದಾಗಿದ್ದು, ಇಂತಹ ಸಮಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು, ದೇಶಕ್ಕೆ ಅನುಕೂಲವಾಗುವ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು….

ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ
ಹಾಸನ

ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ

July 7, 2018

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿ ಸಮೀಪದ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ಮುಂಜಾನೆ ಸಂಭವಿಸಿದ್ದು, ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದೆ. ಪಟ್ಟಣದ ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಾದ ಭಾಗ್ಯ, ಶಿವಣ್ಣ ದಂಪತಿ ತಾಲೂಕು ಕಚೇರಿ ಮುಂಭಾಗದಲ್ಲಿ ಹತ್ತಾರು ವರ್ಷದಿಂದ ಪೆಟ್ಟಿಅಂಗಡಿ ಇಟ್ಟು ಕೊಂಡು ಕಾಫಿ-ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವ್ಯವಹಾರವೇ ಜೀವನದ ಆದಾಯದ ಮೂಲವಾಗಿತ್ತು. ಇಂದು ಮುಂಜಾನೆ ಈ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಅಂಗಡಿ ಸುಟ್ಟು ಕರಕಲಾಗಿದೆ. ವ್ಯಾಪಾರದ…

ಮಾದಕವಸ್ತು ಸೇವನೆಯಿಂದ ಸಂಸಾರಗಳು ನಾಶ
ಹಾಸನ

ಮಾದಕವಸ್ತು ಸೇವನೆಯಿಂದ ಸಂಸಾರಗಳು ನಾಶ

June 29, 2018

ಹೊಳೆನರಸೀಪುರ: ‘ಕುಡಿತ, ಧೂಮಪಾನ, ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ಸಂಸಾರಗಳು ನಾಶವಾಗು ತ್ತದೆ’ ಎಂದು ಪಿಎಸ್‍ಐ ನಾಗಮ್ಮ ಹೇಳಿದರು. ತಾಲೂಕಿನ ದೊಡ್ಡಕಾಡನೂರು ಗ್ರಾಮದ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಬಗ್ಗೆ ಅರಿವು ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಭಯಾನಕ ರೋಗಗಳು ಬರುತ್ತವೆ. ದೇಶದಾದ್ಯಂತ ಸಾವಿರಾರು ಜನರು ಮಾದಕ ವಸ್ತುಗಳನ್ನು ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು…

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ
ಹಾಸನ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ

June 19, 2018

ಹೊಳೆನರಸೀಪುರ: ಎರಡು ವರ್ಷಗಳಿಂದ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಹಳ್ಳಿಮೈಸೂರು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಟ್ಟದಪುರ ಮೂಲದ ಹಳಿಯೂರು ಜಗ ಎಂಬಾತ ಬಂಧಿತ ಖದೀಮ. ಕಳೆದ 2ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂದಿದ್ದ. ಹಳ್ಳಿಮೈಸೂರು ಹೋಬಳಿ ಮತ್ತು ಅರಕಲಗೂಡು ಸುತ್ತ ಮುತ್ತ ತನ್ನ ಕೈಚಳಕ ತೋರಿದ್ದು, ಈತನ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದವು. ಬಂಧಿತನಿಂದ ಸರಗಳ್ಳತನದಿಂದ 273 ಗ್ರಾಂ. ಚಿನ್ನಾಭರಣ, 2 ಪಲ್ಸರ್ ಬೈಕ್, 5 ತಾಳಿ, ನೀರಿನ ಹಂಡೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಡಿವೈಎಸ್‍ಪಿ…

1 2 3 4
Translate »