ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ
ಹಾಸನ

ವಿದ್ಯೆ, ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ

July 9, 2018

ಹೊಳೆನರಸೀಪುರ: ವಿದ್ಯೆ ಮತ್ತು ವಿನಯದೊಂದಿಗೆ ಬದುಕು ರೂಪಿಸಿಕೊಳ್ಳಿ ಎಂದು ಟಿ.ಮಾಯಗೌಡನಹಳ್ಳಿಯ ರಾಜಾಪುರ ಮಠದ ಸೋಮಶೇಖರ ಶ್ರೀ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ತಾಲೂಕು ವೀರಶೈವ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು .

ನಾಗಾಲೋಟದಲ್ಲಿ ಸಾಗುತ್ತಿರವ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಕಠಿಣವಾಗಿರುತ್ತದೆ. ವಿದ್ಯಾರ್ಥಿಗಳ ಜೀವನ ಮಹತ್ವದ್ದಾಗಿದ್ದು, ಇಂತಹ ಸಮಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು, ದೇಶಕ್ಕೆ ಅನುಕೂಲವಾಗುವ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ನಾಗಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಶಿಸ್ತು ಸಹನೆ ಮತ್ತು ಆತ್ಮ ವಿಶ್ವಾಸವನ್ನು ಮೈಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ವಿದ್ಯಾಭ್ಯಾಸ ಎನ್ನುವುದು ಪ್ರತೀ ವ್ಯಕ್ತಿಯ ಜೀವನದ ಅತ್ಯಮೂಲ್ಯ ಕ್ಷಣಗಳು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದು ಗುರಿ ಸಾಧಿಸಿದರೆ ಇಡೀ ಸಮಾಜವೇ ಗುರುತಿಸುತ್ತದೆ ಎಂದರು. ಆಲೂರು ಕ್ಷೇತ್ರದ ಶಿಕ್ಷಣಾಧಿಕಾರಿ ಹೊನ್ನೇಶ್ ಕುಮಾರ್, ತಾಲೂಕು ವೀರಶೈವ ಸಂಘದ ಎಸ್.ಎನ್.ನಂಜಪ್ಪ, ಎಪಿಎಂಸಿ ಅಧ್ಯಕ್ಷ ಸಾಂಬಶಿವಪ್ಪ ಮಾತನಾಡಿದರು.

ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಹೆಚ್.ಎಸ್ ಪ್ರಭುಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಬಾಗೀವಾಳು ಬಸವರಾಜು, ಪುರಸಭಾ ಸದಸ್ಯ ಚೈತ್ರ ಇಂದ್ರ ಕುಮಾರ್, ಕಾರ್ಯದರ್ಶಿ ಸಂಗಮ್‍ನಾಥ್ ಹಾಗೂ ನೌಕರರ ಸಂಘದ ಪದಾಧಿಕಾರಿ ಗಳು, ಪೋಷಕರು ಹಾಜರಿದ್ದರು.

Translate »